E Khata: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: ಇ ಖಾತಾಗಾಗಿ ಮೊಬೈಲ್ ಆ್ಯಪ್

E Khata: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ಸಮಸ್ಯೆ ಆಗಬಾರದು. ಅಲ್ಲದೇ ಆಸ್ತಿಗಳ ಮಾರಾಟ ಮತ್ತು ಖರೀದಿಯಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಇ ಖಾತಾವನ್ನು ಪರಿಚಯಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಅಂದಾಜು 25 ಲಕ್ಷ ಆಸ್ತಿಗಳಿದ್ದು ಇಲ್ಲಿಯ ವರೆಗೆ ಅಂದಾಜು 5 ಲಕ್ಷದ ಆಸ್ತಿಗಳಿಗೆ ಮಾತ್ರ ಇ ಖಾತಾ ನೀಡಲಾಗಿದೆ. ಇದೀಗ ಕೊನೆಗೂ ಬೆಂಗಳೂರಿನಲ್ಲಿ ಇ ಖಾತಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇ ಖಾತಾಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಆಡಳಿತದಿಂದ ಮಹತ್ವದ ಅಪ್ಡೇಟ್ಸ್‌ ಕೊಡಲಾಗಿದೆ.

ಬೆಂಗಳೂರಿನಲ್ಲಿ ಆಸ್ತಿಗಳ ಖರೀದಿ ಮತ್ತು ಮಾರಾಟ ಸೇರಿದಂತೆ ಆಸ್ತಿ ದಾಖಲೆ ಸೇವೆಗಳನ್ನು ಸರಳಗೊಳಿಸುವ ಉದ್ದೇಶದಿಂದ ಇ ಖಾತಾ ಪರಿಚಯಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಿನ 10 ದಿನಗಳಲ್ಲಿ ಇ-ಖಾತಾಕ್ಕಾಗಿ ನಿರ್ದಿಷ್ಟ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸುವುದಕ್ಕೆ ಮುಂದಾಗಿದೆ ಎಂದು ಗ್ರೇಟರ್ ಬೆಂಗಳೂರು ಆಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊಬೈಲ್ ಅಪ್ಲಿಕೇಶನ್‌ನಿಂದಾಗಿ ಇ ಖಾತಾ ಸುಲಭವಾಗಿ ಸಿಗಲಿದ್ದು. ಆಸ್ತಿದಾರರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Good News for Bengaluru Property Owners e-Khata Now on Mobile App

ಬೆಂಗಳೂರಿನಲ್ಲಿ ಇ ಖಾತಾ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಪರಿಚಯಿಸುತ್ತಿರುವ ಹೊಸ ಅಪ್ಲಿಕೇಶನ್ ಆಸ್ತಿ ಮಾಲೀಕರಿಗೆ ಅರ್ಜಿ ಪ್ರಕ್ರಿಯೆ ಸುಲಭಗೊಳಿಸಲಿದೆ. ಇ ಖಾತಾ ಪ್ರಕ್ರಿಯೆ ವೇಗವಾಗಿ ಮತ್ತು ಸುಲಭವಾಗಿ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಸೇರ್ಪಡೆಯಾಗಲಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಇ-ಖಾತಾ ಅರ್ಜಿಗಳನ್ನು ಅಧಿಕೃತ ವೆಬ್‌ಸೈಟ್, ಬೆಂಗಳೂರು ಒನ್ ಕೇಂದ್ರಗಳು ಮತ್ತು ಸೈಬರ್ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತಿತ್ತು. ಹೊಸ ಅಪ್ಲಿಕೇಶನ್‌ನೊಂದಿಗೆ, ಆಸ್ತಿ ಮಾಲೀಕರು ಇನ್ಮುಂದೆ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ನೇರವಾಗಿ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗಲಿದೆ. ಗ್ರೇಟರ್ ಬೆಂಗಳೂರು ಆಡಳಿತದ ವಿಶೇಷ ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ಅವರು, ಮೊಬೈಲ್ ಅಪ್ಲಿಕೇಶನ್ ಅಸ್ತಿತ್ವದಲ್ಲಿರುವ ವೆಬ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸೇರ್ಪಡೆ ಆಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಳೆದ ವರ್ಷ ಅಕ್ಟೋಬರ್‌ನಿಂದ ಸುಮಾರು 7.5 ಲಕ್ಷ ಅಂತಿಮ ಇ-ಖಾತಾಗಳನ್ನು ಯಶಸ್ವಿಯಾಗಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇ ಖಾತಾ ಮೊಬೈಲ್ ಅಪ್ಲಿಕೇಶನ್‌ಗೆ ಬೇಕಾಗುವ ದಾಖಲೆಗಳು

1. ಅರ್ಜಿದಾರರು ಆಸ್ತಿ ಮಾರಾಟ ಪತ್ರ ಸಂಖ್ಯೆ

2. ತೆರಿಗೆ ರಶೀದಿ

3. ಆಧಾರ್ ಸಂಖ್ಯೆ

4. ಮೊಬೈಲ್ ಸಂಖ್ಯೆ

5. ಎನ್ಕಂಬರೆನ್ಸ್ ಪ್ರಮಾಣಪತ್ರ (ಫಾರ್ಮ್ -15)

6. ಆಸ್ತಿ ಛಾಯಾಚಿತ್ರ

7. ಸ್ಥಳ ವಿವರಗಳು ಮತ್ತು ಬೆಸ್ಕಾಂ ಬಿಲ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ.

ಇ ಖಾತಾ ಆ್ಯಪ್ ನಿಂದ ಸಹಾಯ: ಇನ್ನು ಬೆಂಗಳೂರಿನಲ್ಲಿ ಇ ಖಾತಾಗಾಗಿ ಮೊಬೈಲ್ ಅಪ್ಲಿಕೇಶನ್ ಪರಿಚಯಿಸುತ್ತಿರುವುದರಿಂದ ಆಸ್ತಿದಾರರು ಇನ್ಮುಂದೆ ಸುಲಭವಾಗಿ ಇ ಖಾತಾ ಪಡೆದುಕೊಳ್ಳಲು ಸಹಾಯವಾಗಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+