Bengaluru : ಸಿಲಿಕಾನ್‌ ಸಿಟಿಯ ಟ್ರಾಫಿಕ್ ಬಗ್ಗೆ ವಿದೇಶಿಗನ ವಿಡಿಯೋ, Viral Video ನೋಡಿ ನೆಟ್ಟಿಗರು ಹೇಳಿದ್ದೇನು?

ಬೆಂಗಳೂರು ತನ್ನ ಟ್ರಾಫಿಕ್ ಮತ್ತು ಜನದಟ್ಟಣೆಯ ರಸ್ತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಚರ್ಚೆಯಾಗುತ್ತಲೇ ಇರುತ್ತದೆ. ಅನೇಕರು ಈ ನಗರವನ್ನು ಟ್ರಾಫಿಕ್‌ನಿಂದಾಗಿ ಅಸ್ತವ್ಯಸ್ತವಾಗಿರುವ ನಗರ ಎಂದು ಹೇಳುತ್ತಾರೆ. ಪೀಕ್ ಅವರ್ ಟ್ರಾಫಿಕ್ ಜಾಮ್‌ನಿಂದ ಹಿಡಿದು ಮೂಲಸೌಕರ್ಯಗಳ ವರೆಗೆ, ಬೆಂಗಳೂರು ನಗರವು ಯಾವಗಲೂ ಚರ್ಚೆಯ ವಿಷಯವಾಗಿರುತ್ತದೆ. ಆದರೆ, ಇದೀಗ ವಿದೇಶಿ ಪ್ರವಾಸಿಗರೊಬ್ಬರು ತಮ್ಮ ವಿಡಿಯೋ ಮೂಲಕ ಈ ಅಭಿಪ್ರಾಯಗಳೆಲ್ಲವನ್ನು ಅಲ್ಲಗಳೆದಿದ್ದು, ಬೆಂಗಳೂರು ಸದಾ ಕಾಲ ಗೊಂದಲಮಯವಾಗಿರುವುದಿಲ್ಲ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ "ಬೆಂಗಳೂರು ನಿಜವಾಗಿಯೂ ಗೊಂದಲಮಯವಾಗಿದೆಯೇ?" (Is Bangalore really chaotic?) ಎಂಬ ಶೀರ್ಷಿಕೆಯಡಿ ಲೆನ್ ಕುಕ್ (Len Cook) ಎಂಬುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಬೆಂಗಳೂರಿನ ರಸ್ತೆಯೊಂದರ ದೃಶ್ಯವನ್ನು ಸೆರೆಹಿಡಿದು ತೋರಿಸಿದ್ದಾರೆ. ವಿಡಿಯೋದಲ್ಲಿ ವಾಹನಗಳು ಮತ್ತು ಜನರು ಶಾಂತವಾಗಿ ಸಂಚರಿಸುತ್ತಿರುವುದನ್ನು ಕಾಣಬಹುದು. "ಬೆಂಗಳೂರು ಯಾವಾಗಲೂ ಗೊಂದಲಮಯ, ಜನದಟ್ಟಣೆಯಿಂದ ತುಂಬಿರುತ್ತದೆ ಎಂಬುದು ತಪ್ಪು" ಎಂದು ಕುಕ್ ಹೇಳಿದ್ದಾರೆ.

Foreign Vlogger

"ಬೆಂಗಳೂರಿನ ಯಾವುದೋ ಒಂದು ರಸ್ತೆ, ಯಾವುದೋ ಒಂದು ಸಮಯ. ಇದು ನಿಮಗೆ ಗೊಂದಲಮಯವಾಗಿ ಕಾಣುತ್ತಿದೆಯೇ? ಇಲ್ಲ," ಎಂದು ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ. ವ್ಯಾಪಾರ ಮಳಿಗೆಗಳು, ಪಾದಚಾರಿಗಳು ಮತ್ತು ವಾಹನಗಳಿರುವ ಸಾಕಷ್ಟು ಜನರು ಇರುವ ಈ ಪ್ರದೇಶದಲ್ಲಿ ಕೂಡ ವಾತಾವರಣ ತುಂಬಾ ಶಾಂತವಾಗಿದೆ ಎಂದು ಅವರು ತಮ್ಮ ವಿಡಿಯೋದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Bengaluru: ಫಾಕ್ಸ್‌ಕಾನ್ ಫ್ಯಾಕ್ಟರಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಕತ್ತು ಸೀಳಿ ಕೊಂದ ತಾಯಿ
Bengaluru: ಫಾಕ್ಸ್‌ಕಾನ್ ಫ್ಯಾಕ್ಟರಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಕತ್ತು ಸೀಳಿ ಕೊಂದ ತಾಯಿ

