ಕಬ್ಬನ್ ಪಾರ್ಕ್ : ಆ.15, 16ರಂದು ವಾಹನ ಸಂಚಾರ ನಿಷೇಧ
ಬೆಂಗಳೂರು, ಆಗಸ್ಟ್ 14 : ಕಬ್ಬನ್ ಪಾರ್ಕ್‌ನೊಳಗೆ ಭಾನುವಾರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ, ಈ ವಾರ ಸ್ವಾತಂತ್ರ ದಿನಾಚರಣೆ ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದರಿಂದ ಶನಿವಾರವೂ ಸಹ ವಾಹನ ಸಂಚಾರವನ್ನು ನಿಷೇಧಿಸಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಕಬ್ಬನ್ ಪಾರ್ಕ್‌ನಲ್ಲಿ ಆ.15 ರಿಂದ 17ರ ತನಕ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ, ಆ.14ರ ಶುಕ್ರವಾರ ರಾತ್ರಿ 10 ಗಂಟೆಯಿಂದ ಉದ್ಯಾನದೊಳಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.[ಕಬ್ಬನ್ ಪಾರ್ಕ್ ನಲ್ಲೂ ಫಲಪುಷ್ಪ ಪ್ರದರ್ಶನ]

ಉದ್ಯಾನದ ಒಳಭಾಗದ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ಕೆ.ಆರ್ ವೃತ್ತದ ಕಡೆಗೆ ಮತ್ತು ವಿಧಾನಸೌಧದ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ಕ್ವೀನ್ಸ್ ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ಯು.ಬಿ. ಸಿಟಿ ಕಡೆಯಿಂದ ಬಂದು ಸಿದ್ದಲಿಂಗಯ್ಯ ವೃತ್ತದ ಮೂಲಕ ಉದ್ಯಾನ ಪ್ರವೇಶಿಸುವ ವಾಹನ ಸಂಚಾರವನ್ನು ಸಿದ್ದಲಿಂಗಯ್ಯ ವೃತ್ತದಲ್ಲಿ ನಿಷೇಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. [ಹೂವಿನ ಅರಮನೆ ನೋಡದಿದ್ದರೆ ನಿಮಗೇ ನಷ್ಟ]
ಪರ್ಯಾಯ ಮಾರ್ಗಗಳು
* ಕೆ.ಆರ್. ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ನೃಪತುಂಗ ರಸ್ತೆ, ಪೊಲೀಸ್ ಕಾರ್ನರ್, ಕಸ್ತೂರಿ ಬಾ ರಸ್ತೆ ಮೂಲಕ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಅಥವಾ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ಪೊಲೀಸ್ ತಿಮ್ಮಯ್ಯ ವೃತ್ತ, ಕಾಫಿ ಬೋರ್ಡ್, ಬಾಳೇಕುಂದ್ರಿ ವೃತ್ತ ಹಾಗೂ ಕ್ವೀನ್ಸ್ ರಸ್ತೆ ಮೂಲಕ ಸಿದ್ದಲಿಂಗಯ್ಯ ವೃತ್ತದ ಕಡೆ ಸಾಗಬಹುದು.
* ಹಡ್ಸನ್ ವೃತ್ತದ ಮೂಲಕ ಕಬ್ಬನ್ ಉದ್ಯಾನ ಪ್ರವೇಶಿಸುವ ವಾಹನಗಳು ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಕ್ವೀನ್ಸ್ ವೃತ್ತದ ಮೂಲಕ ಮುಂದೆ ಸಾಗಬಹುದು.
* ಗೋಪಾಲಗೌಡ ವೃತ್ತದ ಮೂಲಕ ಉದ್ಯಾನ ಪ್ರವೇಶಿಸುವ ವಾಹನಗಳನ್ನು ಗೋಪಾಲಗೌಡ ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ಈ ವಾಹನಗಳು ಕೆ.ಆರ್. ವೃತ್ತದ ಮೂಲಕ ಮುಂದೆ ಹೋಗಬೇಕು.












Click it and Unblock the Notifications