A-Khata: ನಿವೇಶನ ಮಾಲೀಕರಿಗೆ ಗುಡ್ ನ್ಯೂಸ್, ಆದರೆ ಈ ನಿಯಮ ಕಡ್ಡಾಯ...B Kahta

ಬೆಂಗಳೂರು, ಜುಲೈ 20: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅನಧಿಕೃತ ಕಟ್ಟಡಗಳಿಗೆ ಮೂಗುದಾರ ಹಾಕಿ ಯೋಜನೆ ಬದ್ಧವಾಗಿ ನಗರ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕವಾಗಿ ಸೂಕ್ತ ರಸ್ತೆಗೆ ಹೊಂದಿಕೊಂಡ ಬಿ.ಖಾತಾ ನಿವೇಶನಗಳಿಗೆ ಎ ಖಾತಾ ನೀಡಲಾಗುವುದೆಂದು ಸರ್ಕಾರ ತಿಳಿಸಿದೆ. ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕಾನೂನಂತೆ, ಸೂಕ್ತ ನಿಯಮಗಳಡಿ ನಿರ್ಮಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟಿದೆ.

ಹೌದು, ಇನ್ನ ಮುಂದೆ ಸಾರ್ವಜನಿಕ ರಸ್ತೆಯನ್ನು 'ಎ' ಖಾತಾ ಪಡೆಯಲು ಕಡ್ಡಾಯಗೊಳಿಸಲಾಗಿದೆ. ಅಂದರೆ 'ಬಿ' ಖಾತಾದ ಖಾಲಿ ನಿವೇಶನಕ್ಕೆ 'ಎ' ಖಾತಾ ನೀಡಲು ಸಾರ್ವಜನಿಕ ರಸ್ತೆ ಸಂಪರ್ಕ ಇರಲೇಬೇಕು ಎಂದು ತಿಳಿಸಿದೆ. ಇಲ್ಲವಾದರೆ ಆ ನಿವೇಶನ ಖಾಲಿ ರಸ್ತೆಗೆ ಹೊಂದಿಕೊಂಡದಿದ್ದರೇ ಅದನ್ನು ಜಿಬಿಜಿಎ ಕಾಯಿದೆ 2024ರ ಕಲಂ 212ರಂತೆ ಸಾರ್ವಜನಿಕ ರಸ್ತೆ ಎಂದು ಘೋಷಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ekhata Karnataka Government Mandatory Public Connection Road to Bet B Khata instead A Khata

ರಾಜ್ಯ ಸರ್ಕಾರ ಈಗಾಗಲೇ ಆಸ್ತಿ ಖಾತೆಗಳು, ದಾಖಲಾತಿಗಳನ್ನು ಡಿಜಿಟಲೀಕರಣಗೊಳಿಸುತ್ತಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಇ-ಖಾತಾ ವಿತರಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 5.5 ಲಕ್ಷ ಇ-ಖಾತಾ ನೀಡಲಾಗುತ್ತಿದೆ. ಇದರ ಬೆನ್ನಲ್ಲೆ ಸರ್ಕಾರ ಬಿ ಖಾತಾ ನಿವೇಶನಗಳಿಗೆ ಎ ಖಾತಾ ನೀಡಲಾಗುವುದೆಂದು ಘೋಷಿಸಿದೆ. ರಾಜ್ಯ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಭೂಮಿಯಲ್ಲಿರುವ ಸ್ವತ್ತುಗಳು ಅನುಮೋದಿತ ಪರಿಷ್ಕೃತ ಮಹಾಯೋಜನೆಯ ವ್ಯಾಪ್ತಿಯಲ್ಲಿದ್ದರೆ ಭೂಪರಿರ್ತನೆಯ ಅವಶ್ಯಕತೆಯೇ ಇಲ್ಲ ಎಂದಿದೆ.

