Prajwal Revanna: ಪ್ರಜ್ವಲ್‌ ರೇವಣ್ಣ ಕೇಸ್‌ಗೆ ಟ್ವಿಸ್ಟ್; ವಿಡಿಯೋ ಅಸಲಿ ಎಂದ ಎಫ್‌ಎಸ್‌ಎಲ್ ವರದಿ

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಹಂಚಿಕೆಯಾಗಿರುವ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಅಸಲಿ ಎನ್ನುವುದು ಸಾಬೀತಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಯಲ್ಲಿ ವಿಡಿಯೋ ಅಸಲಿ ಎಂದು ಸಾಬೀತಾಗಿದ್ದು, ಎಸ್‌ಐಟಿ ತನಿಖೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಪ್ರಜ್ವಲ್ ರೇವಣ್ಣ ಈಗ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ವಿಡಿಯೋಗಳ ಸತ್ಯಾಸತ್ಯತೆ ಪರಿಶೀಲಿಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದರು. ಈಗ ವರದಿ ಎಸ್‌ಐಟಿ ಅಧಿಕಾರಿಗಳ ಕೈಸೇರಿದ್ದು, ವಿಡಿಯೋಗಳನ್ನು ತಿರುಚಿಲ್ಲ, ಎಲ್ಲವೂ ಅಸಲಿ ಎಂದು ಗೊತ್ತಾಗಿದೆ.

Forensic Science Confirms Authenticity of Prajwal Revanna s Videos

ಅಶ್ಲೀಲ ವಿಡಿಯೋಗಳು ಅಸಲಿ ಎನ್ನುವುದು ಸಾಬೀತಾಗಿದೆ, ಆದರೆ ವಿಡಿಯೋದಲ್ಲಿ ಇರುವುದು ಪ್ರಜ್ವಲ್ ರೇವಣ್ಣ ಅವರೇನಾ ಅಥವಾ ಅಲ್ಲವಾ ಎನ್ನುವುದನ್ನು ತನಿಖೆಯಿಂದ ಪತ್ತೆ ಹೆಚ್ಚಬೇಕಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ.

ಎಸ್‌ಐಟಿ ಮುಂದೆ ಹೊಸ ಸವಾಲು!

ವೈರಲ್ ಆಗಿರುವ ಅಶ್ಲೀಲ ವಿಡಿಯೋಗಳಲ್ಲಿ ವ್ಯಕ್ತಿಯ ಮುಖವನ್ನು ತೋರಿಸಿಲ್ಲ. ವಿಡಿಯೋದಲ್ಲಿರುವ ವ್ಯಕ್ತಿಗೂ ಹಾಗೂ ಬಂಧಿತನಾಗಿರುವ ಪ್ರಜ್ವಲ್ ರೇವಣ್ಣ ಅವರಿಗೂ ಹೋಲಿಕೆ ಮಾಡಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಈಗ ಮತ್ತಷ್ಟು ಚುರುಕು ಪಡೆಯಲಿದ್ದು, ಒಂದು ವೇಳೆ ವಿಡಿಯೋದಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದನ್ನು ಎಸ್‌ಐಟಿ ಸಾಬೀತುಪಡಿಸಿದರೆ ಪ್ರಕರಣದಲ್ಲಿ ತನಿಖೆ ಒಂದು ಹಂತಕ್ಕೆ ಬಂದಂತಾಗುತ್ತದೆ.

ಎಸ್‌ಐಟಿ ಈಗಾಗಲೇ ಪ್ರಕರಣದ ಬಗ್ಗೆ ವ್ಯಾಪಕ ತನಿಖೆ ನಡಸುತ್ತಿದ್ದು, ಆರೋಪ ಪಟ್ಟಿ ಸಲ್ಲಿಕೆ ಮಾಡಲು ಸಜ್ಜಾಗುತ್ತಿದೆ. ಶೀಘ್ರದಲ್ಲೇ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+