ಬೆಂಗಳೂರಿನಲ್ಲಿ 16 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್!
ಬೆಂಗಳೂರು, ಏ. 09: ರಾಜಧಾನಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಎಂಟು ಮಂದಿ ನಿರಂತರ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹದಿನಾರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಮೊದಲ ಆರೋಪಿ ಅತ್ಯಾಚಾರ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಈ ವಿಡಿಯೋ ತೋರಿಸಿ ನಿರಂತರ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಇದೇ ವಿಡಿಯೋ ತೋರಿಸಿ ತನ್ನ ಸ್ನೇಹಿತರಿಗೂ ಸಹಕರಿಸುವಂತೆ ಬೆದರಿಕೆ ಹಾಕಿದ್ದಾನೆ.

ಮೊದಲು ಇಬ್ಬರು ಅರೋಪಿಗಳು ಅತ್ಯಾಚಾರ ನಡೆಸಿದ್ದು, ಆನಂತರ ನಿರಂತರವಾಗಿ ಎಂಟು ಮಂದಿ ಆತ್ಯಾಚಾರ ಎಸಗಿದ್ದಾರೆ. ಈ ವಿಚಾರ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮಗು ಕಣ್ಣೀರು ಹಾಕಿದರೂ ಅಸಲಿ ಸತ್ಯವನ್ನು ಹೇಳಿರಲಿಲ್ಲ. ಕಣ್ಣಲ್ಲಿ ನೀರು ಬರುವುದನ್ನು ನೋಡಿ ಪೋಷಕರು ಕೇಳಿದಾಗ, ಕಬಾಬ್ ತಿಂದಿದ್ದಕ್ಕೆ ಕಣ್ಣಲ್ಲಿ ನೀರು ಬರುತ್ತಿದೆ ಎಂದು ಹೇಳಿದ್ದಳು.

ಅನುಮಾನಗೊಂಡು ಪೋಷಕರು ಮತ್ತಷ್ಟು ವಿಷಯ ಪ್ರಸ್ತಾಪಿಸಿದಾಗ ಎಂಟು ಮಂದಿ ಅತ್ಯಾಚಾರ ಎಸಗಿರುವ ಸಂಗತಿ ಗೊತ್ತಾಗಿದೆ. ಈ ಕುರಿತು ಯಲಹಂಕ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಏಳು ಆರೊಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ , ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications