ಜನಕ್ಕೆ ಮಾತ್ರ ಟ್ಯಾಕ್ಸ್...ಸರ್ಕಾರಕ್ಕೆ ಇಲ್ವಾ?: 7 ಕೋಟಿ ಸೇವಾ ಶುಲ್ಕ ಬಾಕಿ ಉಳಿಸಿಕೊಂಡಿವೆ ವಿಧಾನಸೌಧ-ವಿಕಾಸ ಸೌಧ!
ಬೆಂಗಳೂರು, ಜುಲೈ. 26: ಆಸ್ತಿ ತೆರಿಗೆ ಸುಸ್ತಿದಾರರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ರಾಜ್ಯ ರಾಜಧಾನಿಯ ಎರಡು ಪ್ರಧಾನ ಕಟ್ಟಡಗಳು ಇನ್ನೂ ಸೇವಾ ಶುಲ್ಕದ ಬಾಕಿ ಪಾವತಿಸಿಲ್ಲ. ಇಲ್ಲಿಯೇ ಮಂತ್ರಿಗಳು ಮತ್ತು ಅಧಿಕಾರಿಗಳು ಕುಳಿತು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ವ್ಯಂಗ್ಯವನ್ನಾಗಿಸಿದೆ.
ಹೌದು... ಮಂತ್ರಿಗಳು, ಅಧಿಕಾರಿಗಳು ರಾಜ್ಯದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಧಾನಸೌಧ ಮತ್ತು ವಿಕಾಸ ಸೌಧಗಳೇ ಈಗ ಸುದ್ದಿಯಲ್ಲಿವೆ. ಎರಡು ಕಟ್ಟಡಗಳ ಸೇವಾ ಶುಲ್ಕ ಕಟ್ಟಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) 15 ವರ್ಷಗಳಿಂದ ಸೇವಾ ಶುಲ್ಕ ಕಟ್ಟಿಲ್ಲ ಅದು 7 ಕೋಟಿ ರೂಪಾಯಿಯಾಗಿದೆ. ವಿಧಾನಸೌಧಕ್ಕೆ 2.29 ಕೋಟಿ ಹಾಗೂ ವಿಕಾಸ ಸೌಧದಿಂದ 5.32 ಕೋಟಿ ಸೇವಾ ಶುಲ್ಕ ಬಾಕಿ ಇದೆ.

2008-09 ರಿಂದ 2015-16 ರವರೆಗೆ ವಿಧಾನಸೌಧ ವಾರ್ಷಿಕವಾಗಿ 11,10,876 ರೂ.ಗಳನ್ನು ಪಾವತಿಸಬೇಕಾಗಿತ್ತು, ನಂತರ 2016-17 ರಿಂದ 2020-21 ರವರೆಗೆ ದಂಡದೊಂದಿಗೆ 13,88,595 ರೂಪಾಯಿ ನೀಡಬೇಕಿತ್ತು. ನಂತರ 2021-22 ರಿಂದ 2023-24 ರವರೆಗೆ 19,9,704 ರೂಪಾಯಿ ನೀಡಬೇಕು.
ವಿಧಾನಸೌಧದ ವಿಷಯಕ್ಕೆ ಬಂದರೆ, 2008-09 ರಿಂದ 2015-16 ರವರೆಗೆ 27,74,984 ರೂ.ಗಳ ಬಾಕಿಯನ್ನು ಸರ್ಕಾರ ಪಾವತಿಸಬೇಕಾಗಿತ್ತು, ಇದು ನಂತರ 2020-21 ರವರೆಗೆ 34,68,730 ರೂ.ಗಳಿಗೆ ಮತ್ತು ನಂತರ 2021-22 ರಿಂದ 2023-24ಕ್ಕೆ 34,96,480 ರೂಪಾಯಿಗೆ ಏರಿದೆ.

''ವಿಕಾಸ ಸೌಧಕ್ಕೆ ಸರ್ಕಾರದಿಂದ ಬಾಕಿ ಉಳಿದಿರುವ ಮೊತ್ತ 5,00,32,962 ಮತ್ತು ವಿಧಾನಸೌಧಕ್ಕೆ 2,00,29,095 ರೂಪಾಯಿಗಳನ್ನು ಪಾವತಿಸಬೇಕು. ವಿಶೇಷ ನಿಬಂಧನೆಗಳ ಅಡಿಯಲ್ಲಿ, ಎಲ್ಲಾ ಸರ್ಕಾರಿ (ಕೇಂದ್ರ ಮತ್ತು ರಾಜ್ಯ) ಕಟ್ಟಡಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಯಿತು. ಆದರೆ ಅವರು ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ".
ಇನ್ನು, ಪ್ರಕರಣದ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು, "ಎಲ್ಲಾ ಸರ್ಕಾರಿ ಕಚೇರಿಗಳು ಪಾವತಿಸುತ್ತಿರುವಾಗ, ನಾವು ಯಾವುದೇ ಸರ್ಕಾರಿ ಏಜೆನ್ಸಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ. ಜುಲೈ 31 ಕೊನೆಯ ದಿನವಾಗಿದ್ದು, ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಬಿಎಂಪಿ ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ನೋಟಿಸ್‌ಗಳನ್ನು ಕಳುಹಿಸಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications