• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಚ್ಚು ಮಂದಿಗೆ ಕೊರೊನಾ ಲಸಿಕೆ ತಲುಪಿಸಲು ಖಾಸಗಿ ಕಂಪನಿಗಳ ನೆರವು ಪಡೆಯುವುದು ಸೂಕ್ತ: ಅಜೀಂ

|

ಬೆಂಗಳೂರು,ಫೆಬ್ರವರಿ 22:ಕೊರೊನಾ ಲಸಿಕೆ ವಿತರಣೆಗೆ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ತಲುಪುವಂತಾಗಬೇಕೆಂದರೆ ಖಾಸಗಿ ಕಂಪನಿಗಳ ಸಹಾಯ ಪಡೆಯಬೇಕು ಎಂದು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂ ಜೀ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಲಸಿಕೆ ವಿತರಣೆಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ವಲಯ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲದು. ನಾವೂ ಕೂಡ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ದೊಂದಿಗೆ ಚರ್ಚೆ ನಡೆಸುತ್ತಿದ್ದು, ಪ್ರತೀ ಡೋಸ್ ಗೆ 500 ರೂನೀಡಿ ಲಸಿಕೆ ಪಡೆಯುವ ಸಾಧ್ಯತೆ ಇದೆ.

ದೇಶದ ಅಭಿವೃದ್ಧಿ, ಸಂಸ್ಥೆಗಳ ದಕ್ಷತೆಗೆ ಖಾಸಗೀಕರಣ ಅನಿವಾರ್ಯ: ನಿರ್ಮಲಾ ಸೀತಾರಾಮನ್

ಭಾನುವಾರ ಬೆಂಗಳೂರಿನಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಜೆಟ್ ನಂತರದ ಸಂವಾದದಲ್ಲಿ ಮಾತನಾಡಿದ ಅವರು, ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅತ್ಯಂತ ಕಡಿಮೆ ಮತ್ತು ದಾಖಲೆಯ ಸಮಯದಲ್ಲಿ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಸರ್ಕಾರ ಲಸಿಕೆ ವಿತರಣೆಯಲ್ಲಿ ಖಾಸಗಿ ವಲಯವನ್ನು ತೊಡಗಿಸಿಕೊಂಡರೆ, 60 ದಿನಗಳಲ್ಲಿ 500 ಮಿಲಿಯನ್ ಜನರಿಗೆ ಲಸಿಕೆ ವಿತರಿಸಬಹುದು ಎಂದು ಅಜೀಮ್ ಪ್ರೇಮ್ ಜೀ ಹೇಳಿದರು.

   ಒಂದು ವಾರಗಳ ಕಾಲ ಮಹಾರಾಷ್ಟ್ರದ ಅಮರಾವತಿ ಲಾಕ್‌ಡೌನ್‌! | Oneindia Kannada

   ವಿತರಣೆ ವಿಚಾರದಲ್ಲೂ ಆಡಳಿತವು ವಿಶಾಲವಾಗಿ ಯಶಸ್ವಿಯಾಗಲಿದೆ. ದೊಡ್ಡ ಜನಸಂಖ್ಯೆಯಲ್ಲಿ ಲಸಿಕೆ ವಿತರಣೆ ನಿರ್ವಹಿಸುವುದು ಸವಾಲಿನ ಕೆಲಸ. ಇದು ಅತೀ ಅವಶ್ಯಕ ವಿಚಾರಕೂಡ.. ಈ ವಿಭಾಗದಲ್ಲಿ ಸರ್ಕಾರವು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು.

   English summary
   The Covid vaccine has been developed at a record time and its administration will broadly be a success. Administering it to a large population is a key requirement and the government is doing its best, said Azim Premji, founder chairman of Wipro, while speaking at a post-budget interaction with Union.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X