ಬೆಂಗಳೂರಿಗರಿಗಿದು ಮರೆಯಲಾಗದ ಆಗಸ್ಟ್ ತಿಂಗಳು!

ಬೆಂಗಳೂರು, ಆಗಸ್ಟ್ 28: ಕಳೆದ ಹಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯಾದರೆ ಸಾಕು ಸುರಿಯುವ ಮಳೆ ಹೊಸ ದಾಖಲೆಯನ್ನು ಬರೆದಿದೆ. 1998 ರಲ್ಲಿ ದಾಖಲಾಗಿದ್ದ 387.1 ಮೀ.ಮಿ. ಮಳೆಯ ದಾಖಲೆಗೆ ಪೈಪೋಟಿ ನೀಡುವಂತೆ ಆಗಸ್ಟ್ 27(2017) ರವರೆಗೆ 351.8 ಮಿ.ಮೀ. ಮಳೆ ಸುರಿದಿದೆ.

ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಗೆ ಹೋಲಿಸಿದರೆ 1998 ರ ನಂತರ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಮಳೆ ಸುರಿದಿದೆ. ಇನ್ನು ಕೆಲವು ದಿನಗಳ ಕಾಲ ಮಳೆ ಹೀಗೆಯೇ ಸುರಿಯುವ ಲಕ್ಷಣವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

For Bengalurians the wettest month is this August!

ಆಗಸ್ಟ್ ತಿಂಗಳು ಪೂರ್ತಿ ಉದ್ಯಾನ ನಗರಿಗಂತೂ ಒದ್ದೆ ಭಾಗ್ಯವೇ! ಅದರಲ್ಲೂ ನಿನ್ನೆ(ಆಗಸ್ಟ್ 27 ) ಸುರಿದ ಮಳೆಗಂತೂ ಮೈಕೋ ಲೇಔಟ್, ಶಾಂತಿನಿಕೇತನ ಲೇಔಟ್, ಬ್ರಿಗೇಡ್ ರೋಡ್ ಜಂಕ್ಷನ್, ಬನಶಂಕರಿ, ಹೊಸೂರ್ ರಸ್ತೆ ಮುಂತಾದ ಕಡೆಗಳಲ್ಲಿ ರಸ್ತೆ ತುಂಬ ನೀರು ತುಂಬಿ ಸಂಚಾರ ಅಸ್ತವ್ಯಸ್ತವಾಗಿತ್ತು. ಹಲವು ಮರಗಳು ಧರೆಗುಳಿದಿದ್ದವು.

ಇನ್ನು ಎರಡು ದಿನ ಇದೇ ರೀತಿ ಮಳೆಯಾದರೆ ಬೆಂಗಳೂರಿಗರಿಗೆ ಸಾಕಪ್ಪಾ ಮಳೆಯ ಸಹವಾಸ ಅನ್ನಿಸಿದರೆ ಅಚ್ಚರಿಯೇನಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+