Property: ಬೆಂಗಳೂರಿನ ಈ ಭಾಗದಲ್ಲಿ ಭೂಮಿಗೆ ಬಂಗಾರದ ರೇಟ್‌: ಮಾರಾಟ & ಖರೀದಿ ಜೋರು!

Property: ಬೆಂಗಳೂರಿನಲ್ಲಿ ಕೆಲವೊಂದು ಪ್ರಮುಖ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುತ್ತಿದೆ. ಮೈಸೂರು ರಸ್ತೆಯ ರಾಮೋಹಳ್ಳಿ - ಕೊಮ್ಮಘಟ್ಟ ಭಾಗದಲ್ಲಿ ಜಾಗ ಖರೀದಿ ಮಾಡುವವರ ಸಂಖ್ಯೆ ಹಾಗೂ ಮಾರಾಟ ಭರ್ಜರಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ವಿವಿಧ ಕಾರಣಕ್ಕೆ ಭೂಮಿ ಮತ್ತು ಮನೆಗಳಿಗೆ ಒಳ್ಳೆಯ ಬೆಲೆ ಬರುತ್ತಿದೆ. ಇದೀಗ ರಾಮೋಹಳ್ಳಿ ಪ್ರದೇಶವು ಪ್ರಾಪರ್ಟಿದಾರರಿಗೆ ವಿವಿಧ ಕಾರಣಗಳಿಗೆ ಆಸ್ತಿ ಖರೀದಿ ಮಾಡಲು ಸೂಕ್ತವಾಗಿದೆ ಎಂದು ಪರಿಗಣಿಸಲಾಗಿದೆ. ಈ ಭಾಗದಲ್ಲಿ ಜನ ಮುಗಿಬಿದ್ದು ಪ್ರಾಪರ್ಟಿ ಖರೀದಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಭಾಗದಲ್ಲಿ ಭೂಮಿ ಖರೀದಿ ಮಾಡುವುದಕ್ಕೆ ಈಗ ಬೆಸ್ಟ್‌ ಟೈಮ್‌ ಎಂದು ಪರಿಗಣಿಸಲಾಗುತ್ತಿದೆ. ಅದು ಯಾಕೆ ಏನಿದರ ಹಿನ್ನೆಲೆ ಎನ್ನುವ ವಿವರ ಇಲ್ಲಿದೆ.

ನಗರದಲ್ಲಿ ರಿಯಲ್‌ ಎಸ್ಟೇಟ್‌ಗೆ ಮೊದಲಿನಿಂದಲೂ ಒಳ್ಳೆಯ ಮಾರ್ಕೆಟ್‌ ಇದೆ. ಇದೀಗ ಬೆಂಗಳೂರಿನ ರಾಮೋಹಳ್ಳಿ - ಕೊಮ್ಮಘಟ್ಟ ಭಾಗದಲ್ಲಿ ಭೂಮಿ ಖರೀದಿ ಮಾಡುವ ಪ್ರಕ್ರಿಯೆ ಜೋರಾಗಿದೆ. ಬೆಂಗಳೂರಿನ ಈ ಜಾಗದಲ್ಲಿ ಆಸ್ತಿ ಖರೀದಿದಾರರಿಂದ ಒಳ್ಳೆಯ ಡಿಮ್ಯಾಂಡ್‌ ಕ್ರಿಯೇಟ್ ಆಗಿದೆ. ಇಲ್ಲಿ ವಾಸಯೋಗ್ಯ ಅಥವಾ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಗಳಿಗೆ ರಿಯಲ್‌ ಎಸ್ಟೇಟ್‌ಗೆ ಒಳ್ಳೆಯ ಲಾಭ ಸೃಷ್ಟಿಯಾಗಿದೆ ಅಂತಲೇ ಹೇಳಲಾಗುತ್ತಿದೆ.

Gold Rate for land in Bengaluru s Ramohalli - Kommagatta Sales And Purchases Strong

ಇನ್ನು ಮುಖ್ಯವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮಾರ್ಗದಲ್ಲಿರುವ ದೊಡ್ಡ ಆಲದಮರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜಾಗಕ್ಕೆ ಡಿಮ್ಯಾಂಡ್‌ ಜೋರಾಗಿದೆ. ರಿಯಲ್‌ ಎಸ್ಟೇಟ್‌ ಹೂಡಿಕೆದಾರರನ್ನು ಈ ಜಾಗ ಆಕರ್ಷಿಸಿದೆ ಎಂದೇ ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಮೆಟ್ರೋ ಸೇವೆ ವಿಸ್ತರಣೆ ಹಾಗೂ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಾರಣಗಳಿಂದ ಭೂಮಿಗೆ ಬಂಗಾರದ ಬೆಲೆ ಬರುತ್ತಿದೆ. ಇದೇ ಸಂದರ್ಭದಲ್ಲಿ ವಿವಿಧ ಎಕ್ಸ್‌ಪ್ರೆಸ್‌ ವೇಗಳ ನಿರ್ಮಾಣದಿಂದಲೂ ಭೂಮಿಗೆ ಬಂಗಾರದ ಬೆಲೆ ಬರುತ್ತಿದೆ ಎಂದು Bangalore Mirror ವರದಿ ಮಾಡಿದೆ.

ಈ ಭಾಗದಿಂದ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಾಕಷ್ಟು ಅಭಿವೃದ್ಧಿಯಾಗಿವೆ. ಹೀಗಾಗಿ ಈ ಭಾಗದಲ್ಲಿ ಭೂಮಿ ಹಾಗೂ ಫ್ಲಾಟ್‌ಗಳಿಗೆ ಬಂಪರ್‌ ಬೆಲೆ ಬರುತ್ತಿದೆ. ಇನ್ನು ಈ ಭಾಗದಲ್ಲಿ ಬೆಂಗಳೂರು ಹಾಗೂ ಮೈಸೂರು ಎಕ್ಸ್‌ಪ್ರೆಸ್‌ವೇಯಿಂದಾಗಿ ರಿಯಲ್‌ ಎಸ್ಟೇಟ್‌ಗೆ ಧಮಾಕ ಸೃಷ್ಟಿಯಾಗಿದ್ದು. ಇದರೊಂದಿಗೆ ಈ ಭಾಗದಲ್ಲಿ ಚಲ್ಲಘಟ್ಟಕ್ಕೆ ಮೆಟ್ರೋ ಮಾರ್ಗದ ವಿಸ್ತರಣೆಯು ಸಹ ಭೂಮಿ ಮಾರಾಟ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಫ್ಲಾಟ್ ಖರೀದಿಗೆ ಸೂಕ್ತ ಪ್ರದೇಶ: ಇನ್ನು ಈ ಪ್ರದೇಶವನ್ನು ಫ್ಲಾಟ್‌ಗಳ ಖರೀದಿಗೆ ಸೂಕ್ತ ಪ್ರದೇಶ ಎಂದು ಪರಿಗಣಿಸಲಾಗುತ್ತಿದೆ. ಇಲ್ಲಿನ ದೊಡ್ಡಲದಮರ ಭಾಗದಲ್ಲಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ವೇಗ ಪಡೆದುಕೊಂಡಿದೆ. ಅಲ್ಲದೇ ರಿಯಲ್‌ ಎಸ್ಟೇಟ್‌ನೊಂದಿಗೆ ದೊಡ್ಡ ರೆಸಾರ್ಟ್‌ಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಸಹ ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಈ ವಿಷಯಗಳು ರಿಯಲ್‌ ಎಸ್ಟೇಟ್‌ಗೆ ಪೂರಕವಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+