ಸರ್ಕಾರದ ಪ್ಲ್ಯಾನ್‌ನಿಂದ ಈ ಭಾಗದಲ್ಲಿ ಭೂಮಿ ಬೆಲೆ ಬಲು ದುಬಾರಿ! ಆಸ್ತಿದಾರರಿಗೆ ಧಮಾಕ!

ಕರ್ನಾಟಕ ಸರ್ಕಾರವು ತೆಗೆದುಕೊಂಡಿರುವ ಒಂದು ಕ್ರಮದಿಂದಾಗಿ ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಭೂಮಿಗೆ ಭರ್ಜರಿ ಆದಾಯ ಬಂದಿದೆ. ಹೌದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ತೆಗೆದುಕೊಳ್ಳುತ್ತಿರುವ ಕೆಲವೊಂದು ಪ್ರಮುಖ ನಿರ್ಧಾರಗಳು ಹಾಗೂ ರಾಜ್ಯ ಸರ್ಕಾರದ ಅಧಿಸೂಚನೆಗಳಿಂದಾಗಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಭೂಮಿಗೆ ಬಂಪರ್‌ ಬೆಲೆ ಬಂದಿದೆ. ಇದೀಗ ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಜಿಲ್ಲೆಯ ಬೆಲೆ ಏಕಾಏಕಿ ಹೆಚ್ಚಳವಾಗಿದೆ. ರಿಯಲ್‌ ಎಸ್ಟೇಟ್‌ ಬೂಸ್ಟ್‌ ಆಗಿದ್ದು. ಬೆಂಗಳೂರಿನೊಂದಿಗೆ ಈ ಪ್ರದೇಶವೂ ಭರ್ಜರಿ ಅಭಿವೃದ್ಧಿಯಾಗುವ ಸಾಧ್ಯತೆ ಇದೆ ಅಂತಲೇ ಹೇಳಲಾಗುತ್ತಿದೆ. ಅದೇನು ಎನ್ನುವ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ಕರ್ನಾಟಕ ಸರ್ಕಾರವು ತೆಗೆದುಕೊಂಡಿರುವ ಒಂದು ಸಣ್ಣ ನಿರ್ಧಾರದಿಂದಾಗಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದೇ ರಾಮನಗರ ಜಿಲ್ಲೆ. ಹೌದು ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಯಿಸಿದ ಮೇಲೆ ರಾಮನಗರ / ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ರಿಯಲ್‌ ಎಸ್ಟೇಟ್‌ ಧಮಾಕ ಸೃಷ್ಟಿಯಾಗಿದೆ. ರಿಯಲ್‌ ಎಸ್ಟೇಟ್‌ ಚಿಗುರೊಡೆದಿದ್ದು. ಭೂಮಿಯ ಬೆಲೆ ಹೆಚ್ಚಳವಾಗಿದೆ. ರಿಯಲ್ ಎಸ್ಟೇಟ್‌ ಹಾಗೂ ಬ್ರ್ಯಾಂಡಿಂಗ್ ವಿಷಯಗಳು ಮ್ಯಾಟರ್‌ ಆಗುತ್ತವೆ. ಅದೇ ರೀತಿ ಬೆಂಗಳೂರು ದಕ್ಷಿಣ ಜಿಲ್ಲೆಗೂ ಧಮಾಕ ಬಂದಿದೆ.

Government action sparks land boom in south Bengaluru amp amp blow to property owners

ರಾಮನಗರ ಜಿಲ್ಲೆಯು (ನೂತನ ಬೆಂಗಳೂರು ದಕ್ಷಿಣ ಜಿಲ್ಲೆ) ಬೆಂಗಳೂರಿನಿಂದ ಕೇವಲ 50 ಕಿ. ಮೀ ದೂರದಲ್ಲಿದೆ. ಈ ರೀತಿ ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿದ್ದರೂ ಈ ಭಾಗದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬಂದಿರಲಿಲ್ಲ. ಆದರೆ, ಇದೀಗ ಹೆಸರು ಬದಲಾವಣೆಯಿಂದ ಬ್ರ್ಯಾಂಡ್‌ ವ್ಯಾಲ್ಯೂ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರೊಂದಿಗೆ ಮೂಲಸೌಕರ್ಯವೂ ಅಭಿವೃದ್ಧಿಯಾಗಬೇಕು ಎನ್ನುತ್ತಾರೆ ತಜ್ಞರು. ಮೂಲಸೌಕರ್ಯ ಅಭಿವೃದ್ಧಿ ಆಗದೆ ಇದ್ದರೆ ಭೂಮಿಗೆ ಒಳ್ಳೆಯ ಬೆಲೆ ಬರುವುದಕ್ಕೆ ತುಂಬಾ ಸಮಯವಾಗಲಿದೆ ಎನ್ನುವುದು ರಿಯಲ್‌ ಎಸ್ಟೇಟ್‌ ಪರಿಣಿತರ ಅಭಿಪ್ರಾಯವಾಗಿದೆ.

ರಾಮನಗರಕ್ಕೆ ಮೊದಲಿನಿಂದಲೂ ತನ್ನದೇ ಪ್ರಸಿದ್ಧಿ ಹಾಗೂ ಖ್ಯಾತಿ ಇದೆ. ಹಲವು ಹಿಂದಿ ಸಿನಿಮಾಗಳು ಸಹ ಇಲ್ಲಿ ಚಿತ್ರೀಕರಣ ಗೊಂಡಿವೆ. ಆದರೆ ಬ್ರ್ಯಾಂಡ್‌ ವ್ಯಾಲ್ಯೂ ಹೆಚ್ಚಾಗಿದ್ದು ಈಚೆಗೆ ಹೆಸರು ಬದಲಾವಣೆ ಆದ ಮೇಲೆಯೇ. ಇದರಿಂದ ಕನಕಪುರ ಮತ್ತು ಬಿಡದಿಯಂತಹ ಪ್ರದೇಶಗಳಲ್ಲಿ ಆಸ್ತಿ ಮೌಲ್ಯ ಹೆಚ್ಚಳವಾಗುತ್ತಿದೆ ಎಂದು ಹೇಳಲಾಗಿದೆ. ಈಗಾಗಲೇ ಬಿಡದಿಯಲ್ಲಿ ಟೌನ್‌ ಶಿಪ್‌ ಸಹ ನಿರ್ಮಾಣವಾಗುತ್ತಿರುವುದು ಹಾಗೂ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿ ನಿರ್ಮಾಣವಾಗಲಿರುವ ಪ್ಲಸ್‌ ಪಾಯಿಂಟ್ಸ್‌ ಇಲ್ಲಿದೆ.

ಈ ಭಾಗಕ್ಕೆ ಬಂಪರ್‌: ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡುವುದರಿಂದಾಗಿ ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲ್ಲೂಕು ಸೇರಿದಂತೆ ಈ ಜಿಲ್ಲೆಯ ಹಲವು ಪ್ರಮುಖ ಪ್ರದೇಶಗಳು ಹಾಗೂ ಬೆಂಗಳೂರಿಗೆ ಸಮೀಪವಾಗಿರುವ ಪ್ರದೇಶಗಳಲ್ಲಿ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಲಿದೆ ಅಂತಲೇ ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+