ಹೊಸ ಹೊರ್ಷಕ್ಕೆ ಹಾಲಿನ ಪೌಡರ್ ಡಬ್ಬಾದಲ್ಲಿ ಮಾದಕ ವಸ್ತು ಸರಬರಾಜು!

ಬೆಂಗಳೂರು, ಡಿ. 16: ಡ್ರಗ್ ಪತ್ತೆ ಮಾಡುವುದೊಂದೇ ಪೊಲೀಸ್ ಕೆಲಸ ಎಂದು ಭಾವಿಸಿರುವ ಬೆಂಗಳೂರು ನಗರ ಪೊಲೀಸರು ಡ್ರಗ್ ಪ್ರಕರಣಗಳಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಹೊಸ ಹೊಸ ಅವತಾರದಲ್ಲಿ ರಾಜಧಾನಿಗೆ ವಿದೇಶದಿಂದ ಡ್ರಗ್ ಪೂರೈಕೆ ಆಗುತ್ತಿದೆ. ನೂತನ ವರ್ಷದ ಸಂಭ್ರಮಾಚರಣೆಗೆ ಇದೀಗ ಹಾಲಿನ ಡಬ್ಬಾಗಳಲ್ಲಿ ಮಾದಕ ವಸ್ತು ಎಂಟ್ರಿಕೊಟ್ಟಿರುವ ಸ್ಫೋಟಕ ಸಂಗತಿ ಬಯಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ಬಿದ್ದಿತ್ತು. ಈ ವರ್ಷ ಕೊರೊನಾ ಭೀತಿ ಇದ್ದರೂ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಹೀಗಾಗಿ ಹೊಸ ವರ್ಷದ ಸಂಭ್ರಮ ಜೋರಾಗಿಯೇ ಇರುವ ಲಕ್ಷಣ ಗೋಚರಿಸುತ್ತಿದೆ. ಇದರ ಬೆನ್ನಲ್ಲೇ ರಾಜಧಾನಿಯಲ್ಲಿ ಮಾದಕ ವಸ್ತುಗಳಿಗೆ ಬಹು ಬೇಡಿಕೆ ಹುಟ್ಟಿಕೊಂಡಿದೆ. ಮಾದಕ ವ್ಯಸನಿಗಳ ನಶೆಯೇರಿಸಲು ಡ್ರಗ್ ಪೆಡ್ಲರ್ ಗಳು ಹೊಸ ಹಾದಿ ಹಿಡಿದಿದ್ದಾರೆ.

ಹಾಲಿನ ಪೌಡರ್ ನಲ್ಲಿ ಎಂಟ್ರಿ:

ಮಕ್ಕಳ ಸೇವನೆಗೆ ಕೊಡುವ ಹಾಲಿನ ಪೌಡರ್ ಡಬ್ಬಾಗಳಲ್ಲಿ ಲಕ್ಷಾಂತರ ಬೆಲೆ ಬಾಳುವ ಮಾದಕ ವಸ್ತುಗಳನ್ನು ವಿದೇಶದಿಂದ ತರಿಸುವ ಜಾಲವೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಹಾಲಿನ ಪೌಡರ್ ಡಬ್ಬಾಗಳಲ್ಲಿ ಎಂಡಿಎಂಎ ಕ್ರಿಸ್ಟಲ್ ಇಟ್ಟು ಬೆಂಗಳೂರಿಗೆ ತರಿಸಿದ್ದ ಡ್ರಗ್ ಪೆಡ್ಲರ್‌ನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಒಬೆಡ್ ಒಕೆಚುವಾ ಒಲೇಫರ್ ಬಂಧಿತ ಅರೋಪಿ. ಈತನಿಂದ 260 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ 110 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಯಾರಿಗೂ ಅನುಮಾನ ಬಾರದಂತೆ ಹಾಲಿನ ಪೌಡರ್ ಡಬ್ಬಾದಲ್ಲಿ ಇರಿಸಿ ಈ ಮಾದಕ ವಸ್ತುಗಳನ್ನು ವಿದೇಶದಿಂದ ತರಿಸಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಬಂಧಿತನಿಂದ ಸುಮಾರು ಹತ್ತು ಲಕ್ಷ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ.

