ಸಿಲಿಕಾನ್ ವ್ಯಾಲಿಯಲ್ಲಿ ಹಾರ್ಡ್‌ವೇರ್ ಉದ್ಯಮ ಬೆಳವಣಿಗೆಗೆ ಎಲ್ಸಿಯಾ ನೆರವು
ಸಾಫ್ಟ್‌ವೇರ್ ಉದ್ಯಮದ ಗಣನೀಯ ಕೊಡುಗೆಗಾಗಿ ಜಗತ್ತಿನಾದ್ಯಂತ ಚಿರಪರಿಚಿತ ಇರುವ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯು ಹಾರ್ಡ್‌ವೇರ್ ತಯಾರಿಕೆಯಲ್ಲಿಯೂ ಉಲ್ಲೇಖಾರ್ಹ ಸಾಧನೆಗೆ ಸಜ್ಜಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಉದ್ಯಮಿಗಳ ಸಂಸ್ಥೆಯು (ಇಎಲ್‌ಸಿಐಎ-ಎಲ್ಸಿಯಾ) ಹಾರ್ಡ್‌ವೇರ್ ಉತ್ಪಾದನೆಗೆ ನೆರವು ಒದಗಿಸುವ ಉದ್ದೇಶದಿಂದ ಭಾರತದಲ್ಲಿಯೇ ಮೊದಲ 'ಎಲ್ಸಿಯಾ ಸಮೂಹ ಕೇಂದ್ರ' ಆರಂಭಿಸಿದೆ. ಈ ಕೇಂದ್ರವು ಎಲ್ಸಿಯಾದ ಸದಸ್ಯ ಮತ್ತು ಸದಸ್ಯೇತರ ಉದ್ಯಮ ಸಂಸ್ಥೆಗಳ ಹಾರ್ಡ್‌ವೇರ್ ಗಳ ತಯಾರಿಕೆಗೆ ಸಹಕರಿಸುತ್ತಿದೆ.
ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೆ ನೆರವು ನೀಡುವ ಮೂಲಕ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್, ವಿನ್ಯಾಸ ಮತ್ತು ತಯಾರಿಕಾ ವಲಯ (ಇಎಸ್‌ಡಿಎಂ) ಮಹತ್ವದ ಸಾಧನೆ ಮಾಡಲು ಮತ್ತು ತೀವ್ರಗತಿಯಲ್ಲಿ ಬೆಳೆಯುವಂತೆ ಮಾಡಿದೆ. ಮುಂಬರುವ ಕೆಲವೇ ವರ್ಷಗಳಲ್ಲಿ ಈ ವಲಯವು ಅಪ್ರತಿಮ ಸಾಧನೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿ ಕಾಣಿಸುತ್ತಿವೆ.
ಅತಿಸಣ್ಣ, ಸಣ್ಣ, ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಎಲ್ಸಿಯಾದ ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಬಳಸಿಕೊಳ್ಳುತ್ತಿರುವುದರಿಂದ ಬಂಡವಾಳ ಹೂಡಿಕೆ ಮತ್ತು ವೆಚ್ಚದಲ್ಲಿ ಗಣನೀಯ ಪ್ರಮಾಣದಲ್ಲಿ ಉಳಿಕೆ ಆಗುತ್ತಿದೆ. ಎಂಎಸ್‌ಎಂಇಗಳಿಗೆ ದೊರೆತಿರುವ ಪ್ರೇರಣೆಯು ತಯಾರಿಕಾ ವಲಯದಲ್ಲಿ ನೆರವು ನೀಡುವುದಕ್ಕಾಗಿ ಬೇರೆ ರಾಜ್ಯ ಸರ್ಕಾರಗಳಿಗೂ ಇದು ಮಾದರಿಯಾಗಿದೆ.

ಹಾರ್ಡ್‌ವೇರ್ ತಯಾರಿಕೆಗೆ ಮೂಲ ಸೌಕರ್ಯ
ಎಲ್ಸಿಯಾ ಸಮೂಹ ಕೇಂದ್ರವು ಎಂಎಸ್‌ಎಂಇ ಕಂಪೆನಿಗಳಿಗೆ ಎಲೆಕ್ಟ್ರಾನಿಕ್ಸ್, ಸಿಸ್ಟಮ್ ವಿನ್ಯಾಸ ಮತ್ತು ಹಾರ್ಡ್‌ವೇರ್ ತಯಾರಿಕೆಗೆ ಪೂರಕವಾಗಿರುವ ಮೂಲಸೌಕರ್ಯ ಒದಗಿಸುತ್ತಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ಪ್ರಕ್ರಿಯೆಯಲ್ಲಿ ಹಾಗೂ ತೀವ್ರತರವಾದ ವೇಗ ಕಂಡುಕೊಳ್ಳುವುದು ಸಾಧ್ಯವಾಗಲಿದೆ.

