ಎಚ್‌ಎಲ್‌ಸುತ್ತ ಡ್ರೋಣ್ ಹಾರಾಟ, ಇಬ್ಬರ ಬಂಧನ

ಬೆಂಗಳೂರು, ಡಿಸೆಂಬರ್ 24 : ಎಚ್‌ಎಎಲ್ ರನ್‌ ವೇ ಆವರಣದಲ್ಲಿ ಡ್ರೋಣ್ ಹಾರಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೆಲಿಕಾಪ್ಟರ್ ಹಾರಾಟ ನಡೆಸುವಾಗ ಡ್ರೋಣ್ ರಡಾರ್‌ ವ್ಯಾಪ್ತಿಗೆ ಸಿಕ್ಕಿದ್ದು, ಆಡಳಿತ ಮಂಡಳಿ ದೂರು ನೀಡಿತ್ತು.

ಬಂಧಿತ ಆರೋಪಿಗಳನ್ನು ಸಯ್ಯದ್ (24), ಭರತ್ (28) ಎಂದು ಗುರುತಿಸಲಾಗಿದೆ. ಇಬ್ಬರು ಸಹ ವೈಟ್‌ಫೀಲ್ಡ್‌ ನಿವಾಸಿಗಳಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಡಿಸೆಂಬರ್ 15ರಂದು ಎಚ್‌ಎಎಲ್ ಆವರಣದಲ್ಲಿನ ಹೆಲಿಕಾಪ್ಟರ್ ಪ್ರಾಯೋಗಿಕ ಹಾರಾಟ ನಡೆಸುವಾಗ ಅಪಾರ್ಟ್‌ಮೆಂಟ್ ಮೇಲಿಂದ ಡ್ರೋನ್ ಅನ್ನು ಬಿಟ್ಟು, ಚಿತ್ರೀಕರಣ ನಡೆಸಲಾಗುತ್ತಿತ್ತು.

Flying drone in HAL, Two arrested

ಎಚ್‌ಎಎಲ್ ಚೀಫ್ ಮ್ಯಾನೇಜರ್ ಕೃಷ್ಣಾ ನಾಯಕ್ ಅವರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು. 'ಹೆಲಿಕಾಪ್ಟರ್ ಹಾರಾಟ ನಡೆಸುವಾಗ ರಡಾರ್‌ ವ್ಯಾಪ್ತಿಗೆ ಡ್ರೋಣ್ ಸಿಕ್ಕಿದೆ. ಡ್ರೋಣ್ ಹಾರಾಟ ಹೆಲಿಕಾಪ್ಟರ್ ಪೈಲೆಟ್ ಜೀವಕ್ಕೆ ಅಪಾಯ ತರಬಹುದು' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಯ್ಯದ್ ಮತ್ತು ಭರತ್ ವಿಚಾರಣೆ ನಡೆಸಲಾಗುತ್ತಿದೆ. ನಿಷೇಧಿತ ಸ್ಥಳದಲ್ಲಿ ಡ್ರೋಣ್ ಹಾರಾಟ ನಡೆಸಿದ್ದೇಕೆ? ಎಂದು ತನಿಖೆ ನಡೆಸಲಾಗುತ್ತಿದೆ. ಪ್ರೇಸ್ಟಿಜ್‌ ಗ್ರೂಪ್‌ಗೆ ಸೇರಿದ ಅಪಾರ್ಟ್‌ಮೆಂಟ್ ಮೇಲಿಂದ ಡ್ರೋಣ್ ಮೂಲಕ ಜಾಹೀರಾತಿಗೆ ಚಿತ್ರೀಕರಣ ನಡೆಸುತ್ತಿದ್ದೆವು ಎಂದು ಆರೋಪಿಗಳು ಹೇಳಿದ್ದಾರೆ.

ಐಪಿಸಿ ಸೆಕ್ಷನ್ 188, 287, 336, 353 ಅಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಎಚ್‌ಎಎಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಚ್‌ಎಎಲ್ ಆವರಣದ ಸುತ್ತ ಡ್ರೋಣ್ ಹಾರಾಟ ನಿಷೇಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+