ಬೆಂಗಳೂರಲ್ಲಿ ದೇಶದಲ್ಲೇ ಆಸ್ತಿ ಮಾರಾಟಕ್ಕೆ ಬಂಪರ್ ಗುಡ್‌ನ್ಯೂಸ್!
ಆಸ್ತಿ ಮಾರಾಟ ಹಾಗೂ ಖರೀದಿ ವಿಚಾರದಲ್ಲಿ ಬೆಂಗಳೂರು ಹೊಸ ದಾಖಲೆ ಸೃಷ್ಟಿ ಮಾಡಿದೆ. ಹೌದು ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ಆಸ್ತಿ ಮಾರಾಟ ಹಾಗೂ ಖರೀದಿ ಪ್ರಮಾಣ ಇಡೀ ದೇಶದಲ್ಲೇ ಹೆಚ್ಚಳವಾಗಿದೆ. ಹೆಚ್ಚು ಪ್ರಮಾಣದಲ್ಲಿ ಆಸ್ತಿ ಮಾರಾಟವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಇತ್ತೀಚಿಗೆ ದೇಶದಲ್ಲಿ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಲಾಭ ಬರುತ್ತಿದೆ. ಇದರೊಂದಿಗೆ ಬೆಂಗಳೂರಿನಲ್ಲೂ ಆಸ್ತಿ ಮಾರಾಟದಲ್ಲಿ ಹೊಸ ದಾಖಲೆಗಳು ಸೃಷ್ಟಿ ಆಗಿವೆ. ದೇಶದಲ್ಲೇ 2023 -2024ನೇ ಸಾಲಿನಲ್ಲಿ ಒಟ್ಟಾರೆ ಮನೆ, ಜಮೀನು ಹಾಗೂ ಫ್ಲಾಟ್‌ಗಳ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ಕಳೆದ ವರ್ಷ ಬರೋಬ್ಬರಿ 65ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಬೆಂಗಳೂರಿನ ಪಾಲೇ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಆಸ್ತಿ ಮಾರಾಟ ಹೆಚ್ಚಳವಾಗುತ್ತಿದೆ. ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಯಾವ ರೀತಿ ಬಂಪರ್ ಆಗಿ ಸಾಗುತ್ತಿದೆ. ಇದಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಟ್ರಾಫಿಕ್‌ಜಾಮ್ ಸಮಸ್ಯೆ. ರಸ್ತೆ ಸರಿ ಇಲ್ಲ ಎನ್ನುವುದು ಸೇರಿದಂತೆ ವಿವಿಧ ಆರೋಪಗಳ ನಡುವೆಯೂ ಬೆಂಗಳೂರಿನಲ್ಲಿ ಆಸ್ತಿ ಮಾರಾಟದಲ್ಲಿ ಯಾವುದೇ ಕುಸಿತವಾಗಿಲ್ಲ. ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಭೂವ್ಯವಹಾರದ ಪ್ರಮಾಣ ಶೇ. 65 ರಷ್ಟು ಜಾಸ್ತಿ ಆಗಿದೆ. ಜಾಗ ಖರೀದಿ ಅಥವಾ ಮಾರಾಟ ಪ್ರಮಾಣವು ಹೆಚ್ಚಳವಾಗಿದೆ. ಭೂವ್ಯವಹಾರಗಳ ಪ್ರಮಾಣವು 1,700 ಎಕರೆಗಳನ್ನು ತಲುಪಿದೆ.

ಯಾವ ನಗರಗಳಲ್ಲಿ ಹೆಚ್ಚಳ: 2024ನೇ ಸಾಲಿನ ಜನವರಿ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಆಸ್ತಿ ಮಾರಾಟ ಮಾಡುವವರಿಗೆ ಬಂಪರ್ ಅದೃಷ್ಟವೊಲಿದು ಬಂದಿದೆ. ಆ ರೀತಿ ನಗರಗಳಲ್ಲಿ ಬೆಂಗಳೂರು, ದೆಹಲಿ - ಎನ್‌ಸಿಆರ್, ಮುಂಬೈ, ಪುಣೆ, ಚೆನ್ನೈ ಹಾಗೂ ಹೈದರಾಬಾದ್ ಸೇರಿದಂತೆ ಆರು ಪ್ರಮುಖ ನಗರಗಳು ರಿಯಲ್ ಎಸ್ಟೇಟ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಿವೆ. ಈ ಅವಧಿಯಲ್ಲಿ 100ಕ್ಕೂ ಹೆಚ್ಚು ಪ್ರಮುಖ ರಿಯಲ್ ಎಸ್ಟೇಟ್ ಡೀಲ್‌ಗಳೇ ಆಗಿವೆ ಎಂದು ವರದಿ ಹೇಳಿದೆ. 2023ನೇ ಸಾಲಿಗೆ ಹೋಲಿಕೆ ಮಾಡಿದರೆ ಈ ಪ್ರಮಾಣವು ಶೇಕಡವಾರು 60ಕ್ಕಿಂತ ಹೆಚ್ಚಾಗಿದೆ.
