Flipkart Food Delivery: ಫುಡ್ ಡೆಲಿವರಿಗೂ ಕಾಲಿಟ್ಟ ಫ್ಲಿಪ್‌ಕಾರ್ಟ್; ಈಟ್ ಇನ್ ಪ್ರಾಯೋಗಿಕ ಪರೀಕ್ಷೆ
Flipkart Food Delivery: ಫ್ಲಿಪ್‌ಕಾರ್ಟ್ ದೇಶದ ಪ್ರಮುಖ ಇ-ಕಾಮರ್ಸ್ ಸಂಸ್ಥೆ. ಆನ್‌ಲೈನ್ ಡೆಲಿವೆರಿ ಪ್ಲಾಟ್‌ಫಾರ್ಮ್ ಆಗಿರುವ ಈ ಸಂಸ್ಥೆ ಬಹಳ ಜನಪ್ರಿಯವಾಗಿದೆ. ಬಟ್ಟೆ ಬರೆ, ಅಡುಗೆ ಮನೆ ಸಾಮಾನು, ಎಲೆಕ್ರ್ಟಾನಿಕ್ ಐಟಂಗಳು, ಫ್ಯಾಷನ್ ಸಾಮಗ್ರಿಗಳು, ಹೀಗೆ ಎಲ್ಲವೂ ಈ ಪ್ಲಾಟ್‌ಫಾರಂನಲ್ಲಿ ಸಿಗುತ್ತದೆ. ಮಾತ್ರವಲ್ಲ ಫ್ಲಿಪ್ ಕಾರ್ಟ್ ಮಿನಿಟ್ ಮೂಲಕ ದಿನಬಳಕೆಯ ವಸ್ತುಗಳನ್ನು ಕೂಡಾ ಕೆಲವೇ ನಿಮಿಷಗಳಲ್ಲಿ ಗ್ರಾಹಕರಿಗೆ ಒದಗಿಸುತ್ತದೆ. ಇದೀಗ ಈ ದೈತ್ಯ ಸಂಸ್ಥೆ ಫುಡ್ ಡೆಲಿವೆರಿ ಕ್ಷೇತ್ರಕ್ಕೆ ಕಾಲಿಡುತ್ತಿದೆ. ತನ್ನ ಹೊಸ ಸೇವೆಯಾದ ಈಟ್ ಇನ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಲು ಮುಂದಾಗಿದೆ. ಇದಕ್ಕೂ ಮೊದಲು ತನ್ನ ಆಹಾರ ವಿತರಣಾ ಸೇವೆಯ ಪರೀಕ್ಷೆಯನ್ನು ಪ್ರಾರಂಭಿಸಿದೆ. ಇದರ ಅಂಗವಾಗಿ ತನ್ನ ಬೆಂಗಳೂರಿನಲ್ಲಿರುವ ಉದ್ಯೋಗಿಗಳಿಗಾಗಿ ಪ್ರಾಯೋಗಿಕ ಪರೀಕ್ಷೆ ಆರಂಭಿಸಿದೆ. ಈ ಮೂಲಕ ಫ್ಲಿಪ್‌ಕಾರ್ಟ್ ಜೊಮಾಟೊ ಮತ್ತು ಸ್ವಿಗ್ಗಿಗೆ ಪೈಪೋಟಿ ನೀಡುವ ಸಿದ್ದತೆಯಲ್ಲಿದೆ.
ಮೂಲಗಳ ಪ್ರಕಾರ ಸೆಪ್ಟೆಂಬರ್ 15 ರ ಸುಮಾರಿಗೆ ಈ ಸೇವೆಯನ್ನು ಎಲ್ಲಾ ಫ್ಲಿಪ್‌ಕಾರ್ಟ್ ಉದ್ಯೋಗಿಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ.ನಂತರ ಈ ಸೇವೆ ಬೆಂಗಳೂರಿನ ಗ್ರಾಹಕರಿಗೆ ಲಭ್ಯವಾಗಲಿದೆ.

ಫುಡ್ ಡೆಲಿವೆರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್
ಸದ್ಯಕ್ಕೆ, ಈಟ್ ಇನ್ ಮುಖ್ಯ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿಯೇ ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಫ್ಲಿಪ್‌ಕಾರ್ಟ್ ತನ್ನ ವ್ಯವಹಾರವನ್ನು ವಿಸ್ತರಿಸುವಾಗ ಫುಡ್ ಡೆಲಿವೆರಿ ಸೇವೆಗಾಗಿ ಪ್ರತ್ಯೇಕ ಅಪ್ಲಿಕೇಶನ್ ಅನ್ನು ಶುರು ಮಾಡಬಹುದು. ಮೊದಲು ಈ ಆಹಾರ ವಿತರಣಾ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿ ನಂತರ, ಕಂಪನಿಯು ಇತರ ನಗರಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ.
