Bengaluru Second Airport: ಭೂಮಿಗೆ ಚಿನ್ನದ ಬೆಲೆ: ಈ ಭಾಗಗಳಲ್ಲಿ ಭೂಮಿ ಬೆಲೆ ದಿಢೀರ್ ಹೆಚ್ಚಳ!
Bengaluru Second Airport: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯು ಚುರುಕು ಪಡೆದುಕೊಳ್ಳುತ್ತಿರುವಾಗಲೇ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಗಳು ಚುರುಕು ಪಡೆದುಕೊಳ್ಳುತ್ತಿದ್ದಂತೆಯೇ ವಿವಿಧ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವುದಕ್ಕೆ ಶುರುವಾಗಿದೆ.
ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು, ಈಗ ತನ್ನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಎಲ್ಲರ ಗಮನ ಇದೀಗ ಬೆಂಗಳೂರಿನ ದಕ್ಷಿಣ ಜಿಲ್ಲೆಯ ಮೇಲೆ ಕೇಂದ್ರೀಕೃತವಾಗಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ವೇಗವಾಗಿ ಬೆಳೆಯುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಮತ್ತೊಂದು ದೊಡ್ಡ ವಿಮಾನ ನಿಲ್ದಾಣ ನಿರ್ಮಾಣದ ಅವಶ್ಯಕತೆ ಇದೆ. ಈ ಪ್ರಕ್ರಿಯೆ ಅಂತಿಮವಾಗುತ್ತಿದ್ದು ಹೊಸ ವಿಮಾನ ನಿಲ್ದಾಣವು ಗಾತ್ರ ಮತ್ತು ಸಾಮರ್ಥ್ಯದಲ್ಲಿ ಕೆಐಎಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯೂ ಇದೆ.

ಕನಕಪುರ ರಸ್ತೆ (ನಗರ ಪ್ರದೇಶ) ಈ ಭಾಗದಲ್ಲಿ ಸುಮಾರು 4,800 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಕನಕಪುರ (ರಾಮನಗರ ಜಿಲ್ಲೆ / ಬೆಂಗಳೂರು ದಕ್ಷಿಣ ಜಿಲ್ಲೆ) ಹರೋಹಳ್ಳಿ ಬಳಿ, ಗ್ರೀನ್ ಮೆಟ್ರೋ ಮಾರ್ಗದ ಕೊನೆಯ ನಿಲ್ದಾಣದಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಅಲ್ಲದೇ ಕನಕಪುರ / ಹಾರೋಹಳ್ಳಿ ಕಾರಿಡಾರ್ ಬಲವಾದ ಪ್ರವೇಶವನ್ನು ನೀಡುತ್ತದೆ - ಮೆಟ್ರೋ ಮೂಲಸೌಕರ್ಯ ಮತ್ತು ಪ್ರಮುಖ ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕ ಹೊಂದಿದ ರಸ್ತೆಗಳಿಗೆ ಸಮೀಪದಲ್ಲೇ ಇದೆ. ಅಲ್ಲದೇ ಭವಿಷ್ಯದ ವಿಮಾನ ಪ್ರಯಾಣಿಕರಲ್ಲಿ ಹೆಚ್ಚಿನ ಪಾಲು ದಕ್ಷಿಣ ಬೆಂಗಳೂರಿನಿಂದ ಬರುತ್ತಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇದು ಎರಡನೇ ವಿಮಾನ ನಿಲ್ದಾಣಕ್ಕೆ ಆಯಕಟ್ಟಿನ ಮಹತ್ವಾಕಾಂಕ್ಷೆ ಹೊಂದಿದೆ.
ಕನಕಪುರದಲ್ಲಿ ಭೂಮಿ ಬೆಲೆ ಎಷ್ಟಿದೆ ?
ಕನಕಪುರದಲ್ಲಿ ಭೂಮಿ ಬೆಲೆಯು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭರ್ಜರಿ ಹೆಚ್ಚಳವಾಗಿದೆ. ಮೊದಲನೆಯದಾಗಿ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈ ಪ್ರದೇಶ ಶಾರ್ಟ್ ಲಿಸ್ಟ್ ಆದ ಬೆನ್ನಲ್ಲೇ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗುವುದಕ್ಕೆ ಪ್ರಾರಂಭವಾಯಿತು. ಅಲ್ಲದೇ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರವು ನಾಮಕರಣ ಮಾಡಿದ ಮೇಲೆ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್ ಸಿಕ್ಕಂತಾಗಿದೆ.
ಕನಕಪುರದಲ್ಲಿ ಭೂಮಿಯ ಬೆಲೆಗಳು ಭರ್ಜರಿ ಹೆಚ್ಚಳವಾಗುತ್ತಿದೆ. ಕೃಷಿ ಭೂಮಿಯು ಎಕರೆಗೆ ₹20 ಲಕ್ಷದಿಂದ ಪ್ರಾರಂಭವಾಗುತ್ತಿದೆ. ಆದರೆ ವಸತಿ ಪ್ಲಾಟ್‌ಗಳು ಚಿಕ್ಕದಾಗಿದ್ದು ಕಡಿಮೆ ಅಭಿವೃದ್ಧಿ ಹೊಂದಿದ ನಿವೇಶನಗಳಿಗೆ ₹10 ಲಕ್ಷಕ್ಕಿಂತ ಕಡಿಮೆ ಬೆಲೆಯಿಂದ ಕನಕಪುರ ರಸ್ತೆಯಲ್ಲಿರುವ ಪ್ರಮುಖ ಪ್ಲಾಟ್‌ಗಳಿಗೆ ₹10 ಕೋಟಿಗಿಂತ ಹೆಚ್ಚು ಬೆಲೆ ಇದೆ.
ಇನ್ನು ಕಳೆದ ಒಂದು ವರ್ಷದ ಅವಧಿಯಲ್ಲೇ ಕನಕಪುರ ರಸ್ತೆಯಲ್ಲಿ ಭೂಮಿಯ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಕಳೆದ ವರ್ಷವೊಂದರಲ್ಲೇ ಈ ಭಾಗದಲ್ಲಿ ರಿಯಲ್ ಎಸ್ಟೇಟ್ / ಪ್ರಾಪರ್ಟಿ ಬೆಲೆಯು ಬರೋಬ್ಬರಿ ಶೇ. 13.9 ರಷ್ಟು ಹೆಚ್ಚಳವಾಗಿದೆ.












Click it and Unblock the Notifications