ಬೆಂಗಳೂರು ವಿವಿ ಮಹಿಳಾ ಹಾಸ್ಟೆಲ್‌ನಲ್ಲಿ ಜಗಳ, ಹಲ್ಲೆ
ಬೆಂಗಳೂರು, ಜನವರಿ 9: ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್‌ನಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ, ನಡುವೆ ವಿದ್ಯಾರ್ಥಿನಿಯರ ಮೇಲೆ ಹಲ್ಲೆಯೂ ನಡೆದಿದೆ.
ಯುವತಿಯೊಬ್ಬಳು ಹಲ್ಲೆಯಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದ್ದು, ಹಲ್ಲೆಯ ಹಂತದ ವರೆಗೆ ತಲುಪಿದೆ. ಪೊಲೀಸರು ಹಾಗೂ ವಿವಿ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿನಿಯ ಹೇಳಿಕೆ ಮೇರೆಗೆ ಹಲ್ಲೆ ನಡೆಸಿರುವ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಎಫ್‌ಐಆರ್ ದಾಳಿಲಿಸಿದ್ದಾರೆ. ಹಲ್ಲೆಗೆ ಒಳಗಾದ ವಿದ್ಯಾರ್ಥಿನಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾಗಿರುವ ಹೊಸ ಹಾಸ್ಟೆಲ್‌ಗೆ ಸೇರಿದವಳು, ಸಂಜೆ ಟೀ ಸೇವನೆಗಾಗಿ ಆ ಹಾಸ್ಟೆಲ್‌ಗೆ ಹೋಗಿದ್ದಳು.
ಆಕೆಯ ಕೈ ತಪ್ಪಿ ಟೀ ಚೆಲ್ಲದೆ, ಇದನ್ನು ಪ್ರಶ್ನಿಸಿ ಹಳೆ ಹಾಸ್ಟೆಲ್ ವಿದ್ಯಾರ್ಥಿನಿಯರು ಜಗಳ ತೆಗೆದಿದ್ದಾರೆ, ಹಲ್ಲೆ ನಡೆಸಿದ್ದಾರೆ.












Click it and Unblock the Notifications