ಹೆಣ್ಮಕ್ಳಿಗೆಂದೇ ಬರಲಿದೆ ವೆಬ್‌ಪೋರ್ಟಲ್: ಅದರಲ್ಲೇನಿರುತ್ತೆ ನೋಡಿ
ಬೆಂಗಳೂರು, ಆಗಸ್ಟ್ 31: ರಾಜ್ಯ ಸರ್ಕಾರವು ಹೆಣ್ಣುಮಕ್ಕಳಿಗಾಗಿ ರೂಪಿಸಿದ ಎಲ್ಲಾ ಯೋಜನೆಗಳ ಮಾಹಿತಿ ಇನ್ನುಮುಂದೆ ಒಂದೇ ವೆಬ್‌ಸೈಟ್ ನಲ್ಲಿ ಲಭ್ಯವಾಗಲಿದೆ.
ಶಿಕ್ಷಣ, ಕೃಷಿ, ಕ್ರೀಡೆ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ರಾಜ್ಯ ಸರ್ಕಾರದಲ್ಲಿರುವ ವಿವಿಧ ಇಲಾಖೆಗಳು ರೂಪಸುವ ಎಲ್ಲಾ ಯೋಜನೆಗಳ ಮಾಹಿತಿ ಆ ವೆಬ್ ಪೋರ್ಟಲ್ ನಲ್ಲಿ ದೊರೆಯಲಿದೆ.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಅನುಮತಿ ನೀಡುವುದೊಂದೇ ಬಾಕಿ ಇದೆ. ಮೊದಲು ಒಂದು ಕೋಟಿ ಅನುದಾನದ ಅಗತ್ಯವನ್ನು ಪ್ರಸ್ತಾವನೆಯಲ್ಲಿ ತಿಳಿಸಿದೆ.

ಸರ್ಕಾರದಿಂದ ಒಪ್ಪಿಗೆ ಸಿಕ್ಕ ಕೂಡಲೇ ನ್ಯಾಷನಲ್ ಇನ್‌ಪಾರ್ಮೇಷನ್ ಸೆಂಟರ್ ಸಹಯೋಗದೊಂದಿಗೆ ಪೋರ್ಟಲ್ ನ ಸಿದ್ಧತಾ ಕಾರ್ಯ ಆರಂಭವಾಗಲಿದೆ.ಈ ಮೊದಲು ಯೋಜನೆಗಳನ್ನು ಆಯಾ ಇಲಾಖೆಯ ವೆಬ್‌ಸೈಟ್ ನಲ್ಲೇ ನೋಡಬೇಕಿತ್ತು ಇನ್ನುಮುಂದೆ ಒಂದೇ ವೆಬ್ ಸೈಟ್ ನಲ್ಲಿ ಎಲ್ಲಾ ಯೋಜನೆಗಳ ಮಾಹಿತಿ ಲಭ್ಯವಾಗಲಿದೆ.
ಈ ಹಿಂದೆ ಸಾಕಷ್ಟು ಯೋಜನೆಗಳು ವರ್ಷಗಳೇ ಕಳೆದರು ವೆಬ್‌ಸೈಟ್ ಲ್ಲಿ ಅಪ್‌ಡೇಟ್ ಆಗುತ್ತಿರಲಿಲ್ಲ, ಇನ್ನುಮುಂದೆ ಕಾಲಕಾಲಕ್ಕೆ ಅಪ್‌ಡೇಟ್ ಮಾಡಲಾಗುತ್ತದೆ.












Click it and Unblock the Notifications