ಫ್ಲಾಟ್ ಗಳ ವಿದ್ಯುತ್ ಸಂಪರ್ಕಕ್ಕೆ ಬಿಬಿಎಂಪಿ ಪ್ರಮಾಣ ಪತ್ರ ಬೇಕಿಲ್ಲ
ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರಿನಲ್ಲಿರುವ ಅಪಾರ್ಟ್ ಮೆಂಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಬಿಬಿಎಂಪಿ ಯಿಂದ ಪ್ರಮಾಣ ಪತ್ರದ ಅಗತ್ಯ ಬೇಕಿಲ್ಲ.ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (ಕೆಇಆರ್ ಸಿ) ನೀಡುವ ಪ್ರಮಾಣ ಪತ್ರವಷ್ಟೇ ಸಾಕು ಎಂದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಫ್ಲಾಟ್ ಮಾಲೀಕರು ಕೆಇಆರ್ ಸಿ ಆದೇಶ ಪಡೆದು ವಿದ್ಯುತ್ ಸಂಪರ್ಕ ಪಡೆಯುವುದರ ವಿರುದ್ಧ ಬಿಬಿಎಂಪಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಫ್ಲಾಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಫ್ಲಾಟ್ ಮಾಲೀಕರು ಬಿಬಿಎಂಪಿಯಿಂದ ಸ್ವಾಧೀನ ಪತ್ರದ ಅಗತ್ಯವೇನಿಲ್ಲ.
ಸ್ವಾಧೀನ ಪತ್ರ ಪಡೆಯುವುದು ಬಿಲ್ಡರ್ ಗಳ ಹೊಣೆ. ಇದಕ್ಕೆ ಫ್ಲಾಟ್ ಮಾಲೀಕರು ಹೊಣೆಯಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.












Click it and Unblock the Notifications