ಬೆಂಗಳೂರಿಗರೇ ಎಚ್ಚರ, ಅಸಲಿ ನೋಟನ್ನೂ ನಾಚಿಸುವ ಖೋಟಾ ನೋಟು ಬಂದಿವೆ
ಬೆಂಗಳೂರು, ಆಗಸ್ಟ್ 09: ಪಶ್ಚಿಮ ಬಂಗಾಳ ರಾಜ್ಯದಿಂದ ಬೆಂಗಳೂರಿಗೆ ಬಂದಿದ್ದ 4.34 ಲಕ್ಷ ಮೌಲ್ಯದ ಎರಡು ಸಾವಿರ ರೂಪಾಯಿ ಹೋಲುವ ಖೋಟಾ ನೋಟುಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ.
217 ಎರಡು ಸಾವಿರ ನೋಟುಗಳನ್ನು ಎನ್‌ಐಎ ವಶಪಡಿಸಿಕೊಂಡಿದ್ದು, ಈ ನೋಟುಗಳು ಬಹುತೇಕ ಹೊಸ ಎರಡು ಸಾವಿರ ನೋಟನ್ನು ಹೋಲುತ್ತಿವೆ. ಸಾಮಾನ್ಯ ವ್ಯಕ್ತಿಗಳಿಗೆ ಕಣ್ ಅಂದಾಜಿನಿಂದ ಗುರುತಿಸವುದು ಸಾಧ್ಯವೇ ಇಲ್ಲವಂತಿವೆ ಈ ನೋಟುಗಳು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್‌ಐಎ ತಂಡ ನಗರದ ಬಿಡಿಎ ಬಡಾವಣೆಯ ಅಲೂರಿನಲ್ಲಿ ಖೋಟಾ ನೋಟಿನ ದಂಧೆಯಲ್ಲಿ ತೊಡಗಿದ್ದ ನಗರದ ರಾಜು, ಬಾಗಲಕೋಟೆಯ ಗಂಗಾಧರ ಕೊಲ್ಕರ್, ಪಶ್ಚಿಮ ಬಂಗಾಳದ ರಾಜು ಎಂಬುವರನ್ನು ಬಂಧಿಸಿದ್ದಾರೆ.

ನಿನ್ನೆಯೇ ಎನ್‌ಐಎ ತಂಡ ಶ್ರೀರಾಮಪುರದ ಮನೆಯೊಂದರ ಮೇಲೆ ದಾಳಿ ಮಾಡಿ 2.5 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ನೋಟುಗಳೂ ಸಹ ಪಶ್ಚಿಮ ಬಂಗಾಳದಿಂದಲೇ ಬಂದವು ಎನ್ನಲಾಗಿದೆ.












Click it and Unblock the Notifications