Govindapur Police bust Drug dealing network supplying through Milk Box

ವಿದೇಶದಿಂದ ಮಾದಕ ವಸ್ತುಗಳನ್ನು ವಿದೇಶಿ ಅಂಚೆ ಮೂಲಕ ತರಿಸುತ್ತಿದ್ದರು. ಡಾರ್ಕ್ ವೆಬ್ ತಾಣದಲ್ಲಿ ಬುಕ್ ಮಾಡಿ ವಿದೇಶಿ ಅಂಚೆ ಕಚೇರಿ ಮೂಲಕ ಮಾದಕ ವ್ಯಸನಿಗಳಿಗೆ ರವಾನಿಸಲಾಗುತ್ತಿತ್ತು. ಎನ್‌ಸಿಬಿ ಅಧಿಕಾರಿಗಳು ಕೇರಳದ ಡ್ರಗ್ ಪ್ರಕರಣ ಪತ್ತೆ ಮಾಡಿದ್ದರು. ಆ ನಂತರ ದೇಶದಲ್ಲಿಡೆ ಡ್ರಗ್ ವಿರುದ್ಧ ಕಾರ್ಯಾಚರಣೆ ಆರಂಭವಾಯಿತು. ಅದರಲ್ಲಿ ಕರ್ನಾಟಕದಲ್ಲಿ ಮಾದಕ ಲೋಕಕ್ಕೂ ಸ್ಯಾಂಡಲ್‌ವುಡ್‌ಗೂ ಇರುವ ಸಂಬಂಧವನ್ನು ಸಿಸಿಬಿ ಪೊಲೀಸರು ಬಯಲು ಮಾಡಿದ್ದರು. ಹಲವಾರು ವಿದೇಶಿ ಡ್ರಗ್ ಪೆಡ್ಲರ್‌ಗಳು ಬಂಧನಕ್ಕೆ ಒಳಗಾಗಿದ್ದರು. ಮಾದಕ ವಸ್ತು ಹಾಗೂ ವಿದೇಶಿ ಅಂಚೆ ಕಚೇರಿಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಡ್ರಗ್ ಪೆಡ್ಲರ್‌ಗಳು ಇದೀಗ ಹೊಸ ಹಾದಿ ಕಂಡುಕೊಂಡಿದ್ದಾರೆ.

ಮಕ್ಕಳ ಆಟಿಕೆ ಟಾರ್ಗೆಟ್ :

ಸಾಮಾನ್ಯವಾಗಿ ಭಾರತಕ್ಕೆ ವಿದೇಶದಿಂದ ಬರುವ ಮಕ್ಕಳ ಅಟಿಕೆ ಹಾಗೂ ಹಾಲು ಉತ್ಪನ್ನಗಳಲ್ಲಿ ಇದೀಗ ಮಾದಕ ವಸ್ತು ಸಾಗಣೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಮಕ್ಕಳ ಉತ್ಪನ್ನಗಳನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸುವ ವೇಳೆ ತಪ್ಪಿಸಿಕೊಳ್ಳಬಹುದು. ಇನ್ನು ಸ್ಥಳೀಯ ಪೊಲೀಸರು ಕೂಡ ಮಾನವೀಯ ನೆಲೆಯಲ್ಲಿ ಮಕ್ಕಳ ಉತ್ಪನ್ನಗಳ ಸಾಗಣೆಗೆ ಅಡ್ಡಿ ಪಡಿಸುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಡ್ರಗ್ ಪೆಡ್ಲರ್‌ಗಳು ಇದೀಗ ಹಾಲಿನ ಉತ್ಪನ್ನ, ಮಕ್ಕಳ ಆಟಿಕೆ, ಮಕ್ಕಳ ಚಪ್ಪಲಿ, ಬಟ್ಟೆಗಳಲ್ಲಿ ಮಾದಕ ವಸ್ತು ಸಾಗಣೆ ಮಾಡಿ ಮಾರಾಟ ಮಾಡುವ ಹೊಸ ಹಾದಿ ಹಿಡಿದಿದ್ದಾರೆ.

Govindapur Police bust Drug dealing network supplying through Milk Box

ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಪೊಲೀಸರು ವಿದೇಶಿ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ ವೇಳೆ ಹಾಲಿನ ಪೌಡರ್ ಡಬ್ಬಾಗಳಲ್ಲಿ ಬರೋಬ್ಬರಿ ಹತ್ತು ಲಕ್ಷ ರೂ. ಮೌಲ್ಯದ ಮಾದಕ ವಸ್ತು ತರಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಡ್ರಗ್ ಪೆಡ್ಲರ್ ಗಳ ಈ ಐಡಿಯಾ ನೋಡಿ ಪೊಲೀಸರೇ ಗಾಬರಿಯಾಗಿದ್ದಾರೆ. ಹೊಸ ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ದೊಡ್ಡ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ. ಈ ಪಾರ್ಟಿಗಳಲ್ಲಿ ಪಾಲ್ಗೊಳ್ಳುವರಿಗೆ ಮಾದಕ ವಸ್ತು ಪೂರೈಕೆ ಮಾಡಲು ಡ್ರಗ್ ಪೆಡ್ಲರ್‌ಗಳು ಮಾದಕ ಹೊಸ ಹಾದಿ ಮೂಲಕ ವಿದೇಶದಿಂದ ಡ್ರಗ್ ತರಿಸುತ್ತಿದ್ದಾರೆ. ಸದ್ಯ ಒಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಈಗಾಗಲೇ ಅದೆಷ್ಟು ಮೌಲ್ಯದ ಮಾದಕ ವಸ್ತು ಬೆಂಗಳೂರಿಗೆ ಎಂಟ್ರಿಯಾಗಿದೆಯೋ ದೇವರೇ ಬಲ್ಲ!

Recommended Video

      ಇದೇ ನೋಡಿ ಲಕ್ನೋ ತಂಡದ ಪ್ಲೇಯಿಂಗ್ 11 !! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+