ಮುಗ್ಧ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಬಾಬಾ ಸರೆ
ಬೆಂಗಳೂರು, ಮೇ 14: ಮುಗ್ಧ ಮಹಿಳೆಯರನ್ನು ಟಾರ್ಗೆಟ ಮಾಡಿ ವಂಚಿಸುತ್ತಿದ್ದ ನಕಲಿ ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ. ಆಭರಣ ದೋಚುತ್ತಿದ್ದ ದೆಹಲಿ ಮೂಲದ ನಕಲಿ ಬಾಬಾನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಹೆಚ್ಚಾಗಿ ಮುಗ್ಧರು, ಮಾನಸಿಕವಾಗಿ ದುರ್ಬಲರು ಹಾಗೂ ಸುಲಭವಾಗಿ ಮರುಳಾಗುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ.
ತಲೆಗೆ ಬಿಳಿ ರುಮಾಲು, ಶುಭ್ರ ವಸ್ತ್ರ, ಕುತ್ತಿಗೆಯಲ್ಲಿ, ಕೈಯಲ್ಲಿ ಜಪಮಣಿಗಳು, ಜೋಳಿಗೆ ಹಾಕಿಕೊಂಡು ನೋಡಲು ಸಂಭಾವಿತನಂತೆ ಕಾಣುವ ರಜವಂತ್ ಸಿಂಗ್, ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಯಾಮಾರಿಸಿದ್ದ, ಮತ್ತೆ ಅದೇ ರೀತಿ ಹಣ ದೋಚಲು ಸಂಚು ರೂಪಿಸಿ, ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ.

ಎಇಸಿಎಸ್ ಲೇಔಟ್‌ನ ವಿವಿಧ ರಸ್ತೆಗಳಲ್ಲಿ ಓಡಾಡುತ್ತ, ಸಿಖ್ ಸಮದಾಯದವರನ್ನೇ ಹುಡುಕುತ್ತಿದ್ದ, ಮನೆ ಪ್ರವೇಶಿಸಿ ಕುಟುಂದಲ್ಲಿ ಸಮಸ್ಯೆ, ಕಷ್ಟಗಳು, ಶಿಕ್ಷಣ, ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುವ ಬಾಬಾ ಸೋಗಿನಲ್ಲಿ ಮಹಿಳೆಯರನ್ನು ಮಾತನಾಡಿಸುತ್ತಿದ್ದ, ಬಳಿಕ ಗುರು ನಾನಕ್ ಫೋಟೊ ತೋರಿಸಿ ಮಂತ್ರ ಹೇಳಿ ವಶೀಕರಣ ಮಾಡುತ್ತಿದ್ದ.












Click it and Unblock the Notifications