ಭಾರತದಲ್ಲಿ ಜೀವನ ಆರಂಭಿಸಲು ಬಂದಿರುವ ಲೆನ್ ಕುಕ್ ವಿಡಿಯೋ ಎಲ್ಲರಿಗೂ ಆಶಾದಾಯಕವಾಗಿದೆ.

ನೆಟ್ಟಿಗರ ಪ್ರತಿಕ್ರಿಯೆಗಳೇನು?

ಲೆನ್ ಕುಕ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ವಿಡಿಯೋವನ್ನು ಒಪ್ಪಿಕೊಂಡಿಲ್ಲ. ಬಳಕೆದಾರರೊಬ್ಬರು, "ಇದು ತಪ್ಪು ಬ್ರೋ. ವಿಶೇಷವಾಗಿ ಸಂಜೆ ವೇಳೆ ಮತ್ತು ಐಟಿ ಹಬ್‌ಗಳಿರುವ ಪ್ರದೇಶಗಳಲ್ಲಿ ಬೆಂಗಳೂರು ಸಂಪೂರ್ಣ ಗೊಂದಲಮಯವಾಗಿರುತ್ತದೆ. ನಾನು ಬೆಂಗಳೂರಿನಲ್ಲೇ ಹುಟ್ಟಿದವನು, 2010ಕ್ಕೆ ಹೋಲಿಸಿದರೆ 2026ರಲ್ಲಿ ಇಲ್ಲಿ ವಾಸಿಸುವುದು ನರಕವಾಗಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Viral Mango Recipes: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿರುವ ಈ 7 ಮಾವಿನಹಣ್ಣಿನ ರೆಸಿಪಿಗಳು: ನೀವೂ ಒಮ್ಮೆ ಟ್ರೈ ಮಾಡಿ
Viral Mango Recipes: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿರುವ ಈ 7 ಮಾವಿನಹಣ್ಣಿನ ರೆಸಿಪಿಗಳು: ನೀವೂ ಒಮ್ಮೆ ಟ್ರೈ ಮಾಡಿ

ಆದರೆ ಇನ್ನೂ ಕೆಲವರು ಲೆನ್ ಕುಕ್ ಅವರ ಮಾತಿಗೆ ದನಿಗೂಡಿಸಿದ್ದಾರೆ. "ಧನ್ಯವಾದಗಳು! ದಿನದ ಕೆಲವು ನಿರ್ದಿಷ್ಟ ಸಮಯಗಳಲ್ಲಿ ಕೆಲವು ಪ್ರದೇಶಗಳು ತುಂಬಾ ಶಾಂತವಾಗಿರುತ್ತವೆ, ನೀವು ಖಂಡಿತವಾಗಿಯೂ ಅವುಗಳನ್ನು ನೋಡಬೇಕು" ಎಂದು ಬೆಂಬಲಿಸಿದ್ದಾರೆ. ಮತ್ತೊಬ್ಬರು, "ಅದ್ಭುತ ಸರ್, ನನ್ನ ತವರೂರು ಬೆಂಗಳೂರನ್ನು ಅನ್ವೇಷಿಸುತ್ತಿರುವುದಕ್ಕೆ ಧನ್ಯವಾದಗಳು," ಎಂದು ಬರೆದಿದ್ದಾರೆ.

ಒಟ್ಟಾರೆಯಾಗಿ, ನಗರದ ಟ್ರಾಫಿಕ್ ಕುರಿತಾದ ಈ ಚರ್ಚೆ ಸದ್ಯ ಇಂಟರ್ನೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+