GBA: ಪಾಲಿಕೆಯ ಅನಗತ್ಯ ಹುದ್ದೆಗಳ ಕಡಿತ, ವಾರ್ಡ್ ಮಟ್ಟದಲ್ಲಿ ಬಲವರ್ಧನೆಗೆ ಸಮಗ್ರ ಯೋಜನೆ ಕ್ರಮ

ಬೆಂಗಳೂರು: ನಗರದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತಿ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ಪಷ್ಟ ಕಾರ್ಯಹಂಚಿಕೆ ಮಾಡಬೇಕಿದೆ. ಮಾತ್ರವಲ್ಲದೇ ಪಾಲಿಕೆಯ ಅನಗತ್ಯ ಹುದ್ದೆಗಳ ಕಡಿತ ಹಾಗೂ ವಾರ್ಡ್ ಮಟ್ಟದಲ್ಲಿ ಬಲವರ್ಧನೆಗೆ ಸಮಗ್ರ ಯೋಜನೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವೃಂದ ಮತ್ತು ನೇಮಕಾತಿ ನಿಯಮಾವಳಿ ಸಮಿತಿಯ ಅಧ್ಯಕ್ಷರಾದ ಟಿ.ಎಂ. ವಿಜಯಭಾಸ್ಕ‌ರ್ (ನಿವೃತ್ತ) ಅಧ್ಯಕ್ಷತೆಯಲ್ಲಿ ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ರವರ ನೇತೃತ್ವದಲ್ಲಿ ಪಾಲಿಕೆಗೆ ಅಗತ್ಯವಿರುವ ವೃಂದ ಮತ್ತು ನೇಮಕಾತಿ ನಿಯಮಗಳ ರಚನೆ ಹಾಗೂ ಆಡಳಿತವನ್ನು ಚುರುಕುಗೊಳಿಸಲು ಹಾಗೂ ವಾರ್ಡ್ ಮಟ್ಟದಲ್ಲಿ ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

GBA

ಅನಗತ್ಯ ಹುದ್ದೆಗಳ ಕಡಿತ

ಹೆಚ್ಚುವರಿಯಾಗಿ ಮುಂಜೂರಾತಿಯಾಗಿರುವ ಅನಗತ್ಯ ಉನ್ನತ ಹುದ್ದೆಗಳನ್ನು ಕಡಿತಗೊಳಿಸಿ ಆಡಳಿತ ಯಂತ್ರವನ್ನು ಸುಗಮಗೊಳಿಸುವುದು, ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳನ್ನು ಪರಿಹರಿಸಿ ಸಾರ್ವಜನಿಕರಿಗೆ ಪಾರದರ್ಶಕ, ದಕ್ಷ ಮತ್ತು ಜವಾಬ್ದಾರಿಯುತ ಆಡಳಿತ ನೀಡುವ ಸಂಬಂಧ ಅಗತ್ಯ ಸುಧಾರಣೆ ತರುವ ಉದ್ದೇಶವಾಗಿದೆ ಎಂದು ಸಭೆಯಲ್ಲಿ ಪಾಲಿಕೆ ಅಯುಕ್ತ ಕೆ. ಎನ್. ರಮೇಶ್ ತಿಳಿಸಿದರು.

ಸಮಿತಿಯ ಅಧ್ಯಕ್ಷರು ವಾರ್ಡ್ ಸಬಲೀಕರಣ ಹಿತದೃಷ್ಟಿಯಿಂದ ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿರುವ ಸಬ್-ಡಿವಿಷನ್‌ಗಳನ್ನು ಕಡಿತಗೊಳಿಸಿ, ವಿಧಾನಸಭಾ ಕ್ಷೇತ್ರವಾರು ವೈಜ್ಞಾನಿಕವಾಗಿ ಮರುಹೊಂದಿಸಲು ಸಭೆಯಲ್ಲಿ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು.

ನಗರದ ಮಧ್ಯಭಾಗದ ಪ್ರದೇಶಗಳಲ್ಲಿ ಪ್ರತಿ ನಾಲ್ಕು ವಾರ್ಡ್‌ಗಳಿಗೆ ಒಬ್ಬರು ಹಾಗೂ ಹೊರವಲಯದ ಭಾಗಗಳಲ್ಲಿ ಮೂರು ವಾರ್ಡ್‌ಗಳಿಗೆ ಒಬ್ಬರಂತೆ ಸಹಾಯಕ ಕಂದಾಯ ಅಧಿಕಾರಿಗಳ ಕಾರ್ಯವ್ಯಾಪ್ತಿಯನ್ನು ನಿಗದಿಪಡಿಸಬೇಕಾಗಿದೆ. ಈ ಸಬ್-ಡಿವಿಷನ್ ವ್ಯವಸ್ಥೆಯನ್ನು ಮುಖ್ಯವಾಗಿ ಪಾಲಿಕೆಯ ಕಂದಾಯ ಹಾಗೂ ಎಂಜಿನಿಯರಿಂಗ್ ವಿಭಾಗಗಳಿಗೆ ಮಾತ್ರ ಸೀಮಿತಗೊಳಿಸುವುದು ಸೂಕ್ತ ಎಂದು ತಿಳಿಸಿದರು.

