ಎಂಆರ್‌ಪಿ ಬೆಲೆಗಿಂತಲೂ ಅಧಿಕ ಬೆಲೆಗೆ ಶಾಂಪೂ ಮಾರಿದ ಫ್ಲಿಪ್‌ಕಾರ್ಟ್‌ಗೆ ದಂಡ!

ಬೆಂಗಳೂರು, ಡಿಸೆಂಬರ್‌ 7: ಮಹಿಳೆಯೊಬ್ಬರಿಗೆ ಆನ್‌ಲೈನ್‌ನಲ್ಲಿ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಗಿಂತಲೂ ಅಧಿಕ ಬೆಲೆಗೆ ಶಾಂಪೂ ಮಾರಾಟ ಮಾಡಿದ ಫ್ಲಿಪ್‌ಕಾರ್ಟ್ ಸಂಸ್ಥೆಗೆ ಗ್ರಾಹಕ ನ್ಯಾಯಲಯ 20,000 ಪರಿಹಾರ ನೀಡುವಂತೆ ಸೂಚನೆ ನೀಡಿದೆ.

ಬೆಂಗಳೂರು ಮಹಿಳೆಯೊಬ್ಬರು ಜನಪ್ರಿಯ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಖರೀದಿಸಿದ ಶಾಂಪೂ ಬಾಟಲಿಗೆ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಗಿಂತ ಹೆಚ್ಚಿನ ಶುಲ್ಕ ವಿಧಿಸಲಾಗಿದೆ ಎಂದು ಆರೋಪಿಸಿ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಮೇಲೆ ನ್ಯಾಯಲಯದಲ್ಲಿ ಮೊಕದ್ದಮೆ ಹೂಡಿದ್ದರು.

Flipkart fined for selling shampoo above MRP price

ಆಕೆಯ ಪರವಾಗಿ ತೀರ್ಪು ನೀಡಿದ ಬೆಂಗಳೂರು ಗ್ರಾಹಕ ನ್ಯಾಯಾಲಯವು ಫ್ಲಿಪ್‌ಕಾರ್ಟ್ ಗೆ ಈ ಅನ್ಯಾಯದ ವ್ಯಾಪಾರಕ್ಕೆ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ಗ್ರಾಹಕರಿಗೆ ರೂ 20,000 ಪರಿಹಾರವನ್ನು ನೀಡುವಂತೆ ಕಂಪನಿಗೆ ಸೂಚಿಸಿತು.

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಜಾಹೀರಾತುಗಳಿಂದ ಪ್ರಭಾವಿತರಾದ ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯ ನಿವಾಸಿ ಸೌಮ್ಯಾ ಪಿ ಅವರು ಅಕ್ಟೋಬರ್ 2019 ರಲ್ಲಿ ಪತಂಜಲಿ ಕೇಶ್ ಕಾಂತಿ ಪ್ರೋಟೀನ್ ಹೇರ್ ಕ್ಲೆನ್ಸರ್ ಬಾಟಲಿಯನ್ನು ಆರ್ಡರ್ ಮಾಡಿದ್ದರು. ಬಳಿಕ ಅವರು ಶಾಂಪೂಗಾಗಿ ಫೋನ್‌ಪೇ ಮೂಲಕ 191 ರೂಪಾಯಿ ಪಾವತಿಸಿದ್ದರು. ಆದರೆ ಅದನ್ನು ಸ್ವೀಕರಿಸುವಾಗ ಬಾಟಲಿಯ ಮೇಲಿನ ಎಂಆರ್‌ಪಿ 95 ರೂಪಾಯಿ ಇತ್ತು. ಆದರೆ ಫ್ಲಿಪ್‌ಕಾರ್ಟ್‌ ನೀಡಿದ ಇನ್‌ವಾಯ್ಸ್‌ನಲ್ಲಿ 191 ರೂ. ಎಂದು ಬರೆಯಲಾಗಿತ್ತು.

