NICE Road: ನೈಸ್‌ ರಸ್ತೆಯಲ್ಲಿ ಸಾಗುವ ವಾಹನ ಸವಾರರ ಗಮನಕ್ಕೆ

ಬೆಂಗಳೂರು, ಜುಲೈ 18: ನೈಸ್ ರಸ್ತೆಯಲ್ಲಿ ಸಂಚಾರ ನಡೆಸುವ ವಾಹನ ಸವಾರರಿಗೆ ಎಚ್ಚರಿಕೆಯೊಂದನ್ನು ನೀಡಲಾಗಿದೆ. ಏರ್‌ಪೋರ್ಟ್‌ ರಸ್ತೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾದರಿಯಲ್ಲಿ ನೈಸ್ ರಸ್ತೆಯಲ್ಲಿ ಸಹ ಇನ್ನು ಮುಂದೆ ದಂಡವನ್ನು ವಿಧಿಸಲಾಗುತ್ತದೆ.

ನೈಸ್ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು, ದಂಡ ಹಾಕಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಕ್ಯಾಮರಾ ಕಣ್ಗಾವಲು ಇಡಲಾಗುತ್ತದೆ. ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವವರಿಗೆ ಮೊದಲು ದಂಡ ಹಾಕಲಾಗುತ್ತದೆ.

Government school children in Karnataka will get eggs every day

ಅತಿ ವೇಗದ ವಾಹನ ಚಾಲನೆ, ವಾಹನ ಚಾಲನೆ ಮಾಡುವಾಗ ನಿರ್ಲಕ್ಷ್ಯದ ಕಾರಣ ನೈಸ್ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ವಾಹನ ಸವಾರರ ಮೇಲೆ ಕಣ್ಣಿಡಲು ತೀರ್ಮಾನಿಸಲಾಗಿದೆ. ಶೀಘ್ರವೇ ಕ್ಯಾಮರಾ ಆಳವಡಿಕೆ ಮಾಡಲಾಗುತ್ತದೆ.

ಸರಣಿ ಅಪಘಾತ: ಎರಡು ದಿನಗಳ ಹಿಂದೆ ನೈಸ್ ರಸ್ತೆಯ ಬಸಪುರ ಸೇತುವೆ ಬಳಿ ಸರಣಿ ಅಪಘಾತ ನಡೆದಿತ್ತು. ಇದರಿಂದಾಗಿ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಆದ್ದರಿಂದ ಸಂಚಾರಿ ಪೊಲೀಸರು ನೈಸ್ ರಸ್ತೆಯಲ್ಲಿ ವಾಹನಗಳ ಸಂಚಾರದ ಮೇಲೆ ನಿಗಾ ವಹಿಸಲು ತೀರ್ಮಾನಿಸಿದ್ದಾರೆ.

ಅಲೋಕ್ ಕುಮಾರ್ ಟ್ವೀಟ್‌: ಈ ಕುರಿತು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಸಂಚಾರ ಮತ್ತು ಸುರಕ್ಷತೆ) ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ. "ಶೀಘ್ರದಲ್ಲಿಯೇ ಪಥ ಶಿಸ್ತನ್ನು ನೈಸ್ ಜಾರಿಗೊಳಿಸಿ, ನೈಸ್ ರಸ್ತೆಯಲ್ಲಿ ಮಿತಿಮೀರಿದ ವೇಗಕ್ಕೆ ಕಡಿವಾಣ ಹಾಕಲಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

ರಡಾರ್ ಎಂಬೆಡ್‌ ಎಎನ್‌ಪಿಆರ್ ಕ್ಯಾಮರಾಗಳನ್ನು ನೈಸ್ ರಸ್ತೆಯಲ್ಲಿ ಅಳವಡಿಕೆ ಮಾಡಲಾಗುತ್ತದೆ. ಇದರಿಂದಾಗಿ ಅತಿ ವೇಗದ ವಾಹನಗಳನ್ನು ಪತ್ತೆ ಹಚ್ಚಿ, ದಂಡದ ನೋಟಿಸ್ ಅನ್ನು ಅವರಿಗೆ ಕಳಿಸಲು ಅನುಕೂಲವಾಗಲಿದೆ. ಈಗಾಗಲೇ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಈ ಮಾದರಿ ಕ್ಯಾಮರಾಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ.

ಬೆಂಗಳೂರು ಸಂಚಾರಿ ಪೊಲೀಸರು ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿಯೂ ಇದೇ ಮಾದರಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿದ್ದಾರೆ. ವಾಹನ ಸವಾರರ ಮೇಲೆ ಇವುಗಳು ಕಣ್ಣಿಟ್ಟಿವೆ. ಈಗ ನೈಸ್ ರಸ್ತೆಯಲ್ಲಿಯೂ ಇದೇ ಮಾದರಿಯನ್ನು ಅಳವಡಿಕೆ ಮಾಡಲಾಗುತ್ತದೆ.

ನೈಸ್ ರಸ್ತೆಯಲ್ಲಿ ಮೀತಿ ಮೀರದ ವೇಗದ ಚಾಲನೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಧರಿಸದಿರುವುದು, ಪಥ ಅಶಿಸ್ತಿನ ವಾಹನ ಚಾಲನೆ ಪ್ರಕರಣಗಳನ್ನು ಪತ್ತೆ ಹಚ್ಚಿ ವಾಹನ ಚಾಲಕರಿಗೆ ದಂಡವನ್ನು ವಿಧಿಸಲಾಗುತ್ತದೆ.

ಎಎನ್‌ಪಿಆರ್ ಕ್ಯಾಮರಾಗಳು ಅತಿ ವೇಗದ ಚಾಲನೆ ಹೊರತುಪಡಿಸಿ ಬೇರೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚುತ್ತವೆ. ಈಗ ರಸ್ತೆಯಲ್ಲಿ ಅತಿ ವೇಗದ ಚಾಲನೆ ಪ್ರಕರಣ ಪತ್ತೆ ಹಚ್ಚಲು ಸ್ಪೀಡ್ ರಡಾರ್‌ಗನ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ.

ಪ್ರಸ್ತುತ 100 ಕಿ. ಮೀ. ವೇಗದಲ್ಲಿ ನೈಸ್ ರಸ್ತೆಯಲ್ಲಿ ವಾಹನಗಳನ್ನು ಸಂಚಾರ ನಡೆಸಬಹುದು. ನಿಧಾನವಾಗಿ ಚಲಿಸುವ ವಾಹನಗಳು ಪೂರ್ಣ ಎಡಪಥ, ಮಧ್ಯಮ ವೇಗದ ವಾಹನಗಳು ಮಧ್ಯಮಪಥ, ಹೆಚ್ಚಿನ ವೇಗದಲ್ಲಿ ಸಾಗುವ ವಾಹನ ಬಲಪಥದಲ್ಲಿ ಸಾಗಬೇಕು ಎಂದು ನಿಯಮ ರೂಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+