ಖಾಸಗಿ ವಾಹನಗಳ ಅನಾಚಾರಗಳಿಗೆ ತೆರೆ ಬೀಳಲಿದೆಯಾ?

ಬೆಂಗಳೂರು, ಅಕ್ಟೋಬರ್, 13 : ಕೆಲವು ದಿನಗಳ ಹಿಂದೆ ನಗರದಲ್ಲಿ ನಡೆದ ಅತ್ಯಾಚಾರ ಹಿನ್ನೆಲೆಯಲ್ಲಿ ಇದೀಗ ಎಚ್ಚರಗೊಂಡ ಸರ್ಕಾರ ಎಲ್ಲಾ ಪ್ರಕಾರ್ದ ಖಾಸಗಿ ವಾಹನಗಳಿಗೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಅಳವಡಿಸಲು ಮುಂದಾಗಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಖಾಸಗಿ ವಾಹನಗಳಾದ ಮ್ಯಾಕ್ಸಿ ಕ್ಯಾಬ್, ಟಿಟಿ, ಸಿಟಿ ಟ್ಯಾಕ್ಸಿ, ಕಾಂಟ್ರಾಕ್ಟ್ ಆಧಾರಿತ ವಾಹನಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಿದ್ದು, ಇವುಗಳ ಕಾರ್ಯ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲಿದೆ.[ಬೆಂಗಳೂರು : ಕಾಲ್ ಸೆಂಟರ್ ಉದ್ಯೋಗಿ ಮೇಲೆ ಗ್ಯಾಂಗ್ ರೇಪ್]

Government will plan apply a GPS (Global Positioning System) in private vehicles

ಈಗಾಗಲೇ ಆಪ್ ಆಧಾರಿದ ಕಾರುಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅದರಂತೆ ಪ್ರತಿ ಖಾಸಗಿ ವಾಹನಗಳಿಗೂ ಈ ವ್ಯವಸ್ಥೆ ಜಾರಿಗೆ ತಂದು ಪ್ರತಿವಾಹನಕ್ಕೆ 300-400 ರೂ ಶುಲ್ಕ ವಿಧಿಸುವ ಆಲೋಚನೆ ಇದೆ. ಹಾಗಾಗಿ ವಾಹನ ಮಾಲಿಕರ ಸಂಘಗಳ ಪದಾಧಿಕಾರಿಗಳು, ಇದರ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲು ಇಚ್ಛಿಸುವ ಕಂಪನಿಗಳ ಸಭೆ ಕರೆದು ನಿರ್ಣಯಿಸಲಾಗುವುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದ್ದಾರೆ.

ಜಿಪಿಎಸ್ ನಿರ್ವಹಣೆ ಹೇಗೆ?

ಜಿಪಿಎಸ್ ಅಳವಡಿಸಿದ ಮೇಲೆ ಈ ಯಂತ್ರದಿಂದ ದೊರೆಯುವ ಸಿಗ್ನಲ್ ಗಳ ಆಧಾರದ ಮೇಲೆ ವಾಹನಗಳು ಎಲ್ಲೆಲ್ಲಿ ಹೋಗುತ್ತದೆ ಎಂಬ ಸಂಪೂರ್ಣ ಮಾಹಿತಿ ನಿರ್ವಹಣಾ ಅಧಿಕಾರಿಗಳಿಗೆ ದೊರೆಯಲಿದೆ. ಇದರಿಂದ ದುಷ್ಕರ್ಮಿಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+