ಮೆಟ್ರೋ ದರವನ್ನು ರಾಜ್ಯ ಸರ್ಕಾರ ನಿರ್ಧರಿಸಲ್ಲ: ತೇಜಸ್ವಿ ಸೂರ್ಯಗೆ ಕಾಂಗ್ರೆಸ್‌ ಸ್ಪಷ್ಟನೆ

ಬೆಂಗಳೂರು ಮೆಟ್ರೋ ದೇಶದಲ್ಲಿಯೇ ಅತಿ ದುಬಾರಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪ ಮಾಡಿದ್ದಾರೆ. ಇದಕ್ಕೆ ಕರ್ನಾಟಕ ಕಾಂಗ್ರೆಸ್‌ ಪಕ್ಷವು ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರವಾಗಿ ತೇಜಸ್ವಿ ಸೂರ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಅಥವಾ ಕಾಂಗ್ರೆಸ್‌ ಕಾರಣ ಎಂದು ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌, "ಬೆಂಗಳೂರು ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ, ಮೊದಲು ಸತ್ಯ ತಿಳಿದುಕೊಳ್ಳಿ" ಎಂದು ತೇಜಸ್ವಿ ಸೂರ್ಯ ಅವರಿಗೆ ನೇರವಾಗಿ ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ. ಬೆಂಗಳೂರು ಮೆಟ್ರೋ ದರಗಳನ್ನು ಕರ್ನಾಟಕ ಸರ್ಕಾರ ನಿರ್ಧರಿಸುವುದೇ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿರುವ ಕಾಂಗ್ರೆಸ್‌, ಈ ದರ ನಿಗದಿ ಪ್ರಕ್ರಿಯೆ ಕೇಂದ್ರ ಸರ್ಕಾರದ ಕಾನೂನಿನ ಅಡಿಯಲ್ಲಿ ನಡೆಯುತ್ತದೆ ಎಂದು ತಿಳಿಸಿದೆ. ಈ ಕಾನೂನು ಬಿಜೆಪಿ ಆಡಳಿತಾವಧಿಯಲ್ಲಿ ರೂಪುಗೊಂಡು ಜಾರಿಯಾಗಿದೆ ಎಂದು ಕೂಡ ಕಾಂಗ್ರೆಸ್‌ ಹೇಳಿದೆ.

Fare Not Decided By State Congress Slams Tejasvi Surya Over Bengaluru Metro Price Hike

ಬಿಎಂಆರ್‌ಸಿಎಲ್ ಒಂದು ರಾಜ್ಯ ಸರ್ಕಾರದ ಸಂಸ್ಥೆಯಲ್ಲ, ಅದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಜಂಟಿ ಸಂಸ್ಥೆ. ಮೆಟ್ರೋ ದರ ನಿಗದಿ ಮಾಡುವ ಎಫ್‌ಎಫ್‌ಸಿಯನ್ನು ನೇಮಕ ಮಾಡುವ ಅಧಿಕಾರ ಕೇಂದ್ರ ಸರ್ಕಾರದ್ದು, ರಾಜ್ಯ ಸರ್ಕಾರದದ್ದಲ್ಲ. ಬಿಎಂಆರ್‌ಸಿಎಲ್‌ನ ಅಧ್ಯಕ್ಷರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ, ಅಂದರೆ ದೆಹಲಿಯಲ್ಲಿ ಕುಳಿತಿರುವ ಬಿಜೆಪಿ ನೇಮಕ ಮಾಡಿದ ಅಧಿಕಾರಿಯೇ ಆಗಿದ್ದಾರೆ. ಮೆಟ್ರೋ ಕಾಯ್ದೆಯ ಸೆಕ್ಷನ್‌ 37 ಪ್ರಕಾರ, ಎಫ್‌ಎಫ್‌ಸಿ ಶಿಫಾರಸುಗಳು ಕಡ್ಡಾಯವಾಗಿದ್ದು, ರಾಜ್ಯ ಸರ್ಕಾರಕ್ಕೆ ದರ ಹೆಚ್ಚಿಸಲು, ಬದಲಾಯಿಸಲು ಅಥವಾ ಹಿಂಪಡೆಯಲು ಯಾವುದೇ ಕಾನೂನು ಅಧಿಕಾರವೇ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಮೆಟ್ರೋ ದರ ₹60ರಿಂದ ₹90ರವರೆಗೆ ಏರಿರುವುದಕ್ಕೆ ಕಾಂಗ್ರೆಸ್‌ ಸರ್ಕಾರ ಕಾರಣ ಎಂಬ ಆರೋಪವನ್ನು ಕಾಂಗ್ರೆಸ್‌ ಸಂಪೂರ್ಣವಾಗಿ ತಳ್ಳಿ ಹಾಕಿದೆ. ಈ ದರ ಏರಿಕೆ ಕೇಂದ್ರ ಸರ್ಕಾರ ನೇಮಕ ಮಾಡಿದ ಎಫ್‌ಎಫ್‌ಸಿ ಮೂಲಕ ನಡೆದಿದೆ ಎಂದು ಹೇಳಿರುವ ಕಾಂಗ್ರೆಸ್‌, ಆ ಸಮಿತಿಯು ಬಳಸಿದ ವೆಚ್ಚ ಲೆಕ್ಕಾಚಾರದ ಸೂತ್ರವೂ ಬಿಜೆಪಿ ಆಡಳಿತಾವಧಿಯಲ್ಲಿ ಅನುಮೋದನೆಯಾದದ್ದೇ ಎಂದು ಆರೋಪಿಸಿದೆ. ಈ ನಿರ್ಧಾರವನ್ನು ಕರ್ನಾಟಕ ಸಚಿವ ಸಂಪುಟವೂ ತೆಗೆದುಕೊಂಡಿಲ್ಲ, ಮುಖ್ಯಮಂತ್ರಿ ಕೂಡ ನಿರ್ಧರಿಸಿಲ್ಲ, ಕಾಂಗ್ರೆಸ್‌ ಪಕ್ಷವೂ ಅಲ್ಲ ಎಂದು ಸ್ಪಷ್ಟಪಡಿಸಿದೆ.

