ಟೆಕ್ಕಿಗಳಿಗೆ ಇಡಿ ವಿಶ್ವದಲ್ಲೇ ಬೆಂಗಳೂರು ಹೆಚ್ಚು ಪ್ರಶಸ್ತ

emerge-as-popular-destination-for-attracting-tech-specialists-linkedin
ಬೆಂಗಳೂರು, ಜೂನ್ 26: ಇಡಿ ವಿಶ್ವದಲ್ಲೇ ತಂತ್ರಜ್ಞಾನ ಪರಿಣತರು ಅಂದರೆ ಟೆಕ್ಕಿಗಳಿಗೆ ಬೆಂಗಳೂರು ಹೆಚ್ಚು ಪ್ರಶಸ್ತವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದರಲ್ಲಿ ಬೆಂಗಳೂರು ಇದೀಗ ಸ್ಯಾನ್ ಫ್ರಾನ್ಸಿಸ್ಕೊ, ಸಿಯಾಟಲ್ ಮತ್ತು ಮೆಲ್ಬೋರ್ನ್ ನಗರಗಳನ್ನೂ ಹಿಂದಿಕ್ಕಿದೆ.

LinkedIn ವೃತ್ತಿಪರ ಸಾಮಾಜಿಕ ಜಾಲತಾಣ ನಡೆಸಿರುವ ಈ ಅಧ್ಯಯನದ ಪ್ರಕಾರ ವಿಶ್ವದಲ್ಲಿ ಟೆಕ್ಕಿಗಳಿಗೆ ಹೆಚ್ಚು ಆಪ್ಯಾಯಮಾನವಾಗಿರುವ 10 ನಗರಗಳಲ್ಲಿ ಪುಣೆ, ಹೈದರಾಬಾದ್, ಚೆನ್ನೈ ಮತ್ತು ಗುರಗಾವ್ ಸಹ ಸ್ಥಾನ ಪಡೆದಿದೆ. ಟಾಪ್-10 ಪಟ್ಟಿಯಲ್ಲಿರುವ ಇತರೆ ನಗರಗಳೆಂದರೆ ಅಮೆರಿಕದ ಆಸ್ಟಿನ್ ಮತ್ತು ಆಸ್ಟ್ರೇಲಿಯಾದ ಸಿಡ್ನಿ ನಗರ.

ನಮ್ಮ ಆರ್ಥಿಕತೆಯ ಬೆಳವಣಿಗೆಗೆ ಪ್ರಧಾನ ಕೊಡುಗೆ ನೀಡುತ್ತಿರುವುದು ತಂತ್ರಜ್ಞಾನ. ಹಾಗಾಗಿ ವಿಶ್ವದ ನಾನಾ ಸರಕಾರಗಳು ತಂತ್ರಜ್ಞಾನ ಪರಿಣತರಿಗೆ ಮಣೆ ಹಾಕಲು ತಹತಹಿಸುತ್ತಿವೆ ಎಂದು ಲಿಂಕ್ಡ್ಇನ್ ತನ್ನ ಬ್ಲಾಗಿನಲ್ಲಿ ತಿಳಿಸಿದೆ.

300 ದಶಲಕ್ಷ ಸದಸ್ಯರ ಮಾಹಿತಿಯನ್ನು ಕಲೆ ಹಾಕಿ ಅಧ್ಯಯನ ನಡೆಸಿರುವ ಲಿಂಕ್ಡ್ಇನ್ ವಿಶ್ವದಾದ್ಯಂತ ಅನೇಕ ರಾಷ್ಟ್ರಗಳು ತಂತ್ರಜ್ಞಾನ ಪರಿಣತರನ್ನು ತನ್ನತ್ತ ಸೆಳೆಯುತ್ತಿರುವುದನ್ನು ಆದ್ಯವಾಗಿ ಗಮನಿಸಿದೆ. ಅಮೆರಿಕದ ಲಿಂಕ್ಡ್ಇನ್ ಸಂಸ್ಥೆಯು ವಿಶ್ವದಲ್ಲಿ 277 ದಶಲಕ್ಷ ಸದಸ್ಯರನಬ್ನು ಹೊಂದಿದೆ. ಅದರಲ್ಲಿ 24 ದಶಲಕ್ಷ ಬಳಕೆದಾರರು ಭಾರತದಲ್ಲಿದ್ದಾರೆ.

ಅಂದಹಾಗೆ ಅಧ್ಯಯನಕ್ಕಾಗಿ ಲಿಂಕ್ಡ್ಇನ್ ಸಂಸ್ಥೆಯು ಯಾವೆಲ್ಲಾ ಕ್ಷೇತ್ರದಲ್ಲಿನ ಟೆಕ್ಕಿಗಳನ್ನು ಪರಿಗಣಿಸಿತ್ತು ಅಂದರೆ IT infrastructure and systems management, Java development and web programming.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+