ಚರ್ಚೆಗೆ ಕಾರಣವಾದ ಬೆಂಗಳೂರಿನ 'ಮೋದಿ ಮಸೀದಿ'

ಬೆಂಗಳೂರು, ಜೂನ್ 24: ಸಾಮಾಜಿಕ ಜಾಲ ತಾಣಗಳಲ್ಲಿ ಏನು ಬೇಕಾದರೂ ಟ್ರೆಂಡ್ ಮಾಡುವ ಶಕ್ತಿ ಇದೆ. ಪ್ರಧಾನಿ ಮೋದಿ ಹೆಸರಿನ ಮಸೀದಿಯೊಂದು ಬೆಂಗಳೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಯಾಗಿದೆ. ಇದು ಸೌಹಾರ್ದತೆಯ ಸಂಕೇತ ಎಂಬ ಸಂದೇಶ ಟ್ವಿಟ್ಟರ್ ನಲ್ಲಿ ಹರಿದಾಡಿತ್ತು. ಏನಿದರ ಅಸಲಿಯತ್ತು?

ಬೆಂಗಳೂರಿನಲ್ಲಿ ಮೋದಿ ಹೆಸರಿನಲ್ಲಿ ಮಸೀದಿ ಇರುವುದು ನಿಜ. ಆದರೆ, ಇದು ಹೊಸ ಮಸೀದಿಯೇನಲ್ಲ, ಅಲ್ಲದೇ ಪ್ರಧಾನಿ ಮೋದಿ ಅವರನ್ನು ಹೆಸರನ್ನು ಮಸೀದಿಗೆ ಇಟ್ಟಿಲ್ಲ.

ಮೋದಿ ಎಂಬ ಹೆಸರು ಬಂದಿದ್ದು ಹೇಗೆ?: 19ನೇ ಶತಮಾನದ ಮುಸ್ಲಿಂ ವ್ಯಾಪಾರಿಗಳಾದ ಮೋದಿ ಅಬ್ದುಲ್ ಗಫೂರ್ ಅವರು ಬೆಂಗಳೂರಿನಲ್ಲಿ ಮೂರು ಮಸೀದಿಗಳನ್ನು ನಿರ್ಮಿಸಲು ಹಣಕಾಸಿನ ನೆರವು ನೀಡಿದ್ದರು.

Fact check: No, Modi Mosque in Bengaluru not named after PM Modi

ಈಗ ಟ್ವಿಟ್ಟರ್ ನಲ್ಲಿ ಚಿತ್ರ ಸಮೇತ ಜನಪ್ರಿಯಗೊಂಡು ಚರ್ಚೆಯಾಗುತ್ತಿರುವ ಮಸೀದಿ ಟಸ್ಕರ್ ಟೌನ್ ನಲ್ಲಿದೆ. 1849ರಲ್ಲಿ ನಿರ್ಮಾಣವಾದ ಈ ಮಸೀದಿಯನ್ನು ನವೀಕರಣಗೊಳಿಸಲಾಗಿದ್ದರೂ ಹೊಸದಾಗಿ ನಿರ್ಮಾಣ ಮಾಡಿಲ್ಲ.

ಈ ಮಸೀದಿಯಲ್ಲದೆ, ಇನ್ನು ಎರಡು ಮಸೀದಿಗಳು ಬೆಂಗಳೂರಿನಲ್ಲಿವೆ. ಟ್ಯಾನರಿ ರಸ್ತೆಯಲ್ಲಿರುವ ಇನ್ನೆರಡು ಮಸೀದಿಗಳಿಗೂ ವ್ಯಾಪಾರಿ ಮೋದಿ ಅವರ ಹೆಸರಿಡಲಾಗಿದೆ.

ಈ ಟ್ವಿಟ್ಟರ್ ನಲ್ಲಿ ಏನಿದೆ? : ಬೆಂಗಳೂರಿನ ಮುಸ್ಲಿಮರು ಮಸೀದಿಯೊಂದಕ್ಕೆ ಮೋದಿ ಅವರ ಹೆಸರಿಟ್ಟಿದ್ದಾರೆ, ಈ ಚಿತ್ರ ನೋಡಿದ ಬಳಿಕ ಎಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಎಂದು ನಗುವ ಎಮೋಜಿಗಳನ್ನು ಹಾಕಲಾಗಿದೆ. ಆದರೆ, ಮಾಹಿತಿ ತಪ್ಪು ಎಂದು ತಿಳಿದ ಬಳಿಕ, ಇದು ಟಸ್ಕರ್ ಟೌನಿನಲ್ಲಿರುವ ಹಳೆ ಮಸೀದಿ, ಇದಕ್ಕೂ ಪ್ರಧಾನಿ ಮೋದಿಗೂ ಸಂಬಂಧವಿಲ್ಲ ಎಂದು ಮಹೇಶ್(@mahesh10816) ಎಂಬುವರ ಖಾತೆಯಿಂದ ಟ್ವೀಟ್ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+