ಬೆಂಗಳೂರು; ಅ.15ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಿ

ಬೆಂಗಳೂರು, ಸೆಪ್ಟೆಂಬರ್ 16 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಜನರು ಅಕ್ಟೋಬರ್ 15ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದುವರೆಗೂ 91,00,207 ಮತದಾರರು ಇದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್, "ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಕ್ಟೋಬರ್ 15ರ ತನಕ ಅವಕಾಶ ನೀಡಲಾಗಿದೆ. ಹೊಸ ಮತದಾರರು, ಹೊಸ ಮತಗಟ್ಟೆಯಲ್ಲಿ ಹೆಸರು ಸೇರಿಸುವವರು ಇದರ ಉಪಯೋಗ ಪಡೆದುಕೊಳ್ಳಬೇಕು" ಎಂದರು.

"ಅಕ್ಟೋಬರ್ 16ರಿಂದ ಮನೆ-ಮನೆಗೆ ಹೋಗಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. 2002ರ ಫೆಬ್ರವರಿಯಿಂದ 2003ರ ಜನವರಿ ತನಕ ಜನಿಸಿದವರು ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದಾಗಿದೆ" ಎಂದು ಅನಿಲ್ ಕುಮಾರ್ ಹೇಳಿದರು.

Enroll Your Name To Voter List Till October 15

"ನಮೂನೆ 7ರ ಮೂಲಕ ಅರ್ಜಿ ಸಲ್ಲಿಸಿ ಜನರು ಒಂದಕ್ಕಿಂತ ಹೆಚ್ಚು ಸ್ಥಳದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಅದನ್ನು ರದ್ದುಗೊಳಿಸಬಹುದಾಗಿದೆ. ಮರಣವಾಗಿದ್ದರೆ ಅಥವ ಖಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಹೆಸರು ತೆಗೆದು ಹಾಕಬೇಕು" ಎಂದು ಆಯುಕ್ತರು ಮನವಿ ಮಾಡಿದರು.

"ಮತದಾರರಪಟ್ಟಿಗೆ ಹೆಸರು ಸೇರಿಸುವ ಬಗ್ಗೆ ಗೊಂದಲಗಳಿದ್ದರೆ 1950 ನಂಬರ್‌ಗೆ ಕರೆ ಮಾಡಬಹುದಾಗಿದೆ. ಅರ್ಹರೆಲ್ಲಾ ಮತದಾರರ ಪಟ್ಟಿಯಲ್ಲಿ ಸೇರುವ ಉದ್ದೇಶದಿಂದ ಈ ಪರಿಷ್ಕರಣೆ ಮಾಡಲಾಗುತ್ತಿದೆ" ಎಂದು ಆಯುಕ್ತರು ತಿಳಿಸಿದರು.

ಮತದಾರರು ಸಲ್ಲಿಸಬೇಕಾದ ವಿವರಗಳು
* ಪಾಸ್‌ ಪೋರ್ಟ್‌
* ಚಾಲನಾ ಪರವಾನಗಿ
* ಆಧಾರ್ ಕಾರ್ಡ್‌
* ಪಡಿತರ ಚೀಟಿ
* ಸರ್ಕಾರಿ ನೌಕರರ ಗುರುತಿನ ಚೀಟಿ
* ಬ್ಯಾಂಕ್ ಪಾಸ್ ಪುಸ್ತಕ
* ರೈತರ ಗುರುತಿನ ಚೀಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+