ಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನ
ಬೆಂಗಳೂರು, ಫೆಬ್ರವರಿ 19 : ಬೆಂಗಳೂರು ಏರ್ ಶೋ 2019ರ ತರಬೇತಿ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಇಬ್ಬರು ಪೈಲೆಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸಹ ಪೈಲೆಟ್ ಒಬ್ಬರು ಮೃತಪಟ್ಟಿದ್ದಾರೆ.
ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ
ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ಯಲಹಂಕ ಬಳಿಯ ಗಂಟಿಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಎರಡು ಸೂರ್ಯ ಕಿರಣ್ ವಿಮಾನಗಳು ತರಬೇತಿ ನಡೆಸುವ ವೇಳೆ ಮುಖಾಮುಖಿ ಡಿಕ್ಕಿಯಾಗಿವೆ.

ಯಲಹಂಕ ವಾಯುನೆಲೆಯಲ್ಲಿ ಫೆ.20ರ ಬುಧವಾರದಿಂದ ಏರ್ ಶೋ ಆರಂಭವಾಗಲಿದೆ. ಆದ್ದರಿಂದ, ತರಬೇತಿ ನಡೆಸಲಾಗುತ್ತಿತ್ತು. ಇಂದು ಬೆಳಗ್ಗೆ ತರಬೇತಿ ನಡೆಸುವಾಗ ಆಕಸ್ಮಿಕವಾಗಿ ವಿಮಾನಗಳು ಡಿಕ್ಕಿಯಾಗಿವೆ.
ವಿಮಾನದ ಪೈಲೆಟ್‌ಗಳು ತುರ್ತು ನಿರ್ಗಮನ ದ್ವಾರದಿಂದ ಕೆಳಗೆ ಹಾರಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಬ್ಬ ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಖಾಮುಖಿ ಡಿಕ್ಕಿಯಾದ ವಿಮಾನಗಳು ಮನೆಯ ಮೇಲೆ ಬಿದ್ದಿದ್ದು ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿ ಯಾರಿದ್ದರು? ಎಂಬುದು ಇನ್ನೂ ತಿಳಿದುಬಂದಿಲ್ಲ. ಶೆಡ್ ತರದ ಮನೆಯ ಮೇಲೆ ವಿಮಾನಗಳು ಬಿದ್ದಿದ್ದು, ಹೆಚ್ಚಿನ ಅನಾಹುತ ನಡೆದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
#WATCH Two aircraft of the Surya Kiran Aerobatics Team crash at the Yelahanka airbase in Bengaluru, during rehearsal for #AeroIndia2019. More details awaited. pic.twitter.com/kX0V5O0n6R
— ANI (@ANI) February 19, 2019












Click it and Unblock the Notifications