ಆಗಸ್ಟ್ 18 ರಂದು ಬೆಂಗಳೂರಿನಲ್ಲಿ ‘ಯುಎಸ್‌ನಲ್ಲಿ ಅಧ್ಯಯನ’ ಮೇಳ: ಮಾಹಿತಿ, ವಿವರ ಪಡೆಯಿರಿ
ಚೆನ್ನೈ, ಆಗಸ್ಟ್, 12: ಯು.ಎಸ್.ಉನ್ನತ ಶಿಕ್ಷಣದ ಕುರಿತು ಯು.ಎಸ್.ಸರ್ಕಾರದ ಅಧಿಕೃತ ಮಾಹಿತಿ ಮೂಲ ಆಗಿರುವ Education USA, ದೇಶಾದ್ಯಂತ ಎಂಟು ಶಿಕ್ಷಣ ಮೇಳಗಳ ಸರಣಿಯನ್ನು ಆಯೋಜಿಸಲಿದೆ. ಆಗಸ್ಟ್ 16, 2024ರಂದು ಹೈದರಾಬಾದ್‌ನಲ್ಲಿ ಪ್ರಾರಂಭವಾಗಿ ಆಗಸ್ಟ್ 25, 2024ರಂದು ನವದೆಹಲಿಯಲ್ಲಿ ಮುಕ್ತಾಯಗೊಳ್ಳಲಿದೆ.
ಮೇಳವು ಬೆಂಗಳೂರಿನಲ್ಲಿ ಆಗಸ್ಟ್ 18 ರಂದು ಎಂ.ಜಿ ರಸ್ತೆಯಲ್ಲಿರುವ ತಾಜ್ ಹೋಟೆಲ್‌ನಲ್ಲಿ ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ ನಡೆಯಲಿದ್ದು, ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ 80ಕ್ಕೂ ಹೆಚ್ಚು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರತಿನಿಧಿಗಳನ್ನು ಭೇಟಿ ಮಾಡಲು ಅವಕಾಶವನ್ನು ಹೊಂದಿರುತ್ತಾರೆ. ಯಾವುದೇ ಭಾಗವಹಿಸುವಿಕೆ ಶುಲ್ಕವಿಲ್ಲ, ಆದರೆ ನೋಂದಣಿ ಅಗತ್ಯವಿದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗಾಗಿ https://bit.ly/EdUSAFair24Embಗೆ ಭೇಟಿ ನೀಡಬಹುದಾಗಿದೆ.

ಶಿಕ್ಷಣ ಮೇಳಗಳ ಮಹತ್ವವನ್ನು ಸಾರಿದ ಯು.ಎಸ್. ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು, "ಯುನೈಟೆಡ್ ಸ್ಟೇಟ್ಸ್ ನೀಡುವ ಅದ್ಭುತ ಶೈಕ್ಷಣಿಕ ಅವಕಾಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲು Education USA ಮೇಳ ಉತ್ತಮ ಮಾರ್ಗವಾಗಿದೆ. ನಿಮಗೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್‌ನಲ್ಲಿ ಆಸಕ್ತಿ ಇರಲಿ, ಇಲ್ಲವೇ ಕಲೆ ಅಥವಾ ಬ್ಯುಸಿನೆಸ್ ವಿಷಯಗಳು ನಿಮ್ಮ ಆಸಕ್ತಿಯ ವಿಷಯವಾಗಿರಲಿ, ನಿಮ್ಮ ಕನಸುಗಳನ್ನು ನನಸು ಮಾಡಲು ನಿಮಗೆ ಸಹಾಯ ಮಾಡುವ ಕಾರ್ಯಕ್ರಮ ಇದಾಗಿದೆ," ಎಂದು ಹೇಳಿದ್ದಾರೆ.
ಈ ಮೇಳಗಳು ಯು.ಎಸ್. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಬೃಹತ್ ಶ್ರೇಣಿಯ ಪ್ರತಿನಿಧಿಗಳನ್ನು ಭೇಟಿ ಮಾಡಲು ಮತ್ತು ಕಾಲೇಜು ಅರ್ಜಿ ಮತ್ತು ವೀಸಾ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆಯುವ ಅವಕಾಶವನ್ನು ನೀಡುತ್ತವೆ. ಪ್ರವೇಶ, ವಿದ್ಯಾರ್ಥಿ ವೇತನಗಳು, ಕ್ಯಾಂಪಸ್ ಜೀವನ ಮತ್ತು ಯುಎಸ್ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುವ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡುವ ನಿಮ್ಮ ಕನಸನ್ನು ನನಸಾಗಿಸಲು ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಬೆಂಬಲವನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದರು.
ಈ ಮೇಳದಲ್ಲಿ ಭಾಗವಹಿಸುವ ಯು.ಎಸ್.ಉನ್ನತ-ಶಿಕ್ಷಣ ಸಂಸ್ಥೆಗಳು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಪದವಿಪೂರ್ವ, ಪದವಿ ಮತ್ತು ಡಾಕ್ಟರೇಟ್ ಹಂತಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ಶ್ರೇಣಿಯನ್ನು ನೀಡುತ್ತವೆ. ಯು.ಎಸ್. ವಿಶ್ವವಿದ್ಯಾನಿಲಯಗಳು, Education USA ಸಲಹೆಗಾರರು ಮತ್ತು ಯು.ಎಸ್.ರಾಯಭಾರ ಕಚೇರಿಯ ಪ್ರತಿನಿಧಿಗಳೊಂದಿಗಿನ ಚರ್ಚೆಗಳು ವಿದ್ಯಾರ್ಥಿಗಳಿಗೆ ಯುಎಸ್ ಉನ್ನತ ಶಿಕ್ಷಣದ ಬಗ್ಗೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು, ಯುಎಸ್ ವಿದ್ಯಾರ್ಥಿ ವೀಸಾ ಅರ್ಜಿ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡುವ ಮತ್ತು ವಾಸಿಸುವ ಬಗ್ಗೆ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ.
