ಬೆಂಗಳೂರು ಟೆಕ್ಕಿ ರೇಪ್ : ಕಾಮುಕನ ಬಂಧನ

ಬೆಂಗಳೂರು, ಜೂ. 10 : ನಗರದ ದೊಡ್ಡತೋಗೂರಿನ ಬಳಿಯ ಪಿಜಿಯೊಂದಕ್ಕೆ ನುಗ್ಗಿ ಮಹಿಳಾ ಟೆಕ್ಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಜಿ ಮಾಲೀಕ ಸೇರಿದಂತೆ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಅತ್ಯಾಚಾರವೆಸಗಿದ ಶಿವರಾಮರೆಡ್ಡಿ ಮತ್ತು ಪಿಜಿ ಮಾಲೀಕರಾದ ಶ್ರೀನಿವಾಸರೆಡ್ಡಿ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಶನಿವಾರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡತೋಗೂರಿನ ಲಕ್ಷ್ಮೀ ಪಿಜಿ ನುಗ್ಗಿದ ಆರೋಪಿ ಶಿವರಾಮ ರೆಡ್ಡಿ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ ಮಾಡಿ, 1000 ರೂ. ಹಣವನ್ನು ದೋಚಿ ಪರಾರಿಯಾಗಿದ್ದ.

police

ಪಿಜಿಗೆ ನುಗ್ಗಿದ್ದ ಶಿವರಾಮ ರೆಡ್ಡಿ ಕಿಟಕಿಯ ಬಳಿ ಇಟ್ಟಿದ್ದ ಬೀಗದ ಕೀಯಿಂದ ಕೊಠಡಿಯ ಬಾಗಿಲನ್ನು ತೆಗೆದು ಚಾಕುವಿನೊಂದಿಗೆ ಕೊಠಡಿಯೊಂದಕ್ಕೆ ಪ್ರವೇಶಿಸಿದ್ದ. ಆಗ ಕೊಠಡಿಯಲ್ಲಿ ಮಲಗಿದ್ದ ಮಹಿಳಾ ಟೆಕ್ಕಿ ಎಚ್ಚರಗೊಂಡಾಗ ಆಕೆಯ ಮೇಲೆ ಅತ್ಯಾಚಾರ ಮಾಡಿ, ಚಾಕುವಿನಿಂದ ಆಕೆಯ ಕೈಗಳಿಗೆ ಗಾಯ ಮಾಡಿ, ಒಂದು ಸಾವಿರ ರೂ. ದೋಚಿ ಪರಾರಿಯಾಗಿದ್ದ.['ಮಹಿಳಾ ಟೆಕ್ಕಿ ರೇಪ್ ಆರೋಪಿ ಇನ್ನೂ ಸುಳಿವಿಲ್ಲ']

ಯುವತಿ ಪೊಲೀಸರಿಗೆ ಈ ಪ್ರಕರಣದ ಕುರಿತು ದೂರು ನೀಡಿದ್ದು, ಆರೋಪಿ ಇಂಗ್ಲೀಷ್, ಹಿಂದಿ ಭಾಷೆ ಮಾತನಾಡುತ್ತಿದ್ದ ಎಂದು ಹೇಳಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಭಾತ್ಮೀದಾರರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಶಿವರಾಮ ರೆಡ್ಡಿ (28) ಹೊಸಕೋಟೆ ಬಳಿಯ ಆವಲಹಳ್ಳಿ ಗ್ರಾಮದ ನಿವಾಸಿ ಎಂದು ಪೊಲೀಸರು ಹೇಳಿದ್ದಾರೆ.

ಹಿಂದೆಯೂ ಪಿಜಿಗೆ ನುಗ್ಗಿದ್ದ : ಬಂಧಿತ ಆರೋಪಿ ರೆಡ್ಡಿ ಬೆಂಗಳೂರು ನಗರದ ಆಡುಗೋಡಿ, ವರ್ತೂರು, ಮಹದೇವಪುರ, ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪಿಜಿಗಳಿಗೆ ಹಿಂದೆ ನುಗ್ಗಿ ಕಳ್ಳತನ ಮಾಡಿರುವ ಸಂಗತಿ ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಪಿಜಿ ಮಾಲೀಕನ ಬಂಧನ : ಈ ಪ್ರಕರಣದಲ್ಲಿ ಹೆಣ್ಣು ಮಕ್ಕಳಿರುವಂತಹ ಪಿಜಿ ಗಳಲ್ಲಿ ಸೂಕ್ತ ಭದ್ರತೆ ಒದಗಿಸದೇ ಸಾಕ್ಷಾಧಾರಗಳನ್ನು ನಾಶ ಮಾಡಿರುವುದರಿಂದ ಪಿಜಿ ಮಾಲೀಕ ಶ್ರೀನಿವಾಸರೆಡ್ಡಿ ಅವರನ್ನು ಬಂಧಿಸಲಾಗಿದೆ.

ಈ ಪ್ರಕರಣವನ್ನು ಬೆಂಗಳೂರು ನಗರ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಡಾ.ಟಿ.ಡಿ ಪವಾರ್ ಅವರ ಮಾರ್ಗದರ್ಶನದಲ್ಲಿ, ಮೈಕೊಲೇಔಟ್ ಎಸಿಪಿ ಶ್ರೀ.ಓಬಳೇಶ್ ರವರ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಭಾಸ್ಕರ್ ವಿ.ಬಿ ರವರು ತನಿಖೆ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+