ಬೆಂಗಳೂರಲ್ಲಿ ಕಸ ಹಾಕುವವರ ಫೋಟೋ ತೆಗೆದು ವಾಟ್ಸಪ್ ಮಾಡಿ

ಬೆಂಗಳೂರು, ಜುಲೈ 14 : ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫ್ಲೈ ಓವರ್ ಕೆಳಗೆ ಕಸ ಸುರಿದರೆ ದಂಡ ಕಟ್ಟಬೇಕಾಗುತ್ತದೆ. ಹೌದು, ಮೆಟ್ರೋ ಮಾರ್ಗದ ಕೆಳಗೆ ಕಸ ಸುರಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಿ ಎಂದು ಪಾಲಿಕೆ ಆಯುಕ್ತ ಜಿ.ಕುಮಾರ್ ನಾಯಕ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಸೋಮವಾರ ನಮ್ಮ ಮೆಟ್ರೋ ಮತ್ತು ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಅವರು ಮೆಟ್ರೋ ಮಾರ್ಗದ ಕೆಳಗೆ ಕಸ ಸುರಿಯುತ್ತಿರುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಕಸ ಸುರಿಯುವುದಿಂದ ನಗರದ ಸೌಂದರ್ಯ ಹಾಳಾಗುತ್ತಿದೆ ಎಂದರು. ['ಸದ್ಯಕ್ಕಂತೂ ನಮಗಿಲ್ಲಪ್ಪಾ ಕಸ ತಾಪತ್ರಯ']

bbmp

ಮೆಟ್ರೋ ಮಾರ್ಗದ ಕೆಳಗೆ ಕಸ ಸುರಿಯುವುದನ್ನು ತಡೆಗಟ್ಟಲು ಮೆಟ್ರೋ ರೈಲು ನಿಗಮ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಬೇಕು ಎಂದು ಅವರು ಹೇಳಿದರು. ಕಸ ಸುರಿಯುವುದು ಕಂಡು ಬಂದರೆ ತಕ್ಷಣ ದಂಡ ವಿಧಿಸಿ ಎಂದು ಆದೇಶ ನೀಡಿದರು. [ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]

ಫೋಟೋ ತೆಗೆದು ವಾಟ್ಸಪ್ ಮಾಡಿ : ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದು ಕಂಡು ಬಂದರೆ ಅದರ ಫೋಟೋವನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಹೇಳಿದ ಆಯುಕ್ತರು ಸಾರ್ವಜನಿಕರು ಫೋಟೋ ತೆಗೆದು ವಾಟ್ಸಪ್ ಮಾಡಬಹುದು ಎಂದು ಹೇಳಿದರು. [ಕಸ ಬೇರ್ಪಡಿಸದಿದ್ದರೆ ದಂಡ ಹಾಕಿ]

ಸಾರ್ವಜನಿಕರು ಸೆರೆ ಹಿಡಿದ ಛಾಯಾಚಿತ್ರವನ್ನು ಪಾಲಿಕೆಯ ವಾಟ್ಸಪ್ ಸಂಖ್ಯೆ 9480685700ಗೆ ಕಳುಹಿಸಬೇಕು ಎಂದು ಆಯುಕ್ತರು ತಿಳಿಸಿದರು. ಜನರು ಕಳುಹಿಸಿದ ಚಿತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಕೂಡಲೇ ಕಸ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಕುಮಾರ್‌ ನಾಯಕ್‌ ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+