ಈವಾಗ ಈವಾಗ ಓಟು ಹಾಕೋ ಟೈಮ್ ಬಂತು ಈವಾಗ
ಕರ್ನಾಟಕದಲ್ಲಿಂದು 14 ಕ್ಷೇತ್ರಗಳಲ್ಲಿ ನಿಧಾನಗತಿಯಲ್ಲಿ ಮತದಾನ ಸೆಲೆಬ್ರಿಟಿಗಳು, ವಿವಿಧ ರಂಗದ ಗಣ್ಯರು ಮತದಾನ ಮಾಡಿ ಎಂದು ಕರೆನೀಡುತ್ತಾ ಬಂದಿದ್ದಾರೆ. ಆದರೆ, ಒಟ್ಟಾರೆ, 68% ಗಿಂತ ಹೆಚ್ಚಿಗೆ ಮತದಾನವಾಗಿಲ್ಲ. ಹೀಗಾಗಿ, ವಿವಿಧ ರೀತಿಯಲ್ಲಿ ಮತದಾನ ಜಾಗೃತಿ ಇನ್ನು ಜಾರಿಯಲ್ಲಿದೆ. ಏಪ್ರಿಲ್ 23ರಂದು ಕರ್ನಾಟಕದಲ್ಲಿ ಇನ್ನೊಂದು ಹಂತದ ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮತದಾನದ ಜಾಗೃತಿಯ ಮೇಲೆ ಮಜ ಟಾಕೀಸ್ ಖ್ಯಾತಿಯ ರೆಮೋ ಅವರು ಹಾಡಿರುವ "ಯಾವಾಗ ಯಾವಾಗ" ಹಾಡು ಯೂಟೂಬ್ ನಲ್ಲಿ ರಿಲೀಸ್ ಆಗಿ ಕನ್ನಡಿಗರ ಗಮನ ಸೆಳೆದಿದೆ. ಇದಕ್ಕೆ ಮಾನಸ ಹೊಳ್ಳ ಅವರು ಸಂಗೀತ ಸಂಯೋಜನೆ ಮಾಡಿದ್ದು, ಅಮರನಾಥ್ ಅವರ ಸಾಹಿತ್ಯವಿದೆ. ಒಂದು ಒಳ್ಳೆ ಸಂದೇಶವಿರುವ ಈ ಹಾಡನ್ನು ನೋಡಿ ಆನಂದಿಸಿ.
ಯಾವಾಗ ಯಾವಾಗ ಎಲ್ರೀಗ್ ಆರ್ಥ ಆಗೋದ್ ಯಾವಾಗ?
ತಡಕ ಬೇಡಿ ಸಾಕು, ತರ್ಕ ಬೇಕೆ ನೂರು
ಓಟು ನಮ್ಮ ಹಕ್ಕಲ್ವೆ, ನೀವು ಈಗ ಹಾಕಲ್ವೆ
ನಾಳೆ ನಮ್ಮ ಕೈಯಲ್ಲೆ ನಾಳೆ ನಮಗೆ ಬೇಕಲ್ವೆ
||ಪಲ್ಲವಿ||

ದೇಶ ಬೆಳಿತಾ ಇರಬೇಕು ಒಳ್ಳೇ ನಾಯಕರು ಬರಬೇಕು
ತಪ್ಪದೆ ಅಳೆದು ತೂಗಬೇಕು ಒಳ್ಳೆತನ ಚೂರು ಇರಬೇಕು
ಯಾವಾಗ ಯಾವಾಗ ಎಲ್ರೀಗ್ ಆರ್ಥ ಆಗೋದ್ ಯಾವಾಗ?
ಎಲ್ಲಾನು ಎಲ್ಲಾರು ಯೋಚನೆ ಮಾಡಿ ಮಾಡೋದ್ ಯಾವಾಗ?
ಹಿಂದೆ ಗೆದ್ದೋರು ನಮಗೇನು ಕೊಟ್ಟರು
ಕೇಳೋ ಹಕ್ಕಿಲ್ಲ ಓಟು ಬಿಟ್ಟೋರು,
ನೀತಿವಂತರೇನು ಮಾತು ಕೋಡೋರು
ಬುದ್ಧಿವಂತರೇನು ಓಟು ಮರೆತೋರು
ನಮ್ಮ ಓಟು ನಮ್ಮ ಹಕ್ಕು ಮಾರ್ಕೊಬೇಡಿ ಕಾಸಿಗೆ ಕೊಟ್ಟು...
ಯಾವಾಗ ಯಾವಾಗ ಎಲ್ರೀಗ್ ಆರ್ಥ ಆಗೋದ್ ಯಾವಾಗ?
ಎಲ್ಲಾನು ಎಲ್ಲಾರು ಯೋಚನೆ ಮಾಡಿ ಮಾಡೋದ್ ಯಾವಾಗ?
ಎಡವಟ್ಟು ಮಾಡೋರು ಸಾಕಷ್ಟು ತುಂಬೋವ್ರೆ
ಹಾಗಂತ ಬಿಟ್ಬಿಟ್ರೆ ಎಡವಟ್ಟು ನಮ್ದೇನೆ
ಒಂದೊಂದು ಕುರ್ಚಿಗೆ ನೂರಾರು ಕಣ್ಗಳು
ಸುಳ್ಳಿನ ಸುತ್ತೋಲೆ ಅದರ ಕಾವಲು
ಯಾವಾಗ ಯಾವಾಗ ಎಲ್ಲಾನು ಸರಿ ಆಗೋದ್ ಯಾವಾಗ?
ಎಲ್ಲಾನು ಎಲ್ಲಾರು ಯೋಚನೆ ಮಾಡಿ ಮಾಡೋದ್ ಯಾವಾಗ?
ಎಲ್ಲಾನು ಎಲ್ಲಾರು ಯೋಚನೆ ಮಾಡೋ ಹಾಗೆ ಆಗೋದ್ ಯಾವಾಗ?

ಫ್ರೀಯಾಗಿ ಕೊಡುವ ನಾಯಕರೆಲ್ಲ ಒಳ್ಳೇರಲ್ಲ
ಹೊಡೆತ ಕೊಡುವ ಘಳಿಗೆ ಎಲ್ಲಾನು ಕೆಟ್ಟದಲ್ಲ
ಕುರುಡ್ಗಣ್ಣಿಗಿಂತ ಮೆಳ್ಳ್ ಗಣ್ಣುವಾಸಿ
ಇರೋರಲ್ಲೆ ಕೆಲಸಮಾಡೊರ್ನ ಗೆಲ್ಲಿಸಿ
ನಾವ್ ನಿಲ್ಲೋವರ್ಗೂ ಅವರ್ದೆ ಪಾಲ್ಸಿ
ಯಾವಾಗ ಯಾವಾಗ ಎಲ್ರೀಗ್ ವಾಸಿ ಆಗೋದ್ ಯಾವಾಗ?
ಯಾವಾಗ ಯಾವಾಗ ಎಲ್ಲಾರ ಸ್ವಾರ್ಥ ಹೋಗೋದ್ ಯಾವಾಗ?
ಈವಾಗ ಈವಾಗ ಓಟು ಹಾಕೋ ಟೈಮ್ ಬಂತು ಈವಾಗ
ನಿಮ್ ಹಕ್ಕನ್ನು ಬಿಡಬೇಡಿ ಓಟು ಹಾಕೋದ್ ಮರಿಬೇಡಿ ಈವಾಗ












Click it and Unblock the Notifications