ಸಿಲಿಕಾನ್ ವ್ಯಾಲಿಯಲ್ಲಿ ಹಾರ್ಡ್ ವೇರ್ ಬೆಳವಣಿಗೆ
ಮಾಹಿತಿ ತಂತ್ರಜ್ಞಾನ ಸೇವಾ ಕ್ಷೇತ್ರದ ಬೃಹತ್ ಕಂಪೆನಿಗಳಾದ ಎಚ್‌ಸಿಎಲ್, ಇನ್‌ಫೋಸಿಸ್, ಎಚ್‌ಪಿ, ಸೀಮನ್ಸ್ ಮತ್ತು ಟಿಮ್ಕೆನ್ ಸಂಸ್ಥೆಗಳು ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯಾಗಿ ಬೆಳೆಸಲು ನೀಡಿದ ಕೊಡುಗೆ ಅಸಾಧಾರಣ. ಎಲೆಕ್ಟ್ರಾನಿಕ್ ಸಿಟಿಯು ಸಾಫ್ಟೇವರ್ ಉದ್ಯಮಕ್ಕೆ ಮಾತ್ರವಲ್ಲದೆ ಎಲೆಕ್ಟ್ರಾನಿಕ್ಸ್, ಸಿಸ್ಟಮ್ ವಿನ್ಯಾಸ, ಮತ್ತು ಹಾರ್ಡ್‌ವೇರ್ ತಯಾರಿಕಾ ಕಂಪೆನಿಗಳಿಗೆ ಪೂರಕವಾದ ವ್ಯವಸ್ಥೆಯನ್ನೂ ಕಲ್ಪಿಸಿದೆ.
ರಾಡೆಲ್, ಕೋನಾರ್ ಎಂಜಿನಿಯರಿಂಗ್, ಕಸ್ಟಮೈಸ್ಡ್ ಟೆಕ್ನಾಲಜೀಸ್, ಸಿಂಥೆಸಿಸ್ ವೈಂಡಿಂಗ್ ಟೆಕ್ನಾಲಜೀಸ್, ಎರ್ಕಾಡಿ ಸಿಸ್ಟಮ್ಸ್ ಮತ್ತಿತರ ಸಂಸ್ಥೆಗಳು ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಯತ್ತ ಗಮನ ಹರಿಸಿ ಗಣನೀಯ ಪ್ರಮಾಣದಲ್ಲಿ ಬೆಳೆದಿವೆ.

ಸಾಮಾನ್ಯ ಸೌಲಭ್ಯ ಕೇಂದ್ರ
ಎಲ್ಸಿಯಾ ಸಮೂಹ ಕೇಂದ್ರ ಬೃಹತ್ ಕಂಪೆನಿಗಳ ಬಳಿ ಇರುವ ಸಂಶೋಧನೆ ಮತ್ತು ಅಭಿವೃದ್ಧಿ, ಯಾಂತ್ರೀರಣ, ಮಾಪನ, ಪರೀಕ್ಷೆ ನಡೆಸುವುದಕ್ಕೆ ಅಗತ್ಯವಿರುವ ಮೂಲಸೌಕರ್ಯಗಳು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕಂಪೆನಿಗಳಿಗೆ ಸುಲಭವಾಗಿ ದೊರೆಯುವುದಿಲ್ಲ. ಈ ಕೊರತೆಯನ್ನು ಗಮನಿಸಿದ ಎಲ್ಸಿಯಾ ಸಂಸ್ಥೆಯು ಈ ಸಮಸ್ಯೆಗಳನ್ನು ನೀಗುವ ಉದ್ದೇಶದಿಂದ ಎಲ್ಸಿಯಾ ಸಮೂಹ ಕೇಂದ್ರ ಆರಂಭಿಸಿ ಅದರಿಂದ ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಪ್ರಾರಂಭಿಸಿದೆ.

ಮೂಲಮಾದರಿಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ
ಈ ಕೇಂದ್ರದಲ್ಲಿ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದಕರಿಗೆ ನೆರವಾಗುವಂತಹ ಮೂಲಮಾದರಿಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಎಲ್ಸಿಯಾ ಸಮೂಹ ಕೇಂದ್ರವು ಕರ್ನಾಟಕ ರಾಜ್ಯ ಸರ್ಕಾರದ ಅನುದಾನ ಹಾಗೂ ಸದಸ್ಯ ಕಂಪೆನಿಗ ನೆರವಿನೊಂದಿಗೆ ಒಂದೇ ಸೂರಿನ ಅಡಿಯಲ್ಲಿ ವಿವಿಧ ಯಂತ್ರಗಳನ್ನು ಅಳವಡಿಸಿದೆ. ಸೌಲಭ್ಯಗಳ ಬಳಕೆಯ ವೆಚ್ಚ ನೀಡಿ ಈ ಕೇಂದ್ರವನ್ನು ಎಲ್ಸಿಯಾದ ಸದಸ್ಯ ಮತ್ತು ಸದಸ್ಯೇತರ ಸಂಸ್ಥೆಗಳು ಬಳಸಿಕೊಳ್ಳಬಹುದಾಗಿದೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications