ಅಂಧ ಮಕ್ಕಳ ಪ್ರತಿಭೆಗೆ ಇಲ್ಲೊಂದು ವೇದಿಕೆ

ಬೆಂಗಳೂರು, ಡಿ.2 : ಅಂಗವಿಕಲ ಮಕ್ಕಳಲ್ಲಿನ ಪ್ರತಿಭೆಯ ಪ್ರದರ್ಶನಕ್ಕಾಗಿ ಗಿಫ್ಟ್ ಏಬಲ್ಡ್ ಫೌಂಡೇಷನ್‌ ನಾಲ್ಕು ದಿನಗಳ ಶಿಬಿರವನ್ನು ಆಯೋಜಿಸಿದೆ. ವಿಶ್ವ ಅಂಗವಿಕಲ ದಿನಾಚರಣೆ ಪ್ರಯುಕ್ತ ಆಯೋಜಿಸಿರುವ ಈ ಶಿಬಿರಕ್ಕೆ ಡಿ.3ರಂದು ಚಾಲನೆ ದೊರೆಯಲಿದೆ.

ಅಂಧ ಮಕ್ಕಳಿಗೆ ಬ್ರೈಲ್ ಗ್ರೀಟಿಂಗ್ ಕಾರ್ಡ್, ಬ್ರೈಲ್ ಸ್ಲೇಟ್‌, ಡ್ರಾಯಿಂಗ್ ಬೋರ್ಡ್ ಮುಂತಾದವುಗಳನ್ನು ಉಡುಗೊರೆಯಾಗಿ ನೀಡುವ ಗಿಫ್ಟ್‌ ಏಬಲ್ಡ್ ಫೌಂಡೇಷನ್ (GiftAbled Foundation), ಅಂಧ ಮಕ್ಕಳಿಗಾಗಿ ವಿವಿಧ ತರಬೇತಿ ಚಟುವಟಿಗಳನ್ನು ವಿಶ್ವ ಅಂಗವಿಕಲ ದಿನಾಚಾರಣೆ ಪ್ರಯುಕ್ತ ಆಯೋಜಿಸಿದೆ.

GiftAbled

ಡಿಸೆಂಬರ್ 3ರಿಂದ 7ರ ತನಕ 'ಆರ್ಟ್‌ ಏಬಲ್ಡ್' ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅಂಧ ಮಕ್ಕಳ ಚಿತ್ರಕಲೆ, ಸಂಗೀತ, ನೃತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸಲು ವೇದಿಕೆಯನ್ನು ಒದಗಿಸಲಿದೆ.

ಡಿ.3ರ ಬುಧವಾರದಿಂದ Cheshire Disability Trust, HAL 2nd Stage, Opp. Manipal Hospitals ಇಲ್ಲಿ ಆರ್ಟ್‌ ಏಬಲ್ಡ್ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ನಡೆಯಲಿದೆ.

ಅಂಗವಿಕಲ ಮಕ್ಕಳ ಬಗ್ಗ ಕಾಳಜಿ ಹೊಂದಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಶಿಬಿರದಲ್ಲಿ ಭಾಗವಹಿಸುವ ಇಚ್ಛೆ ಇದ್ದರೆ [email protected] ಅಥವ 9620258759 ನಂಬರ್‌ಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+