ನಿಮ್ಮ ಕೇಂದ್ರ ಸರ್ಕಾರವನ್ನೇ ಕೇಳಿ

ಬೆಂಗಳೂರು ಮೆಟ್ರೋ ದೇಶದಲ್ಲೇ ಅತಿ ದುಬಾರಿ ಎನ್ನಲಾಗುತ್ತಿದ್ದರೆ, ಅದಕ್ಕೆ ಉತ್ತರವನ್ನು ಕೇಂದ್ರದಲ್ಲಿರುವ ನಿಮ್ಮದೇ ಬಿಜೆಪಿ ಸರ್ಕಾರದಿಂದ ಕೇಳಿ ಎಂದು ಕಾಂಗ್ರೆಸ್‌ ತೇಜಸ್ವಿ ಸೂರ್ಯ ಅವರಿಗೆ ಪ್ರಶ್ನಿಸಿದೆ. ಪ್ರತಿಸಾರಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ಮೇಲೆ ಆರೋಪ ಮಾಡುವ ರಾಜಕಾರಣವನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದೆ. ಕಾಂಗ್ರೆಸ್‌ ಪಕ್ಷವು ಅನ್ಯಾಯಕರ ದರ ಏರಿಕೆಯನ್ನು ಸದಾ ವಿರೋಧಿಸಿದೆ ಮತ್ತು ಕಾನೂನಿನ ಮಿತಿಯೊಳಗೆ ದರ ನಿಯಂತ್ರಣಕ್ಕಾಗಿ ಒತ್ತಾಯಿಸುತ್ತಲೇ ಬಂದಿದೆ ಎಂದು ಹೇಳಿದೆ.

ಬೆಂಗಳೂರು ನಾಗರಿಕರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್‌, ಬೆಂಗಳೂರು ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಿ, ಅಧಿಕಾರ ನಿಮ್ಮ ಕೈಯಲ್ಲಿರುವಾಗ ನಟಿಸುವುದನ್ನು ಬಿಡಿ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಎಕ್ಸ್‌ ಪೋಸ್ಟ್‌ ಮೂಲಕ ಮೆಟ್ರೋ ದರ ಏರಿಕೆಗೆ ಸಂಬಂಧಿಸಿದ ಹೊಣೆಗಾರಿಕೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತ ವ್ಯವಸ್ಥೆಯದ್ದೇ ಎಂಬುದನ್ನು ಕಾಂಗ್ರೆಸ್‌ ವಾದಿಸಿದೆ.

ತೇಜಸ್ವಿ ಆರೋಪವೇನು?

ಬೆಂಗಳೂರು ಮೆಟ್ರೋ ದೇಶದಲ್ಲಿಯೇ ಅತಿ ದುಬಾರಿ ಪ್ರಯಾಣದರವನ್ನು ಪ್ರಯಾಣಿಕರ ಮೇಲೆ ಹೇರುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪ ಮಾಡಿದ್ದರು. ಜನಪ್ರತಿನಿಧಿಗಳ, ಸಾರ್ವಜನಿಕರ ಪ್ರಬಲ ವಿರೋಧದ ಮಧ್ಯೆಯೂ ಈಗಾಗಲೇ ಮೆಟ್ರೋ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳದ ಮೂಲಕ ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್‌ ಸಾರ್ವಜನಿಕರ ಹಣವನ್ನು ಲೂಟಿ ಮಾಡಲು ಹೊರಟಿರುವುದು ದುರಂತ ಎಂದು ಟೀಕಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+