ಬಿಬಿಎಂಪಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ

ಬೆಂಗಳೂರು, ಜನವರಿ 9: ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯದಲ್ಲಿನ ಅನಧಿಕೃತ ಓಎಫ್ಸಿ ಕೇಬಲ್ ಹಾಗೂ ಪಾದಚಾರಿ ಮಾರ್ಗಗಳಲ್ಲಿಯ ಒತ್ತುವರಿಯನ್ನು ಗುರುವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಿಭಾಗದ ವಾರ್ಡ್-54 ಮತ್ತು 82ರಲ್ಲಿ ಶಾಂತಿನಿಕೇತನ ಅಪಾರ್ಟ್ಮೆಂಟನಿಂದ ಐಟಿಪಿಎಲ್ ಸಿಗ್ನಲ್ ವರೆಗಿನ ರಸ್ತೆಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಒಟ್ಟು 15,000ಮೀ ಉದ್ದದ ಓಎಫ್ಸಿ ಕೇಬಲ್‌ಗಳನ್ನು ಹಾಗೂ ಸದರಿ ರಸ್ತೆಯಲ್ಲಿ ಎರಡು ಬದಿಗಳಲ್ಲಿ ಪಾದಚಾರಿ ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಂತಹ ಅಂಗಡಿಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಉಪವಿಭಾಗ ಮಟ್ಟದ ಅಭಿಯಂತರರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

Footpath Clearance Operation By BBMP In Mahadevapur Limits

ಗುರುವಾರ ಜರುಗಿದ ಕಾರ್ಯಾಚರಣೆಯಲ್ಲಿ ಒಟ್ಟು 20 ತಾತ್ಕಾಲಿಕ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆಯೆಂದು ಮಹದೇವಪುರ ವಲಯದ ಮುಖ್ಯ ಅಭಿಯಂತರರಾದ ಆರ್.ಎಲ್.ಪರಮೇಶ್ವರಯ್ಯ ರವರು ತಿಳಿಸಿದ್ದಾರೆ ಹಾಗೂ ಇದೇ ಕಾರ್ಯಾಚರಣೆಯನ್ನು ಇತರೆ ವಾರ್ಡ್ಗಳಲ್ಲಿಯೂ ಸಹ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+