ಕೇಬಲ್ ಕಾಮಗಾರಿ, ಬೆಂಗಳೂರಲ್ಲಿ 4 ದಿನ ವಿದ್ಯುತ್ ವ್ಯತ್ಯಯ
ಬೆಂಗಳೂರು, ನವೆಂಬರ್ 28: ಕೇಬಲ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನವೆಂಬರ್ 29, 30 ಡಿಸೆಂಬರ್ 1 ಹಾಗೂ 2ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ತುರ್ತು ಕೇಬಲ್ ಬದಲಾವಣೆ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಎಲ್ಲೆಲ್ಲಿ ವ್ಯತ್ಯಯ: ಎಸ್‌ಟಿ ಬೆಡ್, ಅಶ್ವಿನಿ ಬಡಾವಣೆ, ಈಜಿಪುರ, ಆರಾಧನಾ ಬಡಾವಣೆ, ಸುಂದರಿ ಮೆಮೊರಿಯಲ್ ಪ್ರದೇಶ, ವಿವೇಕನಗರ, ರಾಮ ದೇವಸ್ಥಾನ, ಸಿಮೆಂಟ್ ಲೈನ್, ಆಸ್ಟಿನ್‌ಟೌನ್ ಬಿಡಿಎ, ನೀಲಸಂದ್ರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.












Click it and Unblock the Notifications