ಮುಂದಿನ ಶೈಕ್ಷಣಿಕ ವರ್ಷದಿಂದ ಸೆಮಿಸ್ಟರ್ ಬದಲು ವಾರ್ಷಿಕ ಪಠ್ಯಕ್ರಮ

ಬೆಂಗಳೂರು, ಆಗಸ್ಟ್, 07 : ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಪ್ರಾಥಮಿಕ ಶಾಲೆಗಳಲ್ಲಿ ಸೆಮಿಸ್ಟರ್ ಪದ್ದತಿಯನ್ನು ತೆಗೆದುಹಾಕಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಮೊದಲು ಒಂದರಿಂದ 4ನೇ ತರಗತಿಯ ವರೆಗೆ ಕಿರಿಯ ಪ್ರಾಥಮಿಕ ಶಾಲೆ ಎಂದು ಕರೆಯಲಾಗಿತ್ತು. ಶಿಕ್ಷಣ ಇಲಾಖೆಯು ಜಾರಿಗೆ ತರಲಾದ ಇತ್ತೀಚಿನ ನಿಯಮಗಳ ಪ್ರಕಾರ 5ನೇ ತರಗತಿಯನ್ನು ಕಿರಿಯ ಪ್ರಾಥಮಿಕ ಶಾಲೆಯ ಪಟ್ಟಿಗೆ ಸೇರಿಸಿದ್ದು, 6ರಿಂದ 8ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲೆ ಎಂದಿರುವುದೇ ಈ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣವಾಗಿದೆ.[ರಾಜ್ಯ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಕೊಡುಗೆ]

Semester system on its way out for classes 5, 6 & 7

ಮೊದಲಿನಿಂದಲೂ 1ರಿಂದ 4ನೇ ತರಗತಿವರೆಗೆ ಹಾಗೂ ಫ್ರೌಢಶಾಲಾ ಹಂತದಲ್ಲಿ ವಾರ್ಷಿಕ ಪಠ್ಯಕ್ರಮವನ್ನು, 5 ರಿಂದ 7 ತರಗತಿವರೆಗೆ ಸೆಮಿಸ್ಟರ್ ಪದ್ದತಿ ಅನುಸರಿಸಲಾಗುತ್ತಿದೆ. ಆದರೆ ಇದೀಗ 5ನೇ ತರಗತಿಯನ್ನು ಕಿರಿಯ ಪ್ರಾಥಮಿಕ ಶಾಲೆಗಳ ಸಾಲಿಗೆ ಸೇರಿಸಿರುವುದರಿಂದ 1ರಿಂದ ಏಳನೇ ತರಗತಿವರೆಗೆ ವಾರ್ಷಿಕ ಪಠ್ಯಕ್ರಮ ಅನುಸರಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ

ಇಡೀ ವರ್ಷದ ಪಠ್ಯಕ್ರಮವನ್ನು ಕೇವಲ 6 ತಿಂಗಳಿನಲ್ಲಿಯೇ ಮುಗಿಸುವ ಸೆಮಿಸ್ಟರ್ ಪದ್ದತಿಯು ಹಲವಾರು ವಿದ್ಯಾರ್ಥಿಗಳಿಗೆ ಹೊರೆಯಾಗಿದ್ದು, ಮಾನಸಿಕ ಒತ್ತಡ ತಂದೊಡ್ಡಿದೆ. ಅಲ್ಲದೇ ಪ್ರತಿ ಆರು ತಿಂಗಳಿಗೆ ಪಠ್ಯ ಪುಸ್ತಕಗಳನ್ನು ಮುದ್ರಿಸಬೇಕಾಗಿರುವುದರಿಂದ ನಿರ್ವಹಣೆಯಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಮುಖ್ಯಸ್ಥರಾದ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+