ಕಥಕ್ ದಂತಕತೆ ಸಿತಾರಾದೇವಿಗೆ ಗೂಗಲ್ ಗೌರವ
ಬೆಂಗಳೂರು-ನವೆಂಬರ್ 08: ಭಾರತೀಯ ಸುಪ್ರಸಿದ್ಧ ಕಥಕ್ ನೃತ್ಯ ಕಲಾವಿದೆ ಸಿತಾರಾ ದೇವಿಯವರ ಜನ್ಮ ದಿನ ಇಂದು. ಸಿತಾರಾ ಅವರು ತಮ್ಮ ನಾನಾ ನೃತ್ಯ ಪ್ರಕಾರಣಗಳಿಂದ ಜನರ ಮನಸ್ಸಿನೊಳಗೆ ಇಂದಿಗೂ ಹಾಸು ಹೊಕ್ಕಾಗಿದ್ದಾರೆ. ಈ ಬಾರಿಯ ವಿಶೇಷವೇನೆಂದರೆ ಅವರ ೯೭ನೇ ವರ್ಷದ ಜನ್ಮದಿನ ಅಂಗವಾಗಿ ಗೂಗಲ್‌ನಲ್ಲಿ ಸಿತಾರಾದೇವಿಯವರ ಡೂಗಲ್ ಹಾಕುವ ಮೂಲಕ ಗೌರವ ಸಲ್ಲಿಸಿದೆ.
ನವೆಂಬರ್ 8 1920ರಲ್ಲಿ ವಾರಣಾಸಿಯಲ್ಲಿ ಹುಟ್ಟಿದ ಅವರು ನಂತರದ ಜೀವನವನ್ನು ಕಲ್ಕತ್ತದಲ್ಲಿ ಮುಂದುವರೆಸಿದರು. ಕೇವಲ ಕಥಕ್ ನೃತ್ಯ ಮಾತ್ರವಲ್ಲದೆ ಭರತನಾಟ್ಯ, ಜನಪದ ನೃತ್ಯ, ರಷ್ಯನ್ ಬ್ಯಾಲೆ ಸೇರಿದಂತೆ ಇನ್ನತರೆ ನೃತ್ಯ ಪ್ರಕಾರವನ್ನು ಅರಿತಿದ್ದರು.

ರಾಷ್ಟ್ರಕವಿ ರವೀಂದ್ರನಾಥ್ ಠಾಕೂರ್ ಅವರು ಸಿತಾರಾ ದೇವಿ ಅವರ ನೃತ್ಯವನ್ನು ನೋಡಿ ನೃತ್ಯ ಸಾಮ್ರಾಜ್ಞಿ ಎಂದು ವರ್ಣಿಸಿದ್ದರು. ಉಷಾ ಹರಣ್, ವತನ್, ಅಂಜಲಿ , ಮದರ್ ಇಂಡಿಯಾ, ಹೋಲಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನೃತ್ಯ ಪ್ರದರ್ಶಿಸಿದ್ದರು. 2014 ನವೆಂಬರ್25ರಂದು ವಿಧಿವಶರಾದರು.
ಸಿತಾರಾ ದೇವಿ ಅವರಿಗೆ ದೊರೆತ ಪ್ರಶಸ್ತಿಗಳು:
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಕಾಳಿದಾಸ ಸಮ್ಮಾನ್, ನೃತ್ಯ ನಿಪುಣ ಪ್ರಶಸ್ತಿಗೆ ಭಾಜನಾರಿಗಿದ್ದ ಅವರು ಪದ್ಮ ಭೂಷಣ ಪ್ರಶಸ್ತಿಯನ್ನು ಕಾರಣಾಂತರಗಳಿಂದ ನಿರಾಕರಿಸಿದ್ದರು.












Click it and Unblock the Notifications