ಇಂತಹ ಸ್ವತ್ತುಗಳಿಗೆ ಕರ್ನಾಟಕ ಭೂಕಂದಾಯ ಕಾಯಿದೆಯಡಿ ನಿಗದಿಪಡಿಸಿರುವ ಶುಲ್ಕ ಪಾವತಿಸಿಕೊಂಡು ಕೆಟಿಸಿಪಿ ಕಾಯಿದೆಯಡಿ ಅನುಮೋದನೆ ಕಡ್ಡಾಯವಾಗಿ ಪಡೆಯಬೇಕು. ಒಂದು ವೇಳೆ ಈಗಾಗಲೇ ಭೂ ಪರಿವರ್ತನೆಗೊಂಡು ಬಡಾವಣೆ ನಿರ್ಮಿಸಿದ್ದರೆ ಹೊಸದಾಗಿ ಒಪ್ಪಿಗೆ ಪಡೆದಿರುವ ಖಾಲಿ ನಿವೇಶನ, ಸ್ವತ್ತುಗಳಿಗೆ ಕೆಟಿಸಿಪಿ ಕಾಯಿದೆ 1961ರ ಕಲಂ 17ರಡಿ ಏಕ ನಿವೇಶನ ವಿನ್ಯಾಸ ನಕ್ಷೆ (ನಿವೇಶನ ಬಡಾವಣೆ ನಕ್ಷೆ) ಗೆ ಅನುಮೋದನೆ ಕೊಡಲಾಗುತ್ತದೆ.

ಕಂದಾಯ ಇಲಾಖೆಯ ನಿಯಮಗಳ ಪ್ರಕಾರ 'ಬಿ' ಖಾತಾ ಹೊಂದಿರುವ ಖಾಲಿ ನಿವೇಶನಗಳ ಮಾಲೀಕರು ಸೂಕ್ತ ನಿಯಮಗಳಡಿ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮಕ್ಕೆ ಒಳಪಟ್ಟು ಕಟ್ಟಡ ನಕ್ಷೆ ಮತ್ತು ಅನುಮತಿ (ಪರವಾನಗಿ) ಪಡೆಯಲು ಅವಕಾಶ ಇದೆ. ನಿಯಮ ಪಾಲಿಸದೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಿಸುವಂತಿಲ್ಲ. ಅಂತಹ ಕಟ್ಟಡಗಳ ವಿರುದ್ಧ ಬಿಬಿಎಂಪಿ, ರಾಜ್ಯ ಸರ್ಕಾರ ಕ್ರಮ ವಹಿಸಲಿದೆ.

ekhata Karnataka Government Mandatory Public Connection Road to Bet B Khata instead A Khata

ಖಾತೆಗಾಗಿ ಭೂಮಿ ಪರಿವರ್ತಿಸಬೇಕೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಖಾತಾ ಪಡೆಯದೆ 2024 ಸೆಪ್ಟಂಬರ್ 30ಕ್ಕೂ ಮೊದಲು ಏಕ ವಿನ್ಯಾಸ ನಕ್ಷೆ ಪಡೆದ ನಿಯಮ ಉಲ್ಲಂಘಿಸಿದ್ದರೆ. ಅಂತವರು ಬಹುಮಹಡಿ ಕಟ್ಟಡ ನಿರ್ಮಿಸಿದ ನಿವೇಶನಗಳು 'ಎ' ಖಾತಾ ಪಡೆಯಲು ಕಡ್ಡಾಯವಾಗಿ ಸಾರ್ವಜನಿಕ ಸಂಪರ್ಕ ರಸ್ತೆ ಇರಲೇಬೇಕು. ಒಂದೇ ನಿವೇಶನ ನಕ್ಷೆಯಲ್ಲಿ ಬಹುಮಹಡಿ ಅಂತಸ್ತುಗಳನ್ನು ಕಟ್ಟಿದ್ದ ಫ್ಲ್ಯಾಟ್ ಗಳು ಮಾಲೀಕರ ಮಾಲೀಕತ್ವದಲ್ಲಿದ್ದರೆ, ಆ ಸ್ವತ್ತು ಅನುಮೋದಿತ ಮಹಾಯೋಜನೆ ವ್ಯಾಪ್ತಿಗೆ ಒಳಪಟ್ಟರೆ ಅವುಗಳನ್ನು ಭೂಮಿ ಪರಿವರ್ತನೆ ಮಾಡಿಕೊಳ್ಳಬೇಕಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಯುವ ಉದ್ದೇಶದಿಂದ ಬಿಬಿಎಂಪಿ ಕಾಯಿದೆ ಅನುಸಾರ ನೀಡುತ್ತಿದ್ದ ಬಿ ಖಾತಾ ವಿತರಣೆ ನಿಲ್ಲಿಸಲಾಗಿದೆ. ಕಾನೂನಿನಡಿ ಅನುಮೋದನೆ ಪಡೆದು ಕಟ್ಟಡ ನಿರ್ಮಿಸುವಂತೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+