ಐಎಂಎ ಹಗರಣ: 'ಹಲಾಲ್ ಬ್ಯಾಂಕಿಂಗ್' ನಲ್ಲಿ ಹೂಡಿದ್ದ 10 ಕೋಟಿ ವಶ
ಬೆಂಗಳೂರು, ಡಿಸೆಂಬರ್ 13: ಐಎಂಎ ಹಗರಣ ಸೂತ್ರಧಾರ ಮನ್ಸೂರ್ ಖಾನ್ 'ಇಸ್ಲಾಮಿಕ್ ಬ್ಯಾಂಕಿಂಗ್' ನಲ್ಲಿ ಹೂಡಿದ್ದ 10 ಕೋಟಿ ಹಣವನ್ನು ಇಡಿ ವಶಪಡಿಸಿಕೊಂಡಿದೆ.
ಮನ್ಸೂರ್ ಖಾನ್ ಹತ್ತು ಕೋಟಿ ಹಣವನ್ನು ಇಸ್ಲಾಮಿಕ್ ಬ್ಯಾಂಕಿಂಗ್ ಅಥವಾ 'ಹಲಾಲ್ ಹೂಡಿಕೆ' ವಿಧಾನಲ್ಲಿ ಹೂಡಿಕೆ ಮಾಡಿದ್ದ. ಈ ಹಣವನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಇಡಿ ವಶಪಡಿಸಿಕೊಂಡಿದೆ.
ಇಸ್ಲಾಂ ನಲ್ಲಿ ಬಡ್ಡಿ ಹಣ ಪಡೆಯುವುದು ನಿಷಿದ್ಧವಾಗಿರುವ ಕಾರಣ ಈ ರೀತಿಯ ಹಲಾಲ್ ಬ್ಯಾಂಕಿಂಗ್ ಅಥವಾ ಇಸ್ಲಾಮಿಕ್ ಬ್ಯಾಂಕಿಂಗ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಧರ್ಮಿಷ್ಠನಾಗಿದ್ದ ಐಎಂಎ ಮಾಲೀಕ ಮನ್ಸೂರ್ ಖಾನ್ ಇದರಲ್ಲಿಯೇ ಹೂಡಿಕೆ ಮಾಡಿದ್ದ.

ಸಾವಿರಾರು ಹೂಡಿಕೆದಾರರಿಂದ ಐಎಂಎ ಮಾಲೀಕ ಮನ್ಸೂರ್ ಖಾನ್ ಕೋಟ್ಯಂತರ ಹಣ ವಸೂಲಿ ಮಾಡಿದ್ದ. ಅಧಿಕ ಲಾಭ ಪಡೆಯುವ ಆಸೆಯಿಂದ ಕೋಟ್ಯಂತರ ಹಣ ಹೂಡಿದ್ದರು.
ಪ್ರಸ್ತುತ ಮನ್ಸೂರ್ ಖಾನ್ ಜೈಲಿನಲ್ಲಿದ್ದು, ಐಎಂಎ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಹಲವು ಐಎಎಸ್, ಐಪಿಎಸ್ ಅಧಿಕಾರಿಗಳು ಜೊತೆಗೆ ಶಾಸಕರುಗಳ ಹೆಸರುಗಳು ಈ ಹಗರಣದಲ್ಲಿ ಕೇಳಿಬಂದಿವೆ.












Click it and Unblock the Notifications