ಬೆಂಗಳೂರು : ಪೆಟ್ರೋಲ್ ಬಂಕ್‌ನಲ್ಲಿಯೇ ಹೊಗೆ ತಪಾಸಣಾ ಕೇಂದ್ರ ಸ್ಥಾಪನೆ
ಬೆಂಗಳೂರು, ಆಗಸ್ಟ್ 21 : ಬೆಂಗಳೂರು ನಗರದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಶೀಘ್ರದಲ್ಲಿಯೇ ವಾಹನಗಳ ಹೊಗೆ ತಪಾಸಣಾ ಕೇಂದ್ರ ಆರಂಭವಾಗಲಿದೆ. ಸಾರಿಗೆ ಇಲಾಖೆ ಹೊಗೆ ತಪಾಸಣಾ ಕೇಂದ್ರವನ್ನು ತೆರೆಯಲು ಅನುಮತಿ ನೀಡಿದೆ.
ಅರಣ್ಯ ಮತ್ತು ಪರಿಸರ ಖಾತೆ ಪೆಟ್ರೋಲ್ ಬಂಕ್‌ನಲ್ಲಿ ಹೊಗೆ ತಪಾಸಣಾ ಕೇಂದ್ರ ಆರಂಭಕ್ಕೆ ಪ್ರಸ್ತಾವನೆ ಸಿದ್ಧಪಡಿಸಿತ್ತು. ವಾಹನ ಸವಾರರಿಗೆ ಸುಲಭವಾಗಿ ಕೇಂದ್ರ ಲಭ್ಯವಾಗುವಂತೆ ಮಾಡಲು ಪೆಟ್ರೋಲ್ ಬಂಕ್‌ಗಳಲ್ಲಿ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ.
ಪೆಟ್ರೋಲ್ ಬಂಕ್‌ಗಳಲ್ಲಿಯೇ ವಾಹನಗಳ ಹೊಗೆ ತಪಾಸಣಾ ಕೇಂದ್ರ ಆರಂಭವಾಗುವುದರಿಂದ ಜನರು ಕೇಂದ್ರಗಳನ್ನು ಹುಡುಕಿಕೊಂಡು ಹೋಗುವುದು ತಪ್ಪಲಿದೆ. ಬೆಂಗಳೂರು ನಗರದಲ್ಲಿ 400ಕ್ಕೂ ಅಧಿಕ ಪೆಟ್ರೋಲ್ ಬಂಕ್‌ಗಳಿವೆ.

ನಕಲಿ ಪ್ರಮಾಣ ಪತ್ರ ನೀಡುವ ಕೇಂದ್ರಗಳು ಬೆಂಗಳೂರು ನಗರದಲ್ಲಿವೆ. 2017ರಲ್ಲಿ ಆರ್‌ಟಿಒ ಅಧಿಕಾರಿಗಳು ಇಂತಹ 77 ಕೇಂದ್ರಗಳನ್ನು ಪತ್ತೆ ಮಾಡಿದ್ದರು. ಪ್ರತಿ ಕೇಂದ್ರಕ್ಕೆ 10 ಸಾವಿರ ರೂ. ದಂಡ ಹಾಕಿದ್ದರು.
ಪೆಟ್ರೋಲ್ ಬಂಕ್‌ನಲ್ಲಿ ಹೊಗೆ ತಪಾಸಣಾ ಕೇಂದ್ರ ತೆರೆಯಲು ಅರಣ್ಯ ಮತ್ತು ಪರಿಸರ ಇಲಾಖೆ ಶೀಘ್ರದಲ್ಲಿಯೇ ಟೆಂಡರ್ ಕರೆಯಲಿದೆ. ಸಮೀಪದಲ್ಲಿಯೇ 2 ಪೆಟ್ರೋಲ್ ಬಂಕ್‌ಗಳಿದ್ದರೆ, ಒಂದರಲ್ಲಿ ಕೇಂದ್ರ ನಿರ್ಮಾಣ ಮಾಡಲಾಗುತ್ತದೆ.












Click it and Unblock the Notifications