ಹೆಣ್ಣುಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೂ ಉಚಿತ ಶಿಕ್ಷಣ
ಬೆಂಗಳೂರು, ಮಾರ್ಚ್ 07: ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಪ್ರಸಕ್ತ ಸಾಲಿನಿಂದ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಭರವಸೆ ನೀಡಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ದೃಷ್ಟಿಯಿಂದ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಅವರ ಉಜ್ವಲ ಭವಿಷ್ಯ ಹಾಳಾಗಬಾರದು ಎಂದರು.
ನವೀಕರಣ ಹಾಗೂ ಹೊಸ ಕಟ್ಟಡ ಕಟ್ಟಲು 25ಕೋಟಿ ಅನುದಾನ ಬಿಡುಗಡೆ ಮಾಡಿದರು. ಶತಮಾನೋತ್ಸವ ನೆನಪಿಗಾಗಿ ನೂರು ಕೋಟಿ ನೀಡಿದ್ದೇವೆ. ಈ ವಿವಿ ಅನೇಕ ಗಣ್ಯರನ್ನ ಹುಟ್ಟುಹಾಕಿದೆ.ದೊಡ್ಡ ದೊಡ್ಡ ಹುದ್ದೆಯನ್ನ ಅಲಂಕರಿಸಿದ್ದಾರೆ. ಎಲ್ಲರೂ ಸೇರಿ ಶತಮಾನೋತ್ಸವವನ್ನ ವಿಜೃಂಭಣೆಯಿಂದ ನಡೆಸಿ ಎಂದು ಹೇಳಿದರು.

ರೊದ್ದಂ ನರಸಿಂಹಯ್ಯ ಎನ್ನುವ ಬದಲು ವಡ್ಡ ಎಂದ ಸಿದ್ದರಾಮಯ್ಯ: ರೊದ್ದಂ ನರಸಿಂಹಯ್ಯ ಎನ್ನುವ ಬದಲು ವಡ್ಡ ಎಂದು ಹೇಳಿ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡರು. ಮೂಲಭೂತ ಸೌಕರ್ಯಕ್ಕಾಗಿ ಒಂದು ಸಾವಿರ ಕೋಟಿ ಅಗತ್ಯವಿದ್ದು, 500ಕೋಟಿ ರೂ ತಕ್ಷಣಕ್ಕೆ ಬಿಡುಗಡೆ ಮಾಡುವಂತೆ ಬೆಂಗಳೂರು ಕೇಂದ್ರ ವಿವಿ ಕುಲಪತಿ ಜಾಫೆಟ್ ರಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಸೆಂಟ್ರಲ್ ಕಾಲೇಜು 43ಎಕರೆ ಇದೆ, 13ವಿಧಾನಸಭಾ ಕ್ಷೇತ್ರಗಳು ವಿವಿ ವ್ಯಾಪ್ತಿಯಲ್ಲಿದ್ದು, 50 ಎಕರೆ ಹೆಚ್ಚುವರಿಯಾಗಿ ಜಾಗ ಕೊಡಿಸುವಂತೆ ಮನವಿ. ಮನವಿಗೆ ಒಪ್ಪಿಗೆ ಕೊಟ್ಟು ವಿವಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಸಲ್ಲಿಸಿದರು.












Click it and Unblock the Notifications