ಕರ್ನಾಟಕದ ಮೂರು ನಗರದಲ್ಲಿ ಓಡಲಿದೆ ಮೊನೋ ರೈಲು

ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೊನೋ ರೈಲು ಯೋಜನೆಗೆ ಮೆಟ್ರೋ ಯೋಜನೆಗಿಂತ ಕಡಿಮೆ ವೆಚ್ಚವಾಗಲಿದೆ ಎಂದರು. ಆದ್ದರಿಂದ ಎರಡನೇ ದರ್ಜೆ ನಗರದಲ್ಲಿ ಮೊನೋ ರೈಲು ಯೋಜನೆ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು.
ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮೊನೋ ರೈಲು ಯೋಜನೆ ಪ್ರಾರಂಭಿಸಲು ಮಲೇಷಿಯಾ ಮೂಲದ ಕಂಪನಿ ಆಸಕ್ತಿ ತೋರಿದೆ. ನಗರದಲ್ಲಿ ಮೊದಲ ಹಂತದಲ್ಲಿ 30 ರಿಂದ 35 ಕಿ.ಮೀ.ಮೊನೋ ಮಾರ್ಗ ನಿರ್ಮಿಸಲು ಕಂಪನಿ ಉದ್ದೇಶಿಸಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ 20 ಕಿ.ಮೀ.ಯಿಂದ 25 ಕಿ.ಮೀ. ಮೊನೋ ಮಾರ್ಗ ನಿರ್ಮಿಸಲು ಕಂಪನಿ ಜೊತೆ ಪ್ರಾಥಮಿಕ ಹಂತದ ಮಾತುಕತೆ ನಡೆಸಲಾಗಿದೆ. ಮುಂದಿನ ತಿಂಗಳಿನಲ್ಲಿ ಯೋಜನೆಯ ಸ್ಪಷ್ಟ ಚಿತ್ರಣ ದೊರೆಯಲಿದೆ. ಮಂಗಳೂರು, ಬೆಳಗಾವಿಯಲ್ಲಿಯೂ ಯೋಜನೆ ಪ್ರಾರಂಭಿಸುವ ಚಿಂತನೆ ಇದೆ ಎಂದರು.
ಮೊನೋ ರೈಲಿಗೆ ಪ್ರತಿ ಕಿ.ಮೀ.ಗೆ ರೂ. 80 ರಿಂದ 100 ಕೋಟಿ ವೆಚ್ಚವಾಗುವ ಅಂದಾಜಿದೆ. ಭೂಮಿ ಸ್ವಾಧೀನ ಸೇರಿದರೂ 120 ಕೋಟಿ ಮೀರುವುದಿಲ್ಲ. ಆದರೆ ಈ ಬಗ್ಗೆ ಸಂಪೂರ್ಣ ವಿನ್ಯಾಸ ಹಾಗೂ ಸಮಗ್ರ ವರದಿ ಪಡೆದ ಮೇಲಷ್ಟೇ ಎಲ್ಲ ವಿವರ ಬಹಿರಂಗಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮೂಲಸೌಕರ್ಯ ಇಲಾಖೆಯ 14 ಯೋಜನೆಗಳಲ್ಲಿ 2 ಪೂರ್ಣಗೊಂಡಿದ್ದು, 12 ಪ್ರಗತಿಯಲ್ಲಿವೆ. ಈ ಪೈಕಿ ಹೆಚ್ಚಿನವು ರೈಲ್ವೆ ಇಲಾಖೆಯೊಂದಿಗೆ ಶೇ.50 ಪಾಲುದಾರಿಕೆಯಲ್ಲಿ ಒಪ್ಪಂದ ಮಾಡಿಕೊಂಡದ್ದಾಗಿವೆ. ರೈಲ್ವೆ ಇಲಾಖೆಗೆ ಕಾಲಮಿತಿಯಲ್ಲಿ ಭೂಸ್ವಾಧೀನ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.












Click it and Unblock the Notifications