ಆಕಸ್ಮಿಕ ಬೆಂಕಿ ಹಿನ್ನೆಲೆ ಏರೋ ಶೋ ತಾತ್ಕಾಲಿಕ ಸ್ಥಗಿತ

ಬೆಂಗಳೂರು, ಫೆಬ್ರವರಿ 23: ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಶೋವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ಒಣಹುಲ್ಲಿಗೆ ಆಕಸ್ಮಿಕವಾಗಿ ತಗುಲಿದ್ದ ಬೆಂಕಿಯಿಮದಾಗಿ ನಿಲುಗಡೆ ಮಾಡಿದ್ದ 50ಕ್ಕೂ ಹೆಚ್ಚು ಕಾರುಗಳು ಅತ್ನಿಗಾಹುತಿಯಾಗಿವೆ.

Fire in parking lot in aero india show temporarily stopped

ಗೇಟ್ ನಂಬರ್ 5 ಬಳಿ ಇರುವ ಪಾರ್ಕಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸುಮಾರು 10 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ

ವೈಮಾನಿಕ ಪ್ರದರ್ಶನ ನಡೆಯುವ ಜಾಗದ ಸುತ್ತಮುತ್ತ ದಟ್ಟ ಹೊಗೆ ಇರುವ ಹಿನ್ನೆಲೆ ಕೊನೆಯ ವೈಮಾನಿಕ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.

ಇದೀಗ 2 ಗಂಟೆಗೆ ಮತ್ತೊಂದು ವೈಮಾನಿಕ ಪ್ರದರ್ಶನವಿದ್ದು ಇದೀಗ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

150ಕ್ಕೂ ಹೆಚ್ಚು ವಾಹನಗಳು ಹೊತ್ತಿ ಉರಿದಿದೆ. ಸಾವು ನೋವುಗಳು ಸಂಭವಿಸಿದ ಕುರಿತು ಯಾವುದೇ ವರದಿಯಾಗಿಲ್ಲ.

ಫೆ.19ರಂದು ವೈಮಾನಿಕ ಪ್ರದರ್ಶನ ತಾಲೀಮು ವೇಳೆ ಸೂರ್ಯ ಕಿರಣ ಎರಡು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೈಲಟ್ ಸಾಹಿಲ್ ಎನ್ನುವವರು ಮೃತಪಟ್ಟಿದ್ದರು.

ಇನ್ನುಳಿದ ಇಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+