ರೆಬಲ್ ಸ್ಟಾರ್ ನಿರ್ಗಮನಕ್ಕೆ ಕಣ್ಣೀರಾದ ಕಲಾವಿದರು, ರಾಜಕಾರಣಿಗಳು

ಬೆಂಗಳೂರು, ನವೆಂಬರ್ 25: ಮಾಜಿ ಸಚಿವ, ನಟ ರೆಬಲ್ ಸ್ಟಾರ್ ಅಂಬರೀಶ್ ನವೆಂಬರ್ 24 ರಂದು ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನವೆಂಬರ್ 26ರಂದು ನಡೆಯಲಿದೆ.

ಇದಕ್ಕೆ ವರನಟ ಡಾ ರಾಜ್‌ಕುಮಾರ್ ಕುಟುಂಬ ಕೂಡ ಸಮ್ಮರಿ ಸೂಚಿಸಿದೆ. ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.

ಮಂಡ್ಯದ ಪಾಲಿಗೆ ನವೆಂಬರ್ 24 ದುರಂತದ ದಿನ. ಬಸ್ ನಾಲೆಗೆ ಬಿದ್ದು 30 ಮಂದಿ ಮೃತಪಟ್ಟ ದುರಂತದ ಸುದ್ದಿಯ ಆಘಾತದ ಮಧ್ಯೆಯೇ ಎಲ್ಲನ ನೆಚ್ಚಿನ ನಾಯಕ ಅಂಬರೀಶ್ ಅವರನ್ನು ಕಳೆದುಕೊಂಡ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಅಂಬರೀಶ್ ನಿಧನಕ್ಕೆ ಜನನಾಯಕರು ಕಂಬನಿ ಮಿಡಿದಿದ್ದಾರೆ.

ಅಂಬರೀಶ್ ನಿಧನ ಬರಸಿಡಿಲಿನಂತೆ ಎರಗಿದೆ

ಮಂಡ್ಯದ ಘೋರ ದುರಂತವೊಂದನ್ನು ಕೇಳಿದ ನಂತರ ಇದೀಗ ರಾಜಕೀಯವಾಗಿ ನನ್ನ ಜೊತೆ ಹೆಜ್ಜೆ ಹಾಕಿದ್ದ ಅಂಬರೀಶ್ ಅವರು ಸಹಾ ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕವು ಅಮೂಲ್ಯವಾದ ರತ್ನವನ್ನು ಕಳೆದುಕೊಂಡಿದ್ದು, ನಮ್ಮನ್ನು ಅಗಲಿರುವ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.

ಪರಮೇಶ್ವರ ಸಂತಾಪ: ಮಂಡ್ಯದ ಪಾಲಿಗೆ ಇಂದು ಕರಾಳ ದಿನ

ಅಪಘಾತದ ನೋವನ್ನು ಜೀರ್ಣಿಸಿಕೊಳ್ಳುತ್ತಿರುವಾಗಲೇ ಮಂಡ್ಯದ ಗಂಡೆಂದೇ ಜನಪ್ರಿಯರಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ನಿಧನ ಆಘಾತವನ್ನುಂಟು ಮಾಡಿದೆ. ರಾಜ್ಯ ಹಾಗೂ ಮಂಡ್ಯದ ಪಾಲಿಗೆ ಇಂದು ಕರಾಳ ದಿನ. ಅಂಬರೀಶ್ ಅವರ ಕುಟುಂಬಕ್ಕೆ ಭಗವಂತ ನೋವನ್ನು ಸಹಿಸುವ ಶಕ್ತಿ ನೀಡಲಿ. ಚಿತ್ರರಂಗ ಹಾಗೂ ರಾಜ್ಯ ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಂಬಿ ನಿಧನಕ್ಕೆ ಯಡಿಯೂರಪ್ಪ ಸಂತಾಪ

ಹಿರಿಯ ನಟ, ರಾಜಕಾರಣಿ ಅಂಬರೀಶ್ ಅವರನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ. ಒಬ್ಬ ಒಳ್ಳೆಯ ಸ್ನೇಹಿತರಾಗಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವನ್ನುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

Array

ದಿನೇಶ್ ಗುಂಡೂರಾವ್ ಸಂತಾಪ

ಅಂಬರೀಶ್ ನಿಧನ ತೀವ್ರ ಆಘಾತ ಉಂಟುಮಾಡಿದೆ, ಅಂಬರೀಶ್ ಅವರ ಕುಟುಂಬಕ್ಕೆ ಭಗವಂತ ನೋವನ್ನು ಸಹಿಸುವ ಶಕ್ತಿ ನೀಡಲಿ. ಚಿತ್ರರಂಗ ಹಾಗೂ ರಾಜ್ಯ ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ ಎಂದು ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ.

ಅಂಬರೀಶ್ ನಿಧನಕ್ಕೆ ಲೀಲಾವತಿ ಕಣ್ಣೀರು

ಅಂಬರೀಶ್ ನಿಧನಕ್ಕೆ ಲೀಲಾವತಿ ಕಣ್ಣೀರು

ಅಂಬರೀಶ್ ಅವರು ಅಮ್ಮ ನಾನು ನಿನ್ನ ಮಗನ ಪಾತ್ರ ಮಾಡಿದೀನಿ ಅಶೀರ್ವಾದ ಮಾಡಮ್ಮ ಎಂದು ಹೇಳುತ್ತಿದ್ದರು, ಯಾವುದೂ ನಾನು ಮರೆಯಲು ಸಾಧ್ಯವಿ್ಲ, ಅಂಬರೀಶ್ ಆತ್ಮಕ್ಕೆ ಶಾಂತಿ ಕೊಡಲಿ, ಮೋಕ್ಷಕೊಡಲಿ, ಅಂಬರೀಶ್ ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು ಎಂದು ಹಿರಿಯ ನಟಿ ಲೀಲಾವತಿ ಭಾವುಕರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+