ವಿವಿಧ ವಿಭಾಗಗಳ ನಿರ್ವಹಣೆಗೆ ಸ್ಪಷ್ಟ ಕರ್ತವ್ಯ ಹಂಚಿಕೆ

ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತಿ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ಪಷ್ಟ ಕಾರ್ಯಹಂಚಿಕೆ ಮಾಡಬೇಕಿದೆ. ಆರೋಗ್ಯ ವೈದ್ಯಾಧಿಕಾರಿಗಳು (MOH), ಕಿರಿಯ ಆರೋಗ್ಯ ಪರಿವೀಕ್ಷಕರು (JHI) ಹಾಗೂ ವಾರ್ಡ್ ಮಾರ್ಷಲ್‌ಗಳ ಕಾರ್ಯವ್ಯಾಪ್ತಿಯನ್ನು ನಿಖರಗೊಳಿಸಬೇಕು.ಮನೆ-ಮನೆ ಕಸ ಸಂಗ್ರಹ, ಮೂಲದಲ್ಲೇ ಕಸ ವಿಂಗಡಣೆ ಹಾಗೂ ಬ್ಲಾಕ್‌ಸ್ಪಾಟ್‌ಗಳ ಸಂಪೂರ್ಣ ನಿರ್ಮೂಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪ್ರತಿಯೊಂದು ಹಂತದಲ್ಲೂ ಹೊಣೆಗಾರಿಕೆಗಳನ್ನು ನಿಗದಿಪಡಿಸುವುದು ಅವಶ್ಯ ಎಂದು ತಿಳಿಸಿದರು.

ಕೆರೆ ಮತ್ತು ಮೂಲಸೌಕರ್ಯ ವಿಭಾಗಗಳ ಸುಧಾರಣೆ

ಕೆರೆಗಳ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಪ್ರತ್ಯೇಕ ಎಕ್ಸಿಕ್ಯುಟಿವ್ ಎಂಜಿನಿಯರ್‌ಗಳು ಬೇಕಾಗಿದ್ದಾರೆ ಎಂದು ಮುಖ್ಯ ಅಭಿಯಂತರರು ಅಧ್ಯಕ್ಷರ ಗಮನಕ್ಕೆ ತಂದರು. ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಪರಿಶೀಲನೆಗೆ ಪ್ರತಿ ವಲಯಕ್ಕೆ ಪ್ರತ್ಯೇಕ ತಂಡ ಹಾಗೂ ನಗರದ ಸುಗಮ ಸಂಚಾರ ನಿರ್ವಹಣೆಗಾಗಿ ಕೇಂದ್ರೀಕೃತ 'ಟ್ರಾಫಿಕ್ ಎಂಜಿನಿಯರಿಂಗ್ ಸೆಲ್' ಬಲಪಡಿಸಬೇಕು ಎಂದರು.

ಅರಣ್ಯ, ಪಶುಪಾಲನಾ ವಿಭಾಗಕ್ಕೆ ಆದ್ಯತೆ

ನಗರದ ಹಸಿರು ವಲಯದ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ವಲಯ ಮಟ್ಟದಲ್ಲಿ ಅವಶ್ಯವಿರುವ ಅರಣ್ಯ ವಿಭಾಗದ ಅಧಿಕಾರಿಗಳ ಹುದ್ದೆ ಹಾಗೂ ತೋಟಗಾರಿಕಾ ವಿಭಾಗದ ಹುದ್ದೆಗಳನ್ನು ಅಗತ್ಯ ಎಂಬುದನ್ನು ವಿಸ್ತೃತವಾಗಿ ಚರ್ಚಿಸಿ ಅವರುಗಳಿಗೆ ಹೊಣೆಗಾರಿಕೆಗಳನ್ನು ನಿಗದಿಪಡಿಸಬೇಕು. ಬೀದಿನಾಯಿಗಳ ನಿಯಂತ್ರಣ, ಶ್ವಾನ ಲಸಿಕಾಕರಣ ಹಾಗೂ ಪ್ರಾಣಿ ಕಲ್ಯಾಣ ಕಾರ್ಯಗಳ ಮೇಲ್ವಿಚಾರಣೆಗೆ ಪಶುಸಂಗೋಪನಾ ವಿಭಾಗಕ್ಕೆ ಹೆಚ್ಚುವರಿ ಬಲ ತುಂಬಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರ ಕುಂದು ಕೊರತೆಗಳ ತ್ವರಿತ ಇತ್ಯರ್ಥ, ಆಸ್ತಿ ತೆರಿಗೆ ಸಂಗ್ರಹ ವ್ಯವಸ್ಥೆಯ ಸರಳೀಕರಣ ಹಾಗೂ ಆನ್‌ಲೈನ್ ಸೇವೆಗಳ ಪಾರದರ್ಶಕತೆಗೆ ಐಟಿ ವಿಭಾಗವನ್ನು ಉನ್ನತೀಕರಿಸುವುದು ಅವಶ್ಯವಿದೆ. ನುರಿತ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಹಾಗೂ ತಾಂತ್ರಿಕ ಪರಿಣಿತರ ಸೇವೆಯನ್ನು ಬಳಸಿಕೊಂಡು ಸಾರ್ವಜನಿಕ ಸೇವೆಗಳು ಸುಲಭಗೊಳಿಸಲು ಡಿಜಿಟಲ್ ಸೇವೆಗೆ ಆದ್ಯತೆ ನೀಡಬೇಕೆಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+