ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ "Free hug" ಪೋಸ್ಟರ್‌ ಹಿಡಿದ ಯುವತಿ, ವೈರಲ್‌

ಬೆಂಗಳೂರು, ಜನವರಿ, 01: ಬೆಂಗಳೂರಿನ ಜನರು 2023 ರ ನೂತನ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಹೊಸವರ್ಷವನ್ನು ಬರಮಾಡಿಕೊಳ್ಳಲು ಡಿಸೆಂಬರ್‌ 31 ಬೆಳಗ್ಗೆಯಿಂದಲೇ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಅದರಲ್ಲಿಯೂ ಚರ್ಚ್‌ಸ್ಟ್ರೀಟ್‌, ಬ್ರಿಗೇಡ್‌ ರೋಡ್‌, ಎಂಜಿ ರೋಡ್‌ಗಳಲ್ಲಿ ಎಲ್ಲಿ ನೋಡಿದರೂ ಕೂಡ ಯುವಕ, ಯುವತಿಯರದ್ಧೆ ದರ್ಬಾರ್‌ ಆಗಿತ್ತು. ಹೊಸ ವರ್ಷದ ಪ್ರಯುಕ್ತ ಶನಿವಾರ (ಡಿಸೆಂಬರ್‌ 31) ರಾತ್ರಿ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಚರ್ಚ್‌ಸ್ಟ್ರೀಟ್ ಜನರಿಂದ ತುಂಬಿ ತುಳುಕುತ್ತಿತ್ತು. ಹೊಸ ವರ್ಷಾಚರಣೆ ಸಂಭ್ರಮದ ಮಧ್ಯೆಯೇ ಯುವತಿಯೊಬ್ಬಳು ಉಚಿತ ಅಪ್ಪುಗೆ (Free hug) ಎನ್ನುವ ಪೋಸ್ಟರ್‌ ಹಿಡಿದುಕೊಂಡು ನಿಂತಿದ್ದು, ಈ ಪೋಸ್ಟರ್‌ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಬ್ರಿಗೇಡ್ ರಸ್ತೆಯಲ್ಲಿ ಶನಿವಾರ ನಿಂತುಕೊಂಡಿದ್ದ ಯುವತಿಯೊಬ್ಬಳು "Free hug" ಎಂದು ಬರೆದಿದ್ದ ಫಲಕವನ್ನು ಹಿಡಿದುಕೊಂಡು ನೋಡುಗರ ಗಮನವನ್ನು ಸೆಳೆದಿದ್ದಳು. ಯಾರೂ ಬೇಕಾದರೂ ಬಂದು ತನ್ನನ್ನು ಉಚಿತವಾಗಿ ಅಪ್ಪಿಕೊಳ್ಳಬಹುದು ಎಂದು ಬಹಿರಂಗವಾಗಿಯೇ ಪೋಸ್ಟರ್‌ ಮೂಲಕ ಯುವಕ-ಯುವತಿಯರಿಗೆ ಆಹ್ವಾನ ನೀಡಿದ್ದಳು. ಯುವತಿಯ ಉಚಿತ ಅಪ್ಪುಗೆಯ ಫಲಕವನ್ನು ನೋಡಿದ ಅನೇಕ ಯುವಕರು, ಆಕೆಯನ್ನು ಅಪ್ಪಿಕೊಳ್ಳಲು ತಾ ಮುಂದು, ನೀ ಮುಂದು ಎನ್ನುವಂತೆ ಮುಗಿಬಿದ್ದಿದರು.

ಯುವಕರಿಗೆ ಎಚ್ಚರಿಕೆ ನೀಡಿದ ಪೊಲೀಸರು

Free hug ಎನ್ನುವ ಲಕ ಹಿಡಿದಿದ್ದ ಯುವತಿಗೆ ಯುವಕ-ಯುವತಿಯರು ಒಬ್ಬೊಬ್ಬರಾಗಿ ಬಂದು ಅಪ್ಪಿಕೊಳ್ಳುತ್ತಿದ್ದ ದೃಶ್ಯವೂ ಕಂಡುಬಂದಿತ್ತು. ಆಗ ಇದನ್ನು ಕೂಡಲೇ ಕಂಡ ಪೊಲೀಸರು ಯುವತಿಯನ್ನು ಅಪ್ಪಿಕೊಳ್ಳಲು ಸರದಿಯಲ್ಲಿ ನಿಂತಿದ್ದ ಯುವಕ-ಯುವತಿಯರಿಗೆ ಎಚ್ಚರಿಕೆ ಸಂದೇಶವನ್ನು ನೀಡಿ, ಹಾಗೆಯೇ ಜೊತೆಗೆ ಫ್ರೀ ಹಗ್‌ ಎಂಬ ಫಲಕ ಹಿಡಿದಿದ್ದ ಯುವತಿಗೂ ಬುದ್ಧಿ ಮಾತು ಹೇಳಿ ಅಲ್ಲಿಂದ ವಾಪಸ್‌ ಕಳುಹಿಸಿದ್ದಾರೆ.

Free hug campaign by a young girl in church street, Bengaluru

ಯುವತಿಗೆ ಬುದ್ಧಿವಾದ ಹೇಳಿದ ಪೊಲೀಸರು

ಈ ವೇಳೆ ಫ್ರೀ ಹಗ್ ಎನ್ನುವ ಫಲಕವನ್ನು ಹಿಡಿದುಕೊಂಡು ನಿಂತಿದ್ದ ಯುವತಿ ಕೆಲಕಾಲ ಗಾಬರಿಗೊಂಡಿದ್ದಳು. ಅಲ್ಲದೇ ಯುವತಿಯನ್ನು ಅಪ್ಪಿಕೊಳ್ಳಲು ಬಂದಿದ್ದವರು ಪೊಲೀಸರನ್ನು ಕಂಡ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಫಲಕ ಹಿಡಿದು ನಿಂತಿದ್ದ ಯುವತಿಗೆ ಬುದ್ದಿವಾದ ಹೇಳಿದ ಪೊಲೀಸರು ಸ್ಥಳದಿಂದ ತೆರಳುವಂತೆ ಸೂಚಿಸಿದರು. ಪೊಲೀಸರ ಬುದ್ಧಿವಾದದ ಬಳಿಕ ಯುವತಿಯೂ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಸ್ಥಳದಿಂದ ಹೊರಟು ಹೋಗಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+