ರಿಚ್‌ಮಂಡ್‌ ರಸ್ತೆಯಲ್ಲಿ ಹೊರಗೆ ನಿಲ್ಲಿಸಿದ್ದ ಕಾರಿಗೆ ಕನ್ನ

ಬೆಂಗಳೂರು, ಜನವರಿ 23: ನಗರದ ರಿಚ್‌ಮಂಡ್ ರಸ್ತೆಯಲ್ಲಿ ಖಾಸಗಿ ಕಂಪೆನಿಯ ಕಾಂಪೌಂಡ್ನಲ್ಲಿ ನಿಲ್ಲಿಸಿದ್ದ ಕಾರಿನ ವಿವಿಧ ಭಾಗಗಳನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ.

ಶಿವಯೋಗಿ ಎಂಬುವರಿಗೆ ಸೇರಿದ ಇಟಿಯೋಸ್ ಕಾರಿನ ನಾಲ್ಕೂ ಚಕ್ರಗಳನ್ನು ಕಳ್ಳರು ಬಿಚ್ಚಿಕೊಂಡು ಹೋಗಿದ್ದು ಅದರ ಜೊತೆಗೆ ಕಾರಿನ ಗ್ಲಾಸ್ ಒಡೆದು ಎಸಿ ಕಿಟ್, ಮ್ಯೂಸಿಕ್ ಸಿಸ್ಟಂ ಸಹ ದೋಚಿದ್ದಾರೆ.

ಮಧ್ಯರಾತ್ರಿ ಸಮಯ ಈ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದ್ದು, ನಾಲ್ಕು ಜನ ಕಾವಲು ಸಿಬ್ಬಂದಿ ಇದ್ದರೂ ಸಹ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

Goons theft parts of car in Richmond road

ವ್ಯವಸ್ಥಿತವಾಗಿ ಜಾಕ್ ರಾಡ್‌ಗಳನ್ನು ಇಟ್ಟು ಟೈರು ಬಿಚ್ಚಿದ್ದು, ಎಸಿ ಕಿಟ್ ಹಾಗೂ ಮ್ಯೂಸಿಕ್ ಸಿಸ್ಟಂ ಬಿಚ್ಚಲು ಸಹ ಉಪಯುಕ್ತ ಸಲಕರಣೆಗಳನ್ನು ಬಳಸಿದ್ದಾರೆ.

ನಗರದಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಹೊರಗೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಇಟ್ಟು ಕೆಲವು ದುಷ್ಕರ್ಮಿಗಳು ಅಟ್ಟಹಾಸ ಮೆರೆದು, ಸ್ಥಳಾವಕಾಶದ ಕೊರತೆಯಿಂದ ಮನೆ ಹೊರಗೆ ಕಾರು ನಿಲ್ಲಿಸುವ ನಗರವಾಸಿಗಳ ಆತಂಕಕ್ಕೆ ಕಾರಣರಾಗಿದ್ದರು. ಈಗ ಕಾರಿಗೆ ಕನ್ನ ಹಾಕಿರುವ ಪ್ರಕರಣ ಮತ್ತೆ ನಗರವಾಸಿಗಳ ನಿದ್ದೆಗೆ ಕೊಳ್ಳಿ ಇಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+