Education USA ಮೇಳಗಳ ವೇಳಾಪಟ್ಟಿ
ದಿನಾಂಕ: ಆಗಸ್ಟ್ 16, ಶುಕ್ರವಾರ
ನಗರ: ಹೈದರಾಬಾದ್
ಸ್ಥಳ: ಹೋಟೆಲ್ ಐಟಿಸಿ ಕೊಹೆನೂರ್
ಸಮಯ: ಮಧ್ಯಾಹ್ನ 4:30ರಿಂದ 09ರ ವರೆಗೆ
ದಿನಾಂಕ: ಶನಿವಾರ, ಆಗಸ್ಟ್ 17
ನಗರ: ಚೆನ್ನೈ
ಸ್ಥಳ: ಹೋಟೆಲ್ ಹಿಲ್ಟನ್
ಸಮಯ: ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ
ದಿನಾಂಕ: ಭಾನುವಾರ, ಆಗಸ್ಟ್ 18
ನಗರ: ಬೆಂಗಳೂರು
ಸ್ಥಳ: ಹೋಟೆಲ್ ತಾಜ್, ಎಮ್.ಜಿ.ರಸ್ತೆ
ಸಮಯ: ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ
ದಿನಾಂಕ: ಸೋಮವಾರ, ಆಗಸ್ಟ್ 19
ನಗರ: ಕೊಲ್ಕತ್ತಾ
ಸ್ಥಳ: ದಿ ಗ್ರ್ಯಾಂಡ್ ಒಬೆರಾಯ್ ಹೋಟೆಲ್
ಸಮಯ: ಸಂಜೆ 7ರಿಂದ ರಾತ್ರಿ 10ರ ವರೆಗೆ
ದಿನಾಂಕ: ಬುಧವಾರ, ಆಗಸ್ಟ್ 21
ನಗರ: ಅಹ್ಮದಾಬಾದ್
ಸ್ಥಳ: ಹೋಟೆಲ್ ಹಯಾತ್ ವಸ್ತ್ರಾಪುರ
ಸಮಯ: ಸಂಜೆ 6ರಿಂದ ರಾತ್ರು 9ರ ವರೆಗೆ
ದಿನಾಂಕ: ಗುರುವಾರ, ಆಗಸ್ಟ್ 22
ನಗರ: ಪುಣೆ
ಸ್ಥಳ: ಹೋಟೆಲ್ ಶೆರಾಟನ್ ಗ್ರ್ಯಾಂಡ್ ಪುಣೆ ಬಂಡ್ ಗಾರ್ಡನ್
ಸಮಯ: ಸಂಜೆ 6ರಿಂದ ರಾತ್ರಿ 9ರ ವರೆಗೆ
ದಿನಾಂಕ: ಶನಿವಾರ, ಆಗಸ್ಟ್ 24
ನಗರ: ಮುಂಬೈ
ಸ್ಥಳ: ಹೋಟೆಲ್ ಸೇಂಟ್ ರೆಜಿಸ್
ಸಮಯ: ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ
ದಿನಾಂಕ: ಭಾನುವಾರ, ಆಗಸ್ಟ್ 25
ನಗರ: ನವದೆಹಲಿ
ಸ್ಥಳ: ದಿ ಲಲಿತ್ ಹೋಟೆಲ್
ಸಮಯ: ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ
ಭಾರತದಲ್ಲಿನ EducationUSA ಬಗ್ಗೆ ಮಾಹಿತಿ: EducationUSAಯು 175ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 430ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಲಹಾ ಕೇಂದ್ರಗಳ ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ನೆಟ್‌ವರ್ಕ್ ಆಗಿದೆ. ಭಾರತದಲ್ಲಿ, EducationUSAಯ ಸಲಹಾ ಸೇವೆಯನ್ನು ನವದೆಹಲಿ, ಚೆನ್ನೈ, ಕೋಲ್ಕತ್ತಾ, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ www.educationusa.in ಕ್ಲಿಕ್ಕಿಸಿ ಅಥವಾ [email protected] ಅನ್ನು ಸಂಪರ್ಕಿಸಿ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾನ್ಯತೆ ಪಡೆದ ನಂತರದ-ಸೆಕೆಂಡರಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಯುಎಸ್ ಉನ್ನತ ಶಿಕ್ಷಣದ ಕುರಿತು ನಿಖರವಾದ ಮತ್ತು ಸಮಗ್ರ ಮಾಹಿತಿಯನ್ನು EducationUSA ಒದಗಿಸುತ್ತದೆ.
Website: in.USEmbassy.gov/embassy-consulates/Chennai
Chennai.USConsulate: USConsulateChennai-USAndChennai-AmConGenChennai
Hemalatha Harapanahalli: Public Diplomacy, U.S. Consulate General Chennai
Email: [email protected] I Mobile: 7397599099, 44-2857-4274












Click it and Unblock the Notifications