Bengaluru Property: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: SAS ID ಮೂಲಕ ಇ-ಖಾತಾ ಡೌನ್‌ಲೋಡ್ ಸುಲಭ
Bengaluru Property: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆಸ್ತಿದಾರರಿಗೆ ಇ ಖಾತಾ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಆಸ್ತಿದಾರರು ಬೆಂಗಳೂರಿನಲ್ಲಿ ಇ ಖಾತಾ ಪಡೆದುಕೊಳ್ಳುವುದಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕೊನೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಇ ಖಾತಾವನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಹೌದು ಪ್ರಾಪರ್ಟಿ ಟ್ಯಾಕ್ಸ್ ಐಡಿಯ ಮೂಲಕವೇ ನೀವು ಇ ಖಾತಾ ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ಹಾಗಾದರೆ ಪ್ರಾಪರ್ಟಿ ಟ್ಯಾಕ್ಸ್ ಐಡಿಯ ಮೂಲಕ ಇ ಖಾತಾ ಪಡೆದುಕೊಳ್ಳುವುದು ಹೇಗೆ, ಇದಕ್ಕೆ ಬೇಕಾಗುವ ದಾಖಲೆಗಳು ಯಾವುವು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಆಸ್ತಿದಾರರು ಇ ಖಾತಾ ಪಡೆದುಕೊಳ್ಳುವುದಕ್ಕೆ ಎದುರಿಸುತ್ತಿದ್ದ ಸವಾಲುಗಳನ್ನು ಪರಿಹರಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇ ಖಾತಾ ಪಡೆದುಕೊಳ್ಳುವುದಕ್ಕೆ ಈಗ SAS ID ಮೂಲಕ ಸಹ ಇ ಖಾತಾ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇನ್ಮುಂದೆ ನೀವು SAS ID ಮೂಲಕ ನಿಮ್ಮ ಇ-ಖಾತಾವನ್ನು ಪಡೆಯಿರಿ ಎಂದು ಹೇಳಿದೆ.

ಬೆಂಗಳೂರಿನ ನಾಗರಿಕರು ಈಗ ತಮ್ಮ SAS (ಸ್ವಯಂ-ಮೌಲ್ಯಮಾಪನ ಯೋಜನೆ) ಆಸ್ತಿ ತೆರಿಗೆ ID ಬಳಸಿ ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.
Bengaluru Property: ಇ ಖಾತಾ ಡೌನ್‌ಲೋಡ್ ಮಾಡುವುದು ಹೇಗೆ
https://BBMPeAasthi.karnataka.gov.in
ಮೊಬೈಲ್ ಸಂಖ್ಯೆ ಮತ್ತು OTP ಯೊಂದಿಗೆ ಲಾಗಿನ್ ಮಾಡಿ
SAS ಆಸ್ತಿ ತೆರಿಗೆ ಐಡಿ ನಮೂದಿಸಿ
ತಕ್ಷಣ ಡೌನ್‌ಲೋಡ್ ಮಾಡಿ
ಇ ಖಾತಾದ ಪ್ರಮುಖ ಮುಖ್ಯಾಂಶಗಳು ವಿವರ
13 ಲಕ್ಷ ಇ-ಖಾತಾಗಳು ಲಭ್ಯವಿದೆ
24x7 ಆನ್‌ಲೈನ್ ಪ್ರವೇಶ
ಯಾವುದೇ ಕಚೇರಿ ಭೇಟಿಗಳ ಅಗತ್ಯವಿಲ್ಲ
SMS/WhatsApp ಡೌನ್‌ಲೋಡ್ ಲಿಂಕ್
ಯಾವುದೇ ಮಧ್ಯವರ್ತಿಗಳಿಲ್ಲ
ಪೂರ್ಣ ಮೌಲ್ಯೀಕರಣಕ್ಕಾಗಿ, ನವೀಕರಣಕ್ಕೆ ಈ ಪ್ರಕ್ರಿಯೆಗಳನ್ನು ಅನುಸರಿಸಿ
ಆಧಾರ್ ಮತ್ತು ಇ-ಕೆವೈಸಿ
ಮಾರಾಟ ಪತ್ರ
ಆಸ್ತಿ ವಿವರಗಳು (ಜಿಪಿಎಸ್ ಮತ್ತು ಫೋಟೋಗಳು)
ಬೆಸ್ಕಾಮ್ ಐಡಿ (ಅನ್ವಯಿಸಿದರೆ)
ಇದರಿಂದ ಆಸ್ತಿದಾರರಿಗೆ ಸಿಗುವ ಸೌಲಭ್ಯಗಳು
ತ್ವರಿತ ಮತ್ತು ಸುಲಭ ಪ್ರವೇಶ ಸಾಧ್ಯವಾಗಲಿದೆ. ಪಾರದರ್ಶಕ ವ್ಯವಸ್ಥೆ, ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಎಲ್ಲಾ ಆಸ್ತಿ ಮಾಲೀಕರು ತಮ್ಮ ಇ-ಖಾತಾವನ್ನು ಆದಷ್ಟು ಬೇಗ ಡೌನ್‌ಲೋಡ್ ಮಾಡಲು ವಿನಂತಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.














Click it and Unblock the Notifications