ಆಗ ಈ ಬಗ್ಗೆ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ 140ಗೆ ರೂಪಾಯಿ ಮತ್ತು ಶಿಪ್ಪಿಂಗ್‌ಗಾಗಿ ಹೆಚ್ಚುವರಿ 99 ರೂ ಎಂದು ಬರೆಯಲಾಗಿತ್ತು ಎಂದು ತಿಳಿದುಬಂದಿದೆ. ಇದರಿಂದ ರೊಚ್ಚಿಗೆದ್ದ ಸೌಮ್ಯಾ ಫ್ಲಿಪ್‌ಕಾರ್ಟ್‌ನ ಕಸ್ಟಮರ್ ಕೇರ್‌ಗೆ ಕಾಲ್‌ ಮಾಡಿದ್ದರು. ಆದರೆ ಅವರು ನೀಡಿದ್ದ ಪ್ರತಿಕ್ರಿಯೆಯಿಂದ ಅತೃಪ್ತಿಗೊಂಡ ಸೌಮ್ಯಾ ಕಾನೂನು ಕ್ರಮಕ್ಕೆ ಮುಂದಾದರು.

2019 ರಿಂದ ಪ್ರಕರಣ:

ಅಕ್ಟೋಬರ್ 2019 ರಲ್ಲಿ ಮಹಿಳೆ ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸೂರತ್‌ನ ಶಾಂಪೂ ಮಾರಾಟಗಾರ ಎಚ್‌ಬಿಕೆ ಎಂಟರ್‌ಪ್ರೈಸಸ್ ವಿರುದ್ಧ ಬೆಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಅವರು ಸ್ವತಂತ್ರವಾಗಿ ತನ್ನ ಪ್ರಕರಣವನ್ನು ವಾದಿಸಿದರು. ಅಲ್ಲದೆ ಪ್ರಕರಣ ಸಂಬಂಧ ಛಾಯಾಚಿತ್ರಗಳು ಮತ್ತು ಸಂಬಂಧಿತ ದಾಖಲೆಗಳನ್ನು ಒದಗಿಸಿದ್ದರು.

ಆದಾಗ್ಯೂ ಫ್ಲಿಪ್‌ಕಾರ್ಟ್‌ನ ವಕೀಲರು ಮಹಿಳೆಯ ಆರೋಪಗಳನ್ನು ನಿರಾಕರಿಸಿದರು. ತಮ್ಮ ಕಡೆಯಿಂದ ಯಾವುದೇ ಸೇವಾ ಕೊರತೆಯಾಗಿಲ್ಲ ಎಂದು ಹೇಳಿದರು. ಅವರ ವಾದಗಳ ಹೊರತಾಗಿಯೂ ನ್ಯಾಯಾಲಯವು ಫ್ಲಿಪ್‌ಕಾರ್ಟ್‌ನ ಪ್ರತಿವಾದವನ್ನು ಆಧಾರರಹಿತ ಮತ್ತು ಕಾನೂನಿನ ಅಡಿಯಲ್ಲಿ ನ್ಯಾಯಸಮ್ಮತವಲ್ಲ ಎಂದು ಪರಿಗಣಿಸಿತು.

ಮಹಿಳೆ ಪರ ಗ್ರಾಹಕರ ನ್ಯಾಯಾಲಯದ ತೀರ್ಪು:

ಅಕ್ಟೋಬರ್ 13, 2023 ರಂದು ನೀಡಿದ ತನ್ನ ತೀರ್ಪಿನಲ್ಲಿ Flipkart ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂವನ್ನು ಮಾರಾಟ ಮಾಡುವ ಮೂಲಕ ಅನ್ಯಾಯದ ವ್ಯಾಪಾರದ ಮಾರ್ಗ ಅನುಸರಿಸಿದೆ ಎಂದು ಗ್ರಾಹಕರ ವೇದಿಕೆ ಹೇಳಿತು. ನಂತರ ನ್ಯಾಯಾಲಯವು ಫ್ಲಿಪ್‌ಕಾರ್ಟ್‌ಗೆ ಶಾಂಪೂಗಾಗಿ ವಿಧಿಸಲಾದ ಹೆಚ್ಚುವರಿ 96 ರೂ. ಅನ್ನು ಮರುಪಾವತಿಸುವಂತೆ ಆದೇಶಿಸಿತು, ಸೇವಾ ಕೊರತೆಗಾಗಿ ರೂ 10,000 ಹೆಚ್ಚುವರಿ ರೂ 5,000 ಅನ್ಯಾಯದ ವ್ಯಾಪಾರಕ್ಕಾಗಿ 5,000 ರೂ. ಆಕೆಯ ನ್ಯಾಯಾಲಯದ ವೆಚ್ಚಕ್ಕಾಗಿ ನೀಡುವಂತೆ ಆದೇಶಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+