ಗೌರಿ ಲಂಕೇಶ್ ಹತ್ಯೆ, ಪ್ರಾಥಮಿಕ ವರದಿಯಲ್ಲೇನಿದೆ?
ಬೆಂಗಳೂರು, ಸೆಪ್ಟೆಂಬರ್ 06 : ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಸಂಭವನೀಯ ವರದಿಯನ್ನು ಗೃಹ ಸಚಿವರಿಗೆ ಸಲ್ಲಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುರೇಶ್ ಅವರು ಪ್ರಾಥಮಿಕ ವರದಿಯನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಿಸಿದ್ದಾರೆ. ಗೌರಿ ಹತ್ಯೆಗೆ 7.2 ಕಂಟ್ರೀ ಮೇಡ್ ಪಿಸ್ತೂಲ್ ಬಳಸಲಾಗಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ದುಷ್ಕರ್ಮಿಗಳು ಬ್ಯಾಕ್ ಟು ಬ್ಯಾಕ್ 7 ಬಾರಿ ಗೌರಿ ಅವರ ಮೇಲೆ ಗುಂಡು ಹಾರಿಸಿದ್ದು, ಮೂರು ಗುಂಡುಗಳು ಅವರ ದೇಹಕ್ಕೆ ಹೊಕ್ಕಿವೆ. ಇನ್ನುಳಿದ ನಾಲ್ಕು ಗುಂಡುಗಳು ಮೆನೆ ಗೋಡೆಗೆ ತಾಗಿವೆ ಎಂದು ವರದಿ ಹೇಳಿದೆ.
ಗೌರಿ ಅವರು ಆಫೀಸ್ ಮನೆ ಮಾರ್ಗದ ಮೊಬೈಲ್ ಸಿಗ್ನಲ್ ಹಾಗೂ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗೌರಿ ಅವರನ್ನು ಮಂಗಳವಾರ ಸಂಜೆ 7.30ರ ಸುಮಾರಿಗೆ ಅವರ ಮನೆ ಬಳಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.












Click it and Unblock the Notifications