ಬೆಂಗಳೂರಲ್ಲಿ ಆಸ್ತಿ ದಾಖಲೆಯಲ್ಲಿ ಹೊಸ ಇತಿಹಾಸ: ಕಳೆದ ವರ್ಷ ಬೆಂಗಳೂರಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಭಾರತದಲ್ಲಿ ಕಳೆದ ವರ್ಷ ನಡೆದಿರುವ ರಿಯಲ್ ಎಸ್ಟೇಟ್ ಪ್ರಮಾಣದಲ್ಲಿ ಶೇಕಡ 22ರಷ್ಟು ಬೆಂಗಳೂರಿನಲ್ಲೇ ನಡೆದಿದೆ. ದೆಹಲಿಯ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ದೆಹಲಿ ಎನ್‌ಸಿಆರ್ ಶೇ32 ಪ್ರಮಾಣದಲ್ಲಿ ಇದ್ದರೆ. ದೇಶದ ಪ್ರಮುಖ ನಗರಗಳಾದ ಮುಂಬೈ, ಚೆನ್ನೈ ಹಾಗೂ ಬೆಂಗಳೂರು ರಿಯಲ್ ಎಸ್ಟೇಟ್‌ನಲ್ಲಿ ಶೇಕಡ 75 ಪಾಲನ್ನು ಹೊಂದಿದೆ. ದೆಹಲಿ ಎನ್‌ಸಿಆರ್ ಗುರಗಾಂವ್‌ನಲ್ಲಿ ಮಾತ್ರವೇ ರಿಯಲ್ ಎಸ್ಟೇಟ್ ವ್ಯವಹಾರ ಶೇ65 ರಷ್ಟಿದೆ. ನಂತರದಲ್ಲಿ ನೋಯ್ಡಾ- ಗ್ರೇಟರ್ ನೋಯ್ಡಾ ಪ್ರದೇಶವಿದ್ದು, ಇಲ್ಲಿ ರಿಯಲ್ ಎಸ್ಟೇಟ್ ಶೇ 20ರಷ್ಟಿದೆ.
ಆಸ್ತಿ ಮಾರಾಟ - ಖರೀದಿ ಹೆಚ್ಚಳ: ಬೆಂಗಳೂರಲ್ಲಿ ಆಸ್ತಿ ಮಾರಾಟ ಹಾಗೂ ಖರೀದಿ ಪ್ರಮಾಣ ಹೆಚ್ಚಳವಾಗಿದೆ . ಕಳೆದ ವರ್ಷ ವಿವಿಧ ಕಾರಣಗಳಿಗೆ ಆಸ್ತಿ ಮಾರಾಟ ಹಾಗೂ ಖರೀದಿಯಲ್ಲಿ ಒಳ್ಳೆಯ ಬೆಳವಣಿಗೆ ದಾಖಲಾಗಿತ್ತು. ಆದರೆ, ಈ ವರ್ಷ ಪ್ರಾರಂಭದಲ್ಲೇ ಎಚ್‌ಎಂಪಿವಿ ವೈರಸ್ ಆತಂಕದ ಬಗ್ಗೆ ಚರ್ಚೆಯಾಗುತ್ತಿದೆ. ಇದು ರಿಯಲ್ ಎಸ್ಟೇಟ್‌ನ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.
ಬೆಂಗಳೂರು ಚಿನ್ನದ ಮೊಟ್ಟೆ: ಬೆಂಗಳೂರು ಬೆಳೆಯುತ್ತಿರುವ ನಗರವಾಗಿದ್ದು. ಬೆಂಗಳೂರು ರಿಯಲ್ ಎಸ್ಟೇಟ್ ಚಿನ್ನದ ಮೊಟ್ಟೆ ಅಂತಲೇ ಕರೆಯಲಾಗುತ್ತದೆ. ಅಲ್ಲದೆ ಇದೀಗ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲೇ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವೂ ನಿರ್ಮಾಣವಾಗುತ್ತಿರುವುದು ರಿಯಲ್ ಎಸ್ಟೇಟ್‌ಗೆ ಬಂಪರ್ ಅಂತಲೇ ಹೇಳಲಾಗ್ತಿದೆ.












Click it and Unblock the Notifications