ಹೆಚ್ಚುತ್ತಿದೆ ಪೈಪೋಟಿ
ಭಾರತದ ಆಹಾರ ವಿತರಣಾ ಮಾರುಕಟ್ಟೆಯಲ್ಲಿ ಈಗಾಗಲೇ ಪೈಪೋಟಿ ಹೆಚ್ಚಾಗಿದೆ. ಗ್ರಾಹಕರನ್ನು ಆಕರ್ಷಿಸಲು ಈ ಸಂಸ್ಥೆಗಳು ಬೇರೆ ಬೇರೆ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿವೆ. ಈ ಮಧ್ಯೆ ಫ್ಲಿಪ್‌ಕಾರ್ಟ್ ಕೂಡಾ ಈ ಕ್ಷೇತ್ರಕ್ಕೆ ಕಾಲಿಟ್ಟಿದೆ. ಶೂನ್ಯ ಕಮಿಷನ್ ಮಾದರಿಯನ್ನು ಅನುಸರಿಸುವ ರಾಪಿಡೊದ ಆಹಾರ ವಿತರಣಾ ಸೇವೆ ಓನ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ 50,000 ದೈನಂದಿನ ಆರ್ಡರ್‌ಗಳನ್ನು ದಾಟಿದೆ. ಈ ನಡುವೆ, CLSA ಪ್ರಕಾರ, ಕಡಿಮೆ ದರದಲ್ಲಿ ಫುಡ್ ಡೆಲಿವೆರಿ ಮಡುವ ಟೋಯಿಂಗ್ ಈಗ ಸಾಪ್ತಾಹಿಕ ಸಕ್ರಿಯ ಬಳಕೆದಾರರಲ್ಲಿ ಜೊಮಾಟೊಗೆ ಸಮನಾಗಿದೆ. ಅಂದರೆ ಟೋಯಿಂಗ್ ಜೊಮಾಟೋಗೆ ಸರಿಯಾಗಿಯೇ ಟಕ್ಕರ್ ನೀಡುತ್ತಿದೆ ಎಂದಾಯಿತು.
ಆಹಾರ ವಿತರಣಾ ಕ್ಷೇತ್ರವನ್ನು ಪ್ರವೇಶಿಸುವ ಯೋಜನೆಯನ್ನು ಫ್ಲಿಪ್‌ಕಾರ್ಟ್ ಜುಲೈಯಲ್ಲಿಯೇ ದೃಢಪಡಿಸಿತ್ತು. ಫ್ಲಿಪ್‌ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ಈ ಬಗ್ಗೆ ಮಾಹಿತಿ ಕೊಟ್ಟಿದ್ದರು.
ವಿವಿಧ ಸೇವೆಗಳನ್ನು ಒದಗಿಸ್ತಾ ಇರುವ ಫ್ಲಿಪ್‌ಕಾರ್ಟ್
ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಹೊಸ ಸೇವೆಯನ್ನು ಸೇರಿಸುತ್ತಿದೆ. ಈ ಸಾಲಿನಲ್ಲಿ ಇದೀಗ ಫುಡ್ ಡೆಲಿವೆರಿ ಸೇರಿಕೊಂಡಿದೆ. ಕಂಪನಿಯು ಇತ್ತೀಚೆಗೆ ಮೈಕ್ರೋ ಡ್ರಾಮಾ ವಿಭಾಗವನ್ನು ಪ್ರವೇಶಿಸಿದ್ದು, ಅದರ ಅಪ್ಲಿಕೇಶನ್‌ನಲ್ಲಿ ಶಾರ್ಟ್ ಫಾರ್ಮ್ ವೀಡಿಯೊ ಕಟೆಂಟನ್ನು ಕೊಡುತ್ತಿದೆ. ಫ್ಲಿಪ್‌ಕಾರ್ಟ್ ಮೈಂತ್ರಾ ಮೂಲಕ ಫ್ಯಾಷನ್, ಕ್ಲಿಯರ್‌ಟ್ರಿಪ್ ಮೂಲಕ ಪ್ರಯಾಣ, ಸೂಪರ್.ಮನಿ ಮೂಲಕ ಹಣಕಾಸು ಸೇವೆಗಳು ಮತ್ತು ಫ್ಲಿಪ್‌ಕಾರ್ಟ್ ಮಿನಿಟ್ಸ್ ಮೂಲಕ ಕ್ವಿಕ್ ಕಾಮರ್ಸ್‌ನಲ್ಲಿಯೂ ಕಾರ್ಯನಿರ್ವಹಿಸುತ್ತದೆ.
ಈಗಾಗಲೇ ಫುಡ್ ಡೆಲಿವೆರಿಗಾಗಿ ಬಹಳಷ್ಟು appಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಸ್ವಿಗ್ಗಿ ಮತ್ತು ಜೊಮಾಟೋ ಮುಂಚೂಣಿಯಲ್ಲಿದೆ. ಅದರಲ್ಲಿಯೂ ಕಡಿಮೆ ಬೆಲೆಯಲ್ಲಿ ಫುಡ್ ಡೆಲಿವೆರಿ ಮಾಡುತ್ತಿರುವ ಓನ್ಲಿ ಮತ್ತು ಸ್ವಿಗ್ಗಿಯ ಟೋಯಿಂಗ್ ಜನ ಮನ್ನಣೆ ಗಳಿಸ್ತಾ ಇದೆ. ಇದರ ನಡುವೆ ಫ್ಲಿಪ್ ಕಾರ್ಟ್ ಕೂಡಾ ಈ ರೇಸ್‌ನಲ್ಲಿ ಬಂದು ನಿಂತಿದೆ. ಅಂದರೆ ಕಂಪನಿಯು ಈಗ ಎಟರ್ನಲ್ ಒಡೆತನದ ಜೊಮಾಟೊ ಮತ್ತು ಸ್ವಿಗ್ಗಿ ಜೊತೆ ನೇರವಾಗಿ ಸ್ಪರ್ಧಿಸಲಿದೆ.


Click it and